ಮಕ್ಕಳ ಜಗಲಿ ಕಲಾ ಪ್ರಶಸ್ತಿ-2021 ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆ

ಮಕ್ಕಳ ಜಗಲಿ ಕಲಾ ಪ್ರಶಸ್ತಿ-2021
ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆ

makkalajagali
makkalajagali

ಮಕ್ಕಳ ಜಗಲಿ – ಸಣ್ಣ ಮಕ್ಕಳಿಂದ ಪಿಯುಸಿವರೆಗಿನ ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ. ಕೋವಿಡ್
ಕಾರಣದಿಂದ ಶಾಲೆಗಳು ತೆರೆಯದೆ ಮಕ್ಕಳು ಮನೆಯಲ್ಲಿ ಉಳಿದಂತಹ ಸಂದರ್ಭದಲ್ಲಿ , ಮಕ್ಕಳ ಕಲಿಕಾ
ಚಟುವಟಿಕೆಗೊಂದು ವೇದಿಕೆ ಅನಿವಾರ್ಯವಾಗಿತ್ತು. ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ
ಬೆಂಬಲ ಕೊಡುವ ನಿಟ್ಟಿನಲ್ಲಿ ಹಾಗೂ ನಿರಂತರವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಮಕ್ಕಳ
ಜಗಲಿ ಆರಂಭವಾಯಿತು. ಮುಂಬರುವ ನವಂಬರ್ 14- ಮಕ್ಕಳ ಜಗಲಿ ಗೆ ಒಂದು ವರ್ಷದ ಸಂಭ್ರಮ…. ಈ
ಸವಿನೆನಪಿಗೆ ಮಕ್ಕಳ ಜಗಲಿ ಬಳಗವು ಮಕ್ಕಳಿಗಾಗಿ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲು
ನಿರ್ಧರಿಸಿದೆ.
ಅಂಚೆ ಮೂಲಕ ನಡೆಸಲ್ಪಡುವ ಈ ಚಿತ್ರಕಲಾ ಸ್ಪರ್ಧೆಯು ಒಟ್ಟು ನಾಲ್ಕು ವಿಭಾಗಗಳಲ್ಲಿ
ನಡೆಯಲಿರುವುದು.1ರಿಂದ 3ನೇ ತರಗತಿ ಮತ್ತು 4ರಿಂದ 6ನೇ ತರಗತಿಯ ವಿಭಾಗದವರಿಗೆ ಐಚ್ಛಿಕ ವಿಷಯ,
7ರಿಂದ 9 ನೇ ತರಗತಿ ವಿಭಾಗದವರಿಗೆ ನನ್ನ ನೆಚ್ಚಿನ ಹಬ್ಬ ಮತ್ತು 10,11,12 ತರಗತಿಯವರಿಗೆ ನನ್ನ ಊರಿನ
ಜಾನಪದ ವೈಶಿಷ್ಟ್ಯ ಕುರಿತು A4 ಅಳತೆಯ ಡ್ರಾಯಿಂಗ್ ಹಾಳೆಯಲ್ಲಿ ಚಿತ್ರ ಬಿಡಿಸಲು ಅವಕಾಶ ನೀಡಿದೆ. ಚಿತ್ರ
ರಚಿಸಿದ ವಿದ್ಯಾರ್ಥಿಗಳು ಶಾಲಾ ಮುಖ್ಯ ಶಿಕ್ಷಕರಿಂದ ಅಥವಾ ಶಾಲೆ ತೆರೆಯದೆ ಇದ್ದ ಸಂದರ್ಭದಲ್ಲಿ ಮಕ್ಕಳ
ಪೋಷಕರಿಂದ ಚಿತ್ರಕಲಾ ಕೃತಿಯನ್ನು ದೃಢೀಕರಿಸಿ ಕಳುಹಿಸಿ ಕೊಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ
www.makkalajagall.com ವೆಬ್ ಸೈಟಲ್ಲಿ ಮಾಹಿತಿ ಪಡೆಯಬಹುದು.

Sharing Is Caring:

2 thoughts on “ಮಕ್ಕಳ ಜಗಲಿ ಕಲಾ ಪ್ರಶಸ್ತಿ-2021 ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆ”

Leave a Comment