ಕರ್ನಾಟಕ ಜನಗಣತಿ 2025 – ಸಮೀಕ್ಷೆ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
2025ರ ಜನಗಣತಿ ಸಮೀಕ್ಷೆಗೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಇಲ್ಲಿವೆ.
KSPSTA DK
ಮಾಹಿತಿಯನ್ನು ಕೈಪಿಡಿಯಲ್ಲೂ ಮತ್ತೊಮ್ಮೆ ಪರಿಶೀಲಿಸಿ
1. ಆಂಡ್ರಾಯ್ಡ್ 8.0 ವರ್ಷನ್ ಮೊಬೈಲ್ ಇಲ್ಲದಿದ್ದರೆ ಏನು ಮಾಡಬೇಕು?
ಆಂಡ್ರಾಯ್ಡ್ 8.0 ವರ್ಷನ್ ಕಡ್ಡಾಯ. ಇಲ್ಲದಿದ್ದರೆ ಸೂಕ್ತ ಕ್ರಮದ ಬಗ್ಗೆ ಸ್ಪಷ್ಟೀಕರಣ ನೀಡಲಾಗಿಲ್ಲ.
2. ಕರ್ನಾಟಕ ರಾಜ್ಯದಲ್ಲಿ ನೋಂದಣಿಯಾಗಿರುವ, ಹೊರ ರಾಜ್ಯದಿಂದ ಮದುವೆಯಾಗಿ ಬಂದಿರುವ ಹೆಣ್ಣು ಮಕ್ಕಳನ್ನು ಮೊಬೈಲ್ ಆ್ಯಪ್‌ನಲ್ಲಿ ನೋಂದಣಿ ಮಾಡಬಹುದೇ?
ಆಧಾರ್ ವಿವರಗಳನ್ನು ಮಾತ್ರ ಉಪಯೋಗಿಸಲು ಅವಕಾಶವಿರುತ್ತದೆ.
3. ಸರ್ವೇ ಮಾಡುವಾಗ ಒಂದು ಮನೆಯ ಸಮೀಕ್ಷೆ ಅಪೂರ್ಣವಾಗಿದ್ದರೆ, ಮುಂದಿನ ಮನೆ ಸಮೀಕ್ಷೆ ಮಾಡಬಹುದೇ?
ಒಂದು ಕುಟುಂಬದ ಸಮೀಕ್ಷೆ ಪೂರ್ಣಗೊಂಡ ನಂತರವೇ ಮುಂದಿನ ಕುಟುಂಬದ ಸಮೀಕ್ಷೆ ಮಾಡಬೇಕು. ಆದರೆ, ಕೆಲವು ಕುಟುಂಬಗಳ ಮಾಹಿತಿ ಅಪೂರ್ಣವಾದರೆ 3 ಕುಟುಂಬಗಳವರೆಗೆ ಡ್ರಾಫ್ಟ್‌ನಲ್ಲಿ ಇಡಲು ಅವಕಾಶವಿದೆ.
4. ಮಾಸ್ಟರ್ ಟ್ರೈನರ್‌ಗಳ ಸೇವೆಯನ್ನು ಸಮೀಕ್ಷೆ ಮುಗಿಯುವವರೆಗೂ ಪಡೆಯಬಹುದೇ?
ಹೌದು, ಪಡೆಯಬಹುದು.
5. ಮಾಸ್ಟರ್ ಟ್ರೈನರ್, ಗಣತಿದಾರರು ಮತ್ತು ಮೇಲ್ವಿಚಾರಕರ ಸಂಭಾವನೆಯನ್ನು ಯಾವಾಗ ನಿಗದಿಪಡಿಸುತ್ತಾರೆ?
ಇದನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುತ್ತಿದೆ.
6. ಮನೆಪಟ್ಟಿಯಲ್ಲಿ ಮನೆಯ ಸಂಖ್ಯೆ ಇಲ್ಲದಿದ್ದರೆ ಏನು ಮಾಡಬೇಕು?
ಆ ಮನೆಯ ಜಿಯೋ ಕೋಆರ್ಡಿನೇಟ್‌ಗಳನ್ನು ತೆಗೆದುಕೊಂಡರೆ, UHID/ಸಮೀಕ್ಷಾ ಸಂಖ್ಯೆ ತಾನಾಗಿಯೇ ಜನರೇಟ್ ಆಗುತ್ತದೆ. ನಂತರ ಸಮೀಕ್ಷೆ ಮಾಡಬಹುದು.
7. ಆಧಾರ್‌ನಲ್ಲಿ ಹೊಸದಾಗಿ ಸೇರಿದ ಹೆಸರನ್ನು ಹೇಗೆ ಅಪ್‌ಡೇಟ್ ಮಾಡಬೇಕು?
ಸಮೀಕ್ಷೆಯ ಸಮಯದಲ್ಲಿ ಒದಗಿಸಿದ ಆಧಾರ್ ಕಾರ್ಡ್ ನಮೂದಿಸಬೇಕು.
8. ಆಧಾರ್ ಕಾರ್ಡ್/ಬಿಪಿಎಲ್/ಜಾತಿ ಪ್ರಮಾಣಪತ್ರ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು?
ಬಿಪಿಎಲ್, ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಲು ತಿಳಿಸುವುದು ಕಡ್ಡಾಯ.
9. ಅಲೆಮಾರಿ ಜನಾಂಗದಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಪಟ್ಟಿ ಯಾವುದೇ ದಾಖಲೆಗಳು ಇಲ್ಲದಿದ್ದರೆ ಏನು ಮಾಡಬೇಕು?
ಬಿಪಿಎಲ್, ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಲು ತಿಳಿಸುವುದು ಕಡ್ಡಾಯ.
10. ಪ್ರತಿ ಗಣತಿದಾರರಿಗೆ ಸಮೀಕ್ಷಾ ಕೈಪಿಡಿ 2025 ಒದಗಿಸುತ್ತೀರಾ?
ಹೌದು, ಒದಗಿಸಲಾಗುತ್ತಿದೆ.
11. ಪ್ರತಿ ಮನೆಗೆ ಭೇಟಿ ನೀಡಿ ಎಲ್ಲಾ ಜಾತಿಯ ಕುಟುಂಬಗಳನ್ನು ಸಮೀಕ್ಷೆ ಮಾಡಬೇಕೇ ಅಥವಾ ಕೇವಲ ಹಿಂದುಳಿದ ವರ್ಗಗಳ ಕುಟುಂಬಗಳನ್ನು ಮಾತ್ರವೇ?
ಹಿಂದುಳಿದ ವರ್ಗಗಳು, ಇತರೆ ಜಾತಿಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಸೇರಿದಂತೆ ಎಲ್ಲಾ ಕುಟುಂಬಗಳನ್ನು ಗುರುತಿಸಬೇಕು.
12. ಕುಟುಂಬದ ಮುಖ್ಯಸ್ಥರು ಮಹಿಳೆ ಅಥವಾ ವಿಧವೆಯಾಗಿದ್ದರೆ ಹೇಗೆ ಮಾಡಬೇಕು?
ಕುಟುಂಬದ ಮುಖ್ಯಸ್ಥೆ ಎಂದು ಪರಿಗಣಿಸಿ ಸಮೀಕ್ಷೆಯನ್ನು ಮುಂದುವರೆಸುವುದು.
13. ಸಮೀಕ್ಷೆಗೆ ಹೋದಾಗ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನೀಡದಿದ್ದರೆ ಏನು ಮಾಡಬೇಕು?
ಬಿಪಿಎಲ್, ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ಒದಗಿಸುವುದು ಕಡ್ಡಾಯ.
14. ಅಂತರ್ಜಾತಿ ವಿವಾಹದಲ್ಲಿ ಯಜಮಾನನ ಪತ್ನಿ ಮಕ್ಕಳ ಜಾತಿಯನ್ನು ತನ್ನ ಜಾತಿಯನ್ನೇ ನಮೂದಿಸಬೇಕೆಂದು ಹೇಳಿದರೆ ಏನು ಮಾಡಬೇಕು?
ಮಕ್ಕಳ ಜಾತಿಯು ತಂದೆಯ ಜಾತಿಯನ್ನು ಆಧರಿಸಿ ನಿರ್ಧರಿತವಾಗುತ್ತದೆ. ಹಾಗಾಗಿ, ಪತ್ನಿಯ ಜಾತಿಯ ಆಧಾರದ ಮೇಲೆ ಮಕ್ಕಳ ಜಾತಿಯನ್ನು ಪರಿಗಣಿಸಲು ಅವಕಾಶವಿರುವುದಿಲ್ಲ.
15. ದೇವದಾಸಿ ಕುಟುಂಬಗಳ ದೇವದಾಸಿಯರ ಮಕ್ಕಳ ಮಾಹಿತಿದಾರರು ಒದಗಿಸಿದ ಮಾಹಿತಿಯ ಪ್ರಕಾರ, ಶಾಲಾ ದಾಖಲಾತಿಗಳಲ್ಲಿರುವ ಜಾತಿಯನ್ನೇ ನಮೂದಿಸಬೇಕೇ?
ಹೌದು, ಮಾಹಿತಿದಾರರು ಒದಗಿಸಿದ ಮಾಹಿತಿ ಪ್ರಕಾರ ನಮೂದಿಸಬೇಕು. ಗೌರವದ ಉದ್ದೇಶದಿಂದ ತಂದೆಯ ಹೆಸರನ್ನು ನಮೂದಿಸಿದ ಪ್ರಕರಣಗಳಲ್ಲಿ ಗಣತಿಯ ಸಮಯದಲ್ಲಿ ತಂದೆಯ ಹೆಸರನ್ನು ನಮೂದಿಸಬಹುದು.
16. “ಕುಟುಂಬದ ಮುಖ್ಯಸ್ಥರು ತಮ್ಮ ಮೊಬೈಲ್ ಸಂಖ್ಯೆ ಕೊಡಲು ನಿರಾಕರಿಸಿದರೆ ಏನು ಮಾಡಬೇಕು?
ಸಂಖ್ಯೆಯನ್ನು ಒದಗಿಸಲು ಮನವೊಲಿಸಬೇಕು. ಆದರೂ ನಿರಾಕರಿಸಿದರೆ ಕೈಪಿಡಿಯ ಪುಟ 81ರಲ್ಲಿರುವ ಒಪ್ಪಿಗೆ ಪತ್ರದ ಮೇಲೆ ಸಲ್ಲಿಕೆ (Upload Submit) ಮಾಡಬೇಕು.
17. ಸಮೀಕ್ಷೆಯ ಸಮಯದಲ್ಲಿ ಕುಟುಂಬದ ಮುಖ್ಯಸ್ಥರು ಹಾಗೂ ಸದಸ್ಯರ ಹತ್ತಿರ ಯಾವುದೇ ಮೊಬೈಲ್ ಇಲ್ಲದಿದ್ದರೆ ಏನು ಮಾಡಬೇಕು?
ಸದರಿ ಕುಟುಂಬದ ಪರಿಚಯಸ್ಥರ ಮೊಬೈಲ್ ಸಂಖ್ಯೆ ಪಡೆದು ನಮೂದಿಸುವುದು.
18. ಸಮೀಕ್ಷೆಯ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ನೆಟ್ವರ್ಕ್ ಇಲ್ಲದಿದ್ದರೆ ಏನು ಮಾಡಬೇಕು?
ಆಫ್‌ಲೈನ್ ಮೋಡ್‌ನಲ್ಲಿ ಸಮೀಕ್ಷೆ ಮಾಡಿ ದಾಖಲಿಸಲು ಆ್ಯಪ್‌ನಲ್ಲಿ ಅವಕಾಶ ಇದೆ. ನೆಟ್ವರ್ಕ್ ಸಂಪರ್ಕ ಬಂದಾಗ ಮಾಹಿತಿ ತಾನಾಗಿಯೇ ಅಪ್‌ಲೋಡ್ ಆಗುತ್ತದೆ.
19. ತಪ್ಪಾದ ಮಾಹಿತಿಯನ್ನು ನಮೂದಿಸಿ ಸಲ್ಲಿಕೆ ಮಾಡಿದ ನಂತರ ಅದನ್ನು ಎಡಿಟ್ ಮಾಡಲು ಅವಕಾಶ ಇದೆಯೇ?
ಮಾಹಿತಿಯನ್ನು ಸಲ್ಲಿಕೆ ಮಾಡುವ ಮೊದಲು ತಿದ್ದುಪಡಿ ಮಾಡಬಹುದು. ಒಮ್ಮೆ ಸಲ್ಲಿಕೆ ಮಾಡಿದ ನಂತರ ತಿದ್ದುಪಡಿಗೆ ಅವಕಾಶವಿರುವುದಿಲ್ಲ.
20. ಜಿಲ್ಲೆಯ ಹೊರಗಿರುವ ವ್ಯಕ್ತಿಗಳ ಸಮೀಕ್ಷೆ ಮಾಡಬಹುದೇ?
ಹೌದು, ಜಿಲ್ಲೆಯ ಹೊರಗಿರುವ ಕುಟುಂಬಗಳ ಸಮೀಕ್ಷೆಯನ್ನು ಆಯಾ ಜಿಲ್ಲೆಗಳಲ್ಲಿ ಮಾಹಿತಿ ಒದಗಿಸಲು ಅವಕಾಶವಿದೆ.
KSPSTA DK
21. ಇತ್ತೀಚೆಗೆ ಮದುವೆಯಾದ ಹೆಣ್ಣು ಮಗಳ ತವರು ಮನೆ ಅಥವಾ ಗಂಡನ ಮನೆಯನ್ನು ಪರಿಗಣಿಸುವುದು ಹೇಗೆ?
ಗಂಡನ ಮನೆಯಲ್ಲಿ ನಡೆಯುವ ಸಮೀಕ್ಷೆಯಲ್ಲಿ ಮಾಹಿತಿ ಒದಗಿಸಬೇಕು.
22. ಒಂದು ಕುಟುಂಬದ ಸದಸ್ಯರು ಬೇರೆ ಬೇರೆ ಕಡೆ ವಾಸವಾಗಿದ್ದರೂ ಒಂದೇ ಪಡಿತರ ಚೀಟಿ ಹೊಂದಿದ್ದರೆ, ಹೇಗೆ ಸಮೀಕ್ಷೆ ಮಾಡಬೇಕು?
ಒಂದೇ ಪಡಿತರ ಚೀಟಿಯನ್ನು ಆಧರಿಸಿ ಒಂದೇ ಕಡೆ ಮಾಹಿತಿಯನ್ನು ನಮೂದಿಸಬೇಕು.
23. ಸಮೀಕ್ಷೆ ಮಾಡುವಾಗ ಮಾಹಿತಿದಾರರ ಜಾತಿಯ ಬಗ್ಗೆ ದಾಖಲೆ ಕೇಳಬೇಕೇ?
ಜಾತಿಯ ಬಗ್ಗೆ ದಾಖಲೆ ಪತ್ರವನ್ನು ಕಡ್ಡಾಯವಾಗಿ ಪಡೆಯುವ ಅಗತ್ಯವಿಲ್ಲ.
24. ಮೊಬೈಲ್ ಆ್ಯಪ್ ಕೆಲವು ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಆಗುತ್ತಿಲ್ಲ, ಏನು ಮಾಡಬೇಕು?
ಆಯಾ ಜಿಲ್ಲೆಯ ಡಿಪಿಎಂ ಸಿಬ್ಬಂದಿಯನ್ನು ಸಂಪರ್ಕಿಸಬೇಕು.
25. ಕುಟುಂಬದಲ್ಲಿ ಯಾರಾದರೂ ವಿಕಲಚೇತನರಿದ್ದರೆ, ಅವರನ್ನು ಸೇರ್ಪಡೆಗೊಳಿಸಲು ಅವಕಾಶವಿದೆಯೇ?
ಹೌದು, ಅವಕಾಶ ಇದೆ.
26. ಜನ್ಮ ದಿನಾಂಕದ ಬದಲು ಕೇವಲ ವಯಸ್ಸನ್ನು ನಮೂದಿಸಲು ಅವಕಾಶವಿದೆಯೇ?
ಈ ಸನ್ನಿವೇಶ ಉದ್ಭವಿಸುವುದಿಲ್ಲ.
27. ಸಮೀಕ್ಷಾ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಲು ಅವಕಾಶವಿದೆಯೇ?
ಇಲ್ಲ, ಅವಕಾಶವಿಲ್ಲ.
28. ಒಂದು ಮನೆಯ ವಿವರಗಳನ್ನು ಸಲ್ಲಿಕೆ ಮಾಡಿದ ನಂತರ, ಅದು ಸಲ್ಲಿಕೆಯಾಗಿರದಿದ್ದರೆ ಮುಂದಿನ ಕುಟುಂಬದ ಸಮೀಕ್ಷೆ ಮಾಡಬಹುದೇ?
ಒಂದು ಮನೆಯ ವಿವರಗಳು ಪೂರ್ಣವಾಗಿ ಸಲ್ಲಿಕೆ ಆದ ನಂತರವೇ ಮುಂದಿನ ಕುಟುಂಬದ ಸಮೀಕ್ಷೆ ಮಾಡಲು ಅವಕಾಶವಿದೆ.
29. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳ ಕೋಡ್ ಬೇಕಾಗಿದೆಯೇ?
ಹೌದು, ಅವು ಆ್ಯಪ್‌ನಲ್ಲಿ ಡ್ರಾಪ್-ಡೌನ್‌ನಲ್ಲಿ ಲಭ್ಯವಿದೆ.
30. ಕುಟುಂಬದಲ್ಲಿ ವಿವಾಹಿತ ಮಗಳು ಗಂಡನ ಮನೆಗೆ ಹೋಗಿದ್ದರೂ ಆಕೆಯ ಹೆಸರು ಪಡಿತರ ಚೀಟಿಯಲ್ಲಿದ್ದರೆ ವಿವರ ನಮೂದಿಸಬೇಕೇ?
ಹೌದು, ಪಡಿತರ ಚೀಟಿಯಲ್ಲಿ ಅವರ ಹೆಸರು ಇದ್ದಲ್ಲಿ ವಿವರವನ್ನು ನಮೂದಿಸಬೇಕು.
31. ಸಮೀಕ್ಷೆಯ ವೇಳೆ ಕೆಲವು ವಿವಾದಿತ ಜಾತಿಗಳು ಪರಿಶಿಷ್ಟ ಜಾತಿ ಎಂದು ಹೇಳಿದರೆ ಅದನ್ನು ಅಂತಿಮ ಎಂದು ಪರಿಗಣಿಸಬಹುದೇ?
ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಹೊಂದಿರದಿದ್ದರೂ, ಪಟ್ಟಿಯಲ್ಲಿರುವ ಜಾತಿಯನ್ನು ತಿಳಿಸಿದಲ್ಲಿ ಮಾತ್ರ ಅದನ್ನು ನಮೂದಿಸಬೇಕು.
KSPSTA DK
32. ಕುಟುಂಬದಲ್ಲಿ 18 ವರ್ಷ ಮೇಲ್ಪಟ್ಟವರು ಯಾರೂ ಇಲ್ಲದಿದ್ದರೆ ಯಾರಿಂದ ಮಾಹಿತಿ ಪಡೆಯಬೇಕು?
ಹಿರಿಯ ಸದಸ್ಯರಿಂದ ಮಾಹಿತಿಯನ್ನು ಪಡೆಯಬಹುದು. ಆದರೆ, ಬಿಪಿಎಲ್/ಆಧಾರ್ ಕಾರ್ಡ್/ಜಾತಿ ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ಒದಗಿಸುವುದು ಕಡ್ಡಾಯ.
33. ಮೊಬೈಲ್ ಆ್ಯಪ್‌ನಲ್ಲಿ ವಿಲೇಜ್ ಕೋಡ್ ಮತ್ತು ವಾರ್ಡ್ ನಂಬರ್ ಅನ್ನು ನಮೂದಿಸಬೇಕೇ?
ಹೌದು, ಇವು ಡ್ರಾಪ್-ಡೌನ್‌ನಲ್ಲಿ ಲಭ್ಯವಿದೆ.
34. ಕುಟುಂಬದಲ್ಲಿ ತಂದೆ ನಿಧನರಾಗಿ ತಾಯಿ ಮತ್ತು ಮಗ ಮಾತ್ರ ಇದ್ದರೆ, ತಾಯಿಯನ್ನು ಕುಟುಂಬದ ಮುಖ್ಯಸ್ಥರಾಗಿ ಪರಿಗಣಿಸಬಹುದೇ?
ಹೌದು, ಪರಿಗಣಿಸಬಹುದು.
35. ಪಡಿತರ ಚೀಟಿ ಇಲ್ಲದೆ ಆಧಾರ್ ಸಂಖ್ಯೆ ನಮೂದಿಸಿದರೂ ವಿವರಗಳು ಕಾಣಿಸದಿದ್ದರೆ ಏನು ಮಾಡಬೇಕು?
ಪ್ರತಿ ಸದಸ್ಯರ ಆಧಾರ್ ಸಂಖ್ಯೆ ನಮೂದಿಸಿದ ನಂತರ ಅವರ ಹೆಸರುಗಳನ್ನು ನಮೂದಿಸುವುದು.
36. ಮೇಲ್ವಿಚಾರಕರು ಗಣತಿದಾರರ 100% ಸರ್ವೆಯನ್ನು ಕ್ರಾಸ್ ಚೆಕ್ ಮಾಡಲು ಅವಕಾಶವಿದೆಯೇ?
ಇಲ್ಲ, ಮೇಲ್ವಿಚಾರಕರು 10% ಮನೆಗಳನ್ನು ಕ್ರಾಸ್ ಚೆಕ್ ಮಾಡಬಹುದು.
37. ಮೇಲ್ವಿಚಾರಕರು, ಸಮೀಕ್ಷೆದಾರರು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ಗೌರವಧನ ಪಾವತಿಸುವ ಬಗ್ಗೆ ಮಾಹಿತಿ ನೀಡಿ.
ಇದನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುತ್ತಿದೆ.
38. ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಇದ್ದರೆ ಹೇಗೆ ಸಮೀಕ್ಷೆ ಮಾಡಬೇಕು?
ಪಡಿತರ ಚೀಟಿವಾರು, ಪ್ರತ್ಯೇಕ ಕುಟುಂಬಗಳೆಂದು ಪರಿಗಣಿಸಿ ಸಮೀಕ್ಷೆ ನಡೆಸಬೇಕು.
39.ಆಫ್‌ಲೈನ್‌ನಲ್ಲಿ ಎಲ್ಲಾ ಪ್ರಶ್ನಾವಳಿಗಳು ತೆರೆಯುವ ವ್ಯವಸ್ಥೆ ಕಲ್ಪಿಸಲಾಗಿದೆಯೇ?
ಹೌದು, ಕಲ್ಪಿಸಲಾಗಿದೆ.
40. ಒಂದಕ್ಕಿಂತ ಹೆಚ್ಚು ಕಾರಣಕ್ಕಾಗಿ ಸಾಲ ಪಡೆದಿದ್ದರೆ ಹೇಗೆ ನಮೂದಿಸಬೇಕು?
ಬಹು ಆಯ್ಕೆಗೆ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
41. ಕೆಲಸದ ನಿಮಿತ್ತ ಮನೆಯಲ್ಲಿ ಇಲ್ಲದ ಸದಸ್ಯರ ಮಾಹಿತಿ ಪಡೆಯಬಹುದೇ?
ಹೌದು, ಕುಟುಂಬದ ಸದಸ್ಯರೇ ಮಾಹಿತಿ ಒದಗಿಸಬಹುದು.
42. ಆ್ಯಪ್‌ನಲ್ಲಿ ವಿವರಗಳನ್ನು ಭರ್ತಿ ಮಾಡುವಾಗ ಹೊಸ ಸದಸ್ಯರನ್ನು ಸೇರಿಸಲು ಅವಕಾಶವಿದೆಯೇ?
ನೈಜತೆಯನ್ನು ಪರಿಶೀಲಿಸಿ ಸೇರಿಸಬಹುದು.
43. ಮನೆಯ ಯಜಮಾನರು ಸಹಿ ಮಾಡಲು ಒಪ್ಪದಿದ್ದರೆ ಏನು ಮಾಡಬೇಕು?
ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಒಪ್ಪಿರುವುದಿಲ್ಲವೆಂದು ಸಮೀಕ್ಷೆದಾರರು ದೃಢೀಕರಿಸಿ ಅಪ್‌ಲೋಡ್ ಮಾಡುವುದು.
44. ಹೊರ ರಾಜ್ಯದವರು ಇಲ್ಲಿ ನೆಲೆಸಿ ಇಲ್ಲಿನ ಪಡಿತರ ಚೀಟಿ/ಆಧಾರ್ ಸಂಖ್ಯೆ ಹೊಂದಿದ್ದರೆ ಅವರನ್ನು ಸಮೀಕ್ಷೆಗೆ ಒಳಪಡಿಸಬಹುದೇ?
ಕರ್ನಾಟಕ ರಾಜ್ಯದಲ್ಲಿ ನೋಂದಣಿಯಾಗಿರುವ ಆಧಾರ್ ವಿವರಗಳನ್ನು ಮಾತ್ರ ಉಪಯೋಗಿಸಲು ಅವಕಾಶವಿರುತ್ತದೆ.
45. ಮಾಹಿತಿದಾರರ ಫೋಟೊ ತೆಗೆಯಲು ಅನುಮತಿ ನಿರಾಕರಿಸಿದರೆ ಏನು ಮಾಡಬೇಕು?
ಫೋಟೊ ತೆಗೆಯಲು ಒಪ್ಪಿಸುವುದು. ಒಂದು ವೇಳೆ ನಿರಾಕರಿಸಿದ್ದಲ್ಲಿ ಕಡ್ಡಾಯಗೊಳಿಸಲಾದ ಬಿಪಿಎಲ್/ಆಧಾರ್ ಕಾರ್ಡ್/ಜಾತಿ ಪ್ರಮಾಣಪತ್ರ ದಾಖಲೆಗಳನ್ನು ಪಡೆದು ಸಮೀಕ್ಷೆಯನ್ನು ಮುಂದುವರೆಸುವುದು.
KSPSTA DK
46. ಒಂದು ಬಾರಿ ಮಾಹಿತಿಯನ್ನು ಅಪ್‌ಲೋಡ್ ಮಾಡಿದ ನಂತರ ಕುಟುಂಬದ ಸದಸ್ಯರು ತಪ್ಪುಗಳನ್ನು ಸರಿಪಡಿಸಲು ಒತ್ತಾಯಿಸಿದರೆ ಏನು ಮಾಡಬೇಕು?
ಒಂದು ಬಾರಿ ಮಾಹಿತಿ ಅಪ್‌ಡೇಟ್ ಮಾಡಿದ ನಂತರ ಅದನ್ನು ಸರಿಪಡಿಸಲು ಅಥವಾ ಎಡಿಟ್ ಮಾಡಲು ಅವಕಾಶ ಇಲ್ಲ.
47. ಸರ್ಕಾರಿ ಗೃಹಲಕ್ಷ್ಮೀ ಯೋಜನೆಯಡಿ ಗೃಹಿಣಿಯರಿಗೆ ನೀಡುವ ಮಾಸಿಕ 2,000 ರೂ. ಅಥವಾ ವಾರ್ಷಿಕ 24,000 ರೂ. ಆದಾಯವನ್ನು ಕುಟುಂಬದ ವಾರ್ಷಿಕ ಆದಾಯಕ್ಕೆ ಸೇರಿಸಬೇಕೇ?
ಇಲ್ಲ, ಅಗತ್ಯ ಇಲ್ಲ.
48. ಸರ್ಕಾರದಿಂದ ಪಡೆದ ಸವಲತ್ತುಗಳಲ್ಲಿ (ಉದಾ: ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಗೃಹಲಕ್ಷ್ಮಿ ಯೋಜನೆ) ಬಹು ಆಯ್ಕೆ ಇರುವುದಿಲ್ಲ. ಇದಕ್ಕೆ ವಿವರಣೆ ತಿಳಿಸಿ.
ಬಹು ಆಯ್ಕೆಗೆ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
49. ಇತರೆ (Specify) ಇರುವಂತಹ ಕಾಲಂಗಳಿಗೆ ವಿವರವನ್ನು ಭರ್ತಿ ಮಾಡುವಾಗ ಕನ್ನಡ ಅಕ್ಷರಗಳನ್ನು ಉಪಯೋಗಿಸಬಹುದೇ ಅಥವಾ ಆಂಗ್ಲಭಾಷೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕೇ?
ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ವಿವರಗಳನ್ನು ನಮೂದಿಸಲು ಅವಕಾಶ ಇದೆ.
ಸಹಾಯವಾಣಿ:
ಯಾವುದೇ ಸಮಸ್ಯೆಗಳಿಗೆ ಅಥವಾ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು:
ರಾಜ್ಯಮಟ್ಟದ ಸಹಾಯವಾಣಿ (ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ): 8050770004
ತಾಂತ್ರಿಕ (ಮೊಬೈಲ್ ಆ್ಯಪ್) ವಿಷಯಗಳಿಗಾಗಿಯೂ ಇದೇ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಮಾಹಿತಿಯನ್ನು ಮತ್ತೊಮ್ಮೆ ಕೈಪಿಡಿಯಲ್ಲಿ ಪರಿಶೀಲಿಸಿ
ಟೀಮ್ KSPSTA DK