Step 1—- ಮೊದಲಿಗೆ chrome ಅಥವಾ ಯಾವುದಾದರೂ browser ನಲ್ಲಿ User ID ಮತ್ತು Password ಬಳಸಿ SATs ನಲ್ಲಿ Login ಆಗಿ.
Step 2 — Main menu ನಲ್ಲಿರುವ Student Management 1-10 option ಮೇಲೆ ಕ್ಲಿಕ್ ಮಾಡಿ.
Step 3– ಕೊನೆಯಲ್ಲಿರುವ transfer certificate ಎಂಬ option ಮೇಲೆ click ಮಾಡಿ.
Step 4– individual student tc issue ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ.
Step 5 — ಅಲ್ಲಿ ತರಗತಿಯನ್ನು ಎಂಟ್ರಿ ಮಾಡಿ . TC issue type ಎಂಬಲ್ಲಿ ಕ್ಲಿಕ್ ಮಾಡಿ. Generate TC to next academic year ಎಂಬ option ಆಯ್ಕೆ ಮಾಡಿ Search ಕೊಟ್ಟಾಗ ಮಕ್ಕಳ ಪಟ್ಟಿ ಕಾಣಿಸುತ್ತದೆ. ನೀವು ಯಾವ ಮಗುವಿನ TC issue ಮಾಡಬೇಕಿದೆ ಆ ಮಗುವಿನ ಎದುರು ಇರುವ issue ಎಂಬಲ್ಲಿ ಕ್ಲಿಕ್ ಮಾಡಿ. Transfer certificate ತೆರೆದುಕೊಳ್ಳುತ್ತದೆ.
Step 6 — TC ಯ ಕೆಳಗೆ ಕಾಣುವ edit ಎಂಬ option ಮೇಲೆ ಕ್ಲಿಕ್ ಮಾಡಿ . ಅಲ್ಲಿ ವೈದ್ಯಕೀಯ ತಪಾಸಣೆ ಆಗಿದೆಯೋ ಎಂಬಲ್ಲಿ Yes ಎಂದು ಕೊಡಿ. ವಿದ್ಯಾರ್ಥಿಯು ಉನ್ನತ ತರಗತಿಗೆ ಭಡ್ತಿ ಪಡೆಯಲು ಅರ್ಹನಾಗಿದ್ದಾನೆಯೇ ? ಎಂಬಲ್ಲಿ Yes ಎಂದು ಕೊಡಿ. ವಿದ್ಯಾರ್ಥಿ ಕಡೆಯ ಭಾರಿ ಹಾಜರಾದ ದಿನಾಂಕ , ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ದಿನಾಂಕ , ಚಾರಿತ್ರ್ಯ Good ಎಂದು ನಮೂದಿಸಿ . ನಂತರ ಕೆಳಗಡೆ ಇರುವ Generate ಎಂಬಲ್ಲಿ ಕ್ಲಿಕ್ ಮಾಡಿ. ಈಗ TC generate ಆಗುತ್ತದೆ .
Step 7 — TC generate ಆದ ಬಳಿಕ Print option ಬರುತ್ತದೆ. ನಂತರ Print ಕೊಡುವುದು .
ಸೂಚನೆ : TC issue ಮಾಡುವುದು Laptop ಅಥವಾ System ಬಳಸಿ ಮಾಡುವುದು ಉತ್ತಮ. TC issue ಮಾಡುವ ಮೊದಲು Progress Report card download ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ download ಮಾಡಲು ಸಾಧ್ಯವಿಲ್ಲ.