ಸರ್ಕಾರಿ ಶಾಲೆಗಳಲ್ಲಿ 2023-24ನೇ ಸಾಲಿನ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ

ಸ್ವಚ್ಛತೆಯ ನಿರ್ವಹಣೆಯ ಬಗ್ಗೆ ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆಯ ಬಗ್ಗೆ ನೂತನ ಆದೇಶ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

2023-24ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ
ಯೋಜನೆಯನ್ನು ಗರಿಷ್ಟ ಪ್ರಮಾಣದ ಶಾಲೆಗಳಿಗೆ ವಿಸ್ತರಿಸಲು ಶಿಕ್ಷಣ ಇಲಾಖೆಯ ಅನುದಾನದೊಂದಿಗೆ ಆಯಾ
ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮಾಗಾಂಧಿ ನರೇಗಾ ಯೋಜನೆ ಹಾಗೂ ನಗರ ವ್ಯಾಪ್ತಿಯ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲು ರಾಜ್ಯ ವಲಯದಿಂದ ಶೌಚಾಲಯ ನಿರ್ಮಾಣಕ್ಕೆ ಲೆಕ್ಕ ಶೀರ್ಷಿಕೆ:4202-01-201-1-07-139ರಲ್ಲಿ ಅನುಮೋದನೆಯಾದ ರೂ.3000.00 ಲಕ್ಷಗಳ ಅನುದಾನದಲ್ಲಿ ಉಲ್ಲೇಖ (1) ರನ್ವಯ 2000.00 ಲಕ್ಷಗಳನ್ನು ಸಂಬಂಧಿಸಿದ ಜಿಲ್ಲೆಗಳಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಉಲ್ಲೇಖ (2) ರಲ್ಲಿ ಸದರಿ ಲೆಕ್ಕ ಶೀರ್ಷಿಕೆಯಲ್ಲಿ ರೂ 250.00 ಲಕ್ಷಗಳು ಬಿಡುಗಡೆಯಾಗಿರುತ್ತದೆ ಹೆಚ್ಚಿನ ಶೌಚಾಲಯ ಘಟಕ ಅನುಮೋದನೆಯಾಗಿರುವ ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ಉತ್ತರ ಕನ್ನಡ ದಕ್ಷಿಣ ಕನ್ನಡ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕೋಡಿ ಜಿಲ್ಲೆಗಳ ಉಪನಿರ್ದೇಶಕರಿಗೆ ತಲಾ ರೂ 50.00 ಲಕ್ಷಗಳಂತೆ ಬಿಡುಗಡೆ ಮಾಡಿದೆ.

2023-24ನೇ ಸಾಲಿಗೆ ಲೆಕ್ಕ ಶೀರ್ಷಿಕೆ: 4202-01- 2011-07-139 ರಡಿಯಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೌಚಾಲಯ ನಿರ್ಮಾಣ ಕಾಮಗಾರಿಗೆ ರೂ.250.00 ಲಕ್ಷಗಳ ಅನುದಾನವನ್ನು ಅನುಬಂಧ-1ರಲ್ಲಿ ವಿವರಿಸಿರುವಂತೆ ಉತ್ತರ ಕನ್ನಡ, ಚಿತ್ರದುರ್ಗ, ದಕ್ಷಿಣ
ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕೋಡಿ ಜಿಲ್ಲೆಗಳ ಉಪನಿರ್ದೇಶಕರಿಗೆ (ಆಡಳಿತ) “ಖಜಾನೆ-2”
ಮೂಲಕ ಬಿಡುಗಡೆ ಮಾಡಿದೆ.
ನರೇಗಾ ಯೋಜನೆಗೆ ಸಂಬಂಧಿಸಿದ ಅನುದಾನವನ್ನು ಸಂಬಂಧಪಟ್ಟ ಉಪನಿರ್ದೇಶಕರು(ಆಡಳಿತ) ಕೂಡಲೇ
ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಬಿಡುಗಡೆ ಮಾಡುವುದು ಹಾಗೂ ಸಂಬಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೆ ಸಂಬಂಧಿಸಿದ ಗ್ರಾಮಪಂಚಾಯತ್‌ಗೆ ಬಿಡುಗಡೆ ಮಾಡಿ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ.

ನಗರ ಪ್ರದೇಶಗಳಲ್ಲಿ ಶೌಚಾಲಯಗಳ ಕಾಮಗಾರಿ ಕೈಗೊಳ್ಳುವ ಜಿಲ್ಲೆಗಳು ಪಿ.ಆರ್.ಇ.ಡಿಯನ್ನು ಅನುಷ್ಠಾನ
ಏಜೆನ್ಸಿಯನ್ನಾಗಿ ನಿಗದಿಪಡಿಸಿಕೊಂಡು ಕಾಮಗಾರಿ ಅನುಷ್ಠಾನಗೊಳಿಸುವುದು, ಈ ಸೂಚನೆಯು ಉಲ್ಲೇಖ(1) ರಲ್ಲಿ ಲೆಕ್ಕ ಶೀರ್ಷಿಕೆ:4202-01-201-1-07-139ರಲ್ಲಿ ರೂ 2000.00 ಲಕ್ಷಗಳನ್ನು ಬಿಡುಗಡೆ ಮಾಡಿದ ಅನುದಾನಕ್ಕೂ ಅನ್ವಯಿಸುತ್ತದೆ.

ಅನುಮೋದಿಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಚಲಿತ ಎಲ್ಲಾ ಕಾಮಗಾರಿ ಹಾಗೂ ಖರೀದಿ
ನಿಯಮಗಳನ್ನು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ-1999 ಹಾಗೂ
ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಮತ್ತು ಉಲ್ಲೇಖಗಳಲ್ಲಿರುವ ಎಲ್ಲಾ ಆದೇಶಗಳಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕ್ರಮಕೈಗೊಳ್ಳಲು ಸೂಚಿಸಿದೆ.

WhatsApp Group Join Now
Telegram Group Join Now
Sharing Is Caring:

Leave a Comment