ಜವಹಾರ್ ಲಾಲ್ ನೆಹರು ತಾರಾಲಯ, ಬೆಂಗಳೂರು
ರವರು 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ
ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. ಸದರಿ ಸ್ಪರ್ಧೆಗೆ ಮೈಸೂರ್ ಸೈನ್ಸ್ ಫೌಂಡೇಷನ್, ಮೈಸೂರು
ವಿಭಾಗದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದೆ.
ಇದು ಖಗೋಳ ಮತ್ತು ಬಾಹ್ಯಾಕಾಶ ವಿಜ್ಞಾನ ಕುರಿತ ರಸಪ್ರಶ್ನೆಯಾಗಿದ್ದು, ಕೇವಲ
ಅಂಕಿಅಂಶಗಳು ಹಾಗೂ ಖಗೋಳಿಯ ಘಟನೆಗಳಿಗೆ ಸೀಮಿತವಾಗದೆ ಪರಿಕಲ್ಪನೆಗಳ ತಿಳುವಳಿಕೆ,
ವೈಜ್ಞಾನಿಕ ತತ್ವಗಳ ಮೂಲಕ ಸಮಸ್ಯೆ ಬಿಡಿಸುವುದು ಮತ್ತು ಬಳಸುವ ಪರೀಕ್ಷೆಯಾಗಿರುತ್ತದೆ.
ಹಂತ 1: ನೊಂದಾಯಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಬಹುಆಯ್ಕೆ ಮಾದರಿ ರಸಪ್ರಶ್ನೆ
ಸ್ಪರ್ಧೆ, 70ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಇ-ಪ್ರಶಂಸಾ ಪತ್ರ ನೀಡಲಾಗುವುದು.
ಅತಿ ಹೆಚ್ಚು ಅಂಕ ಗಳಿಸಿದ ವಿಭಾಗದ 100 ವಿದ್ಯಾರ್ಥಿಗಳು ಎರಡನೆ ಹಂತಕ್ಕೆ ಆಯ್ಕೆ, ಆಯ್ಕೆಯಾದ
ಎಲ್ಲರಿಗು ಬಹುಮಾನ ಮತ್ತು ಅಭಿನಂದನಾ ಪತ್ರ ನೀಡಲಾಗುವುದು.
ಹಂತ 2: ಲಿಖಿತ ರಸಪ್ರಶ್ನೆಯನ್ನು ವಿಭಾಗದ ಒಂದು ಜಿಲ್ಲೆಯಲ್ಲಿ ಏರ್ಪಡಿಸಲಾಗುವುದು. ಹೆಚ್ಚು
ಅಂಕಗಳಿಸಿದ 16 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆ ಆಗುತ್ತಾರೆ.
ಹಂತ 3:
16 ವಿದ್ಯಾರ್ಥಿಗಳಿಗೆ ಮೌಖಿಕ ರಸಪ್ರಶ್ನೆ ಸ್ಪರ್ಧೆ ನಡೆಸಿ ಒಬ್ಬ ವಿದ್ಯಾರ್ಥಿಯನ್ನು ರಾಜ್ಯ ಮಟ್ಟಕ್ಕೆ
ಆಯ್ಕೆ ಮಾಡಲಾಗುವುದು, ಉಳಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು.
ರಾಜ್ಯ ಮಟ್ಟದ ಬಹುಮಾನ :
ಮೊದಲ ಬಹುಮಾನ: ರೂ 10,000
ದ್ವಿತೀಯ ಬಹುಮಾನ : ರೂ 7,500
ತೃತೀಯ ಬಹುಮಾನ : ರೂ 5000 (ಇಬ್ಬರಿಗೆ)
ಸ್ಪರ್ಧೆಗೆ ನೊಂದಾಯಿಸಲು ಕಡೆಯದಿನ : 24-06-2022
ನೊಂದಾಯಿಸಲು ಗೂಗಲ್ ಫಾರಂ ಲಿಂಕ್ https://forms.gle/MXseSe38u8vulndi7