ರಾಜ್ಯ ಮಟ್ಟದ ಶಿಕ್ಷಕ ದಿನಾಚರಣೆಯನ್ನು live ವೀಕ್ಷಿಸಿ

ರಾಜ್ಯ ಮಟ್ಟದ ಶಿಕ್ಷಕ ದಿನಾಚರಣೆಯನ್ನು live ವೀಕ್ಷಿಸಿ


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು

ರಾಜ್ಯದ ಸಮಸ್ತ ಗುರುಬಳಗದ ಗಮನಕ್ಕೆ

ಇಂದು ರಾಜ್ಯಾದ್ಯಂತ ಶಿಕ್ಷಕರ ದಿನೋತ್ಸವವನ್ನು ಜಿಲ್ಲೆ, ತಾಲ್ಲೂಕು, ಶಾಲೆಗಳಲ್ಲಿ ಆಚರಿಸುತ್ತೀದ್ದೀರಿ..ಅದರಂತೆ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಇಂದು ಮಧ್ಯಾನ್ಹ 03 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಜರುಗಲಿದೆ.
ಕಾರ್ಯಕ್ರಮವನ್ನು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವರಾದ ಸನ್ಮಾನ್ಯಶ್ರೀ ಬಿ ಸಿ‌ ನಾಗೇಶ್ ರವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ನೇರಪ್ರಸಾರವು “ಚಂದನ” ವಾಹಿನಿಯಲ್ಲಿ ಹಾಗೂ “ಯೂಟ್ಯೂಬ್,ಫೇಸಬುಕ್ ಲೈವ್,ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್” ನಲ್ಲಿ ಮಧ್ಯಾನ್ಹ 03 ಗಂಟೆಗೆ ನೇರಪ್ರಸಾರವಾಗಲಿದೆ.
ಕಾರಣ ರಾಜ್ಯದ ಲಕ್ಷಾಂತರ ಗುರು ಬಳಗವು ಈ‌ ಕಾರ್ಯಕ್ರಮವನ್ನು ‌ವೀಕ್ಷಿಸಲು ಈ ಮೂಲಕ ಕೋರುತ್ತೇವೆ..


ಇಂದ
ಶಂಭುಲಿಂಗನಗೌಡ ಪಾಟೀಲ
ರಾಜ್ಯಾಧ್ಯಕ್ಷರು
ಚಂದ್ರಶೇಖರ ನುಗ್ಲಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಹಾಗೂ ರಾಜ್ಯ ಪದಾಧಿಕಾರಿಗಳು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು

Sharing Is Caring:

Leave a Comment