ಶಾಲಾ ಶಿಕ್ಷಣ ಇಲಾಖೆಯ ಜಾಲತಾಣವಾದ schooleducation.gov.in ನಲ್ಲಿ ಉಚಿತ ವಿದ್ಯುತ್ ಸಂಪರ್ಕಕ್ಕೆ ಮಾಹಿತಿ ನಮೂದಿಸಲು ಇಲ್ಲಿ ಕ್ಲಿಕ್ ಮಾಡಿ ಎಂಬ ಸ್ಕ್ರಾಲ್ ಲಿಂಕನ್ನು ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಲು ಸದರಿ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು. ಈ ಲಿಂಕ್ ಮೇಲೆ ಲಿಂಕ್ ಮಾಡಿದ ತಕ್ಷಣ ಸೇವಾ ಸಿಂಧು ಪೋರ್ಟಲ್ ನ ಪೇಜ್ ತೆರೆದುಕೊಳ್ಳುತ್ತದೆ ಈ ವೆಬ್ ಪೇಜ್ ನ ಮುಖಪುಟದಲ್ಲಿ ಈ ಕೆಳಕಂಡ ಕ್ರಮಗಳನ್ನು ಶಾಲೆಯ ಮುಖ್ಯ ಶಿಕ್ಷಕರು ನಿರ್ವಹಿಸಬೇಕಾಗುತ್ತದೆ.
- ಸಂಬಂಧಪಟ್ಟ ಸರಕಾರಿ ಶಾಲೆಯ ಯುಡೈಸಂಖ್ಯೆಯನ್ನು ನಿಗದಿತ ಸ್ಥಳದಲ್ಲಿ ನಮೂದಿಸಿದಾಗ ಶಾಲೆಯ ಹೆಸರು ವಿಳಾಸ ಮತ್ತು ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ ಹಾಗೂ ಶಾಲೆಗೆ ಸಂಬಂಧಿಸಿದ ವಿವರಗಳು ಪ್ರದರ್ಶಿತಗೊಳ್ಳುತ್ತವೆ ಈ ವಿವರಗಳು ತಮ್ಮ ಕಚೇರಿಗೆ ಸಂಬಂಧಿಸಿದ ಎಂದು ಕಾತರಿಪಡಿಸಿಕೊಳ್ಳಬೇಕು.
- ಸದರಿ ಯೋಡೈಸ್ ಗೆ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆ ಶಾಲಾ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆಗೆ ಸೇ ಕೃತವಾಗುವ OTP(one time password) ನಮೂದಿಸಿ ದಾಖಲೆಗಳನ್ನು ಪರಿಶೀಲಿಸಿ validate ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ತಮ್ಮ ಶಾಲೆಯು ಒಳಪಡುವ ವಿದ್ಯುತ್ ಸರಬರಾಜು ಕಂಪನಿ ನಿಯಮಿತವನ್ನು ಆಯ್ಕೆ ಮಾಡಿಕೊಂಡು ಶಾಲೆಯ ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುವ ಅಕೌಂಟ್ ನಂಬರನ್ನು ನಿಖರವಾಗಿ ಪರಿಶೀಲಿಸಿಕೊಂಡು ನಿಗದಿತ ಸ್ಥಳದಲ್ಲಿ ನಿಖರವಾಗಿ ನಮೂದಿಸಬೇಕು.
- ಮಾಹಿತಿ ನಿಖರವಾಗಿರುವ ಬಗ್ಗೆ ದೃಢೀಕರಣ ವಾಕ್ಯದ ಬಟನ್ ಕ್ಲಿಕ್ ಮಾಡಬೇಕು.
- ಉಚಿತವಾಗಿ ಕ್ಯಾಪ್ಚವನ್ನು ಯಥಾ ಪ್ರಕಾರ ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- Acknowledgement ಪಡೆದು ಮುದ್ರಿಸಿ ಕಡತದಲ್ಲಿ ಇಟ್ಟುಕೊಳ್ಳಿ.