ಭಾರತ ಸರ್ಕಾರದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಘೋಷಿಸಿದಂತೆ ಭಾರತ ಸರ್ಕಾರವು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರತಿ ವರ್ಷ ಆಗಸ್ಟ್ 23ರಂದು ಚಂದ್ರಯಾನ-3 ಮಿಷನ್ ನ ಸಾಧನೆಯ ಹಿನ್ನೆಲೆಯಲ್ಲಿ ಆಚರಿಸುವ ಕುರಿತಂತೆ ತಿಳಿಸಲಾಗಿದೆ. ರಾಷ್ಟ್ರದ ಯುವಕರನ್ನು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅದರ ಅನ್ವಯಗಳ ಕಡೆಗೆ ತೊಡಗಿಸಿಕೊಳ್ಳಲು ಮತ್ತು ಪ್ರೇರೇಪಿಸಲು ಉದ್ದೇಶಿಸಲಾಗಿದೆ. ” ಈ ಸಾಲಿನ ರಾಷ್ಟ್ರೀಯ ಬಾಹ್ಯಾಕಾಶ ದಿನದ ಥೀಮ್” “touching lives while touching the moon” ಎಂದಾಗಿರುತ್ತದೆ.
ಕೆಳಕಂಡ ಅಂಶಗಳಂತೆ ಶಾಲೆಗಳ, ತರಬೇತಿ ಮತ್ತು ಬೋಧನಾ ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸುವುದು
“Bharath on the moon ” portal ನಲ್ಲಿ ಚಂದ್ರಯಾನ chandrayana utsav special modules ಕುರಿತ 30 ನಿಮಿಷಗಳ ವಿಶೇಷ ವೀಡಿಯೋ ಲಭ್ಯವಿರುತ್ತದೆ. ಸದರಿ ವೀಡಿಯೋ PM e Vidya DTH TV channels, Ncert official you tube channel and NCERT websiteನಲ್ಲಿ ಸಹ ಲಭ್ಯವಿರುತ್ತದೆ.
ಚಂದ್ರಯಾನ ಕುರಿತು ಮಾಹಿತಿಯುಳ್ಳ ನಿರ್ದಿಷ್ಟ 10 ಮಾಡ್ಯುಲ್ ಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದ್ದು 13 ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ.
ಚಂದ್ರಯಾನ ಮತ್ತು ಆದಿತ್ಯ ಮುಂತಾದ ಬಾಹ್ಯಾಕಾಶ ಸಂಬಂಧಿತ ಸಾಧನೆಗಳ ಕುರಿತು ನಿರ್ದಿಷ್ಟ ಚಟುವಟಿಕೆಗಳನ್ನು ದಿನಾಂಕ 22/08/2024 ಮತ್ತು 23/08/2024 ರಂದು ಕ್ರಮವಾಗಿ ಶಾಲೆಗಳಲ್ಲಿ ಕ್ರಮವಾಗಿ ಆಯೋಜಿಸಲು ತಿಳಿಸಿದೆ.
ಕಳೆದ ಸಾಲಿನಲ್ಲಿ ಪ್ರಾರಂಭಿಸಲಾಗಿರುವ Bharath on the moon portal ಅಭಿವೃದ್ಧಿಪಡಿಸಲಾಗಿದ್ದು ವಿದ್ಯಾರ್ಥಿಗಳು ನೋಂದಾಯಿಸಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ತಿಳಿಸಿದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಚಂದ್ರಯಾನ -3 ಮತ್ತು ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ, ಚಿತ್ರಕಲೆ ಹಾಗೂ ಇತರ ಸ್ಪರ್ಧೆಗಳನ್ನು ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು.
ಡಯಟ್ ಗಳಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನ” ಆಚರಿಸುವ ಮೂಲಕ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಮೆಲ್ಲ ಮೇಲ್ವಿಚಾರನಾ ಅಧಿಕಾರಿಗಳಲ್ಲಿ ಅರಿಯು ಮೂಡಿಸಿ ಆ ಮೂಲಕ ವ್ಯಾಪಕ ಪ್ರಚಾರ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ವರದಿಯನ್ನು ಕಚೇರಿಗೆ ನೀಡುವಂತೆ ಉಪನಿರ್ದೇಶಕರು ಡಿ.ಎಸ್.ಇ.ಆರ್.ಟಿ. ಬೆಂಗಳೂರು ಇವರು ಸುತ್ತೋಲೆಯಲ್ಲಿ ತಿಳಿಸಿರುತ್ತಾರೆ.