ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳ ರಜಾ ಅವಧಿ, ಶಾಲೆ ಮರು ಆರಂಭ ದಿನಾಂಕ ಘೋಷಣೆ

WhatsApp Group Join Now
Telegram Group Join Now

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದ್ದು, ಪ್ರಸಕ್ತ‌ ಸನ್ನಿವೇಶವನ್ನು ಗಮನದಲ್ಲಿರಿಸಿ 2020-21 ನೇ ಸಾಲಿನ ರಜಾವಧಿಯನ್ನು ಪರಿಷ್ಕರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೂನ್ 14ರವರೆಗೆ ರಜೆ ನೀಡಲಾಗಿದ್ದು, ಜೂನ್ 15ರಿಂದ 2021-22 ನೇ ಸಾಲಿನ ಶಾಲೆಗಳು ಆರಂಭವಾಗಲಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೇ 31ರವರೆಗೆ ರಜೆ ನೀಡಲಾಗಿದೆ.

ಪ್ರೌಢಶಾಲಾ‌ ಶಿಕ್ಷಕರು ರಜೆ ಅವಧಿಯಲ್ಲಿ‌ ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನ ಹರಿಸಬೇಕು, ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಅವರ ಕಲಿಕೆಗೆ ಪ್ರೇರೇಪಿಸಬೇಕು ಎಂದು ಇಲಾಖೆಯ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಜೂನ್ 1ರಿಂದ 14 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪುನರ್ಮನನ ತರಗತಿಗಳು ನಡೆಯಲಿವೆ. ಜೂನ್ 15ರಿಂದ  8-10 ನೇ ತರಗತಿಗಳು‌ ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ.

ಬೇಸಿಗೆ ರಜೆ ಬಗ್ಗೆ ಮಾಹಿತಿ

WhatsApp Group Join Now
Telegram Group Join Now
Sharing Is Caring:

Leave a Comment