ಸಸ್ಯ ಶ್ಯಾಮಲ ಅರಣ್ಯ ಇಲಾಖೆಯಿಂದ ಪಡೆದ ಸಸಿಗಳ ಮಾಹಿತಿ upload ಮಾಡುವ ವಿಧಾನ.
ಈ ಕೆಳಗೆ ನೀಡಲಾದ ಲಿಂಕ್ ಬಳಸಿ ಸಸ್ಯ ಶ್ಯಾಮಲ website ಗೆ Login ಆಗಬಹುದು.
ಅರಣ್ಯ ಇಲಾಖೆಯಿಂದ ಪಡೆದ/ನೆಟ್ಟ ಸಸಿಗಳ ಮಾಹಿತಿ ತುಂಬಲು ಅನುಸರಿಸಬೇಕಾದ ಹಂತಗಳು:-
Step 1
ಮೊದಲಿಗೆ ಯಾವುದಾದರೂ browser ಬಳಸಿ Schooleducation.kar.nic ಎಂದು type ಮಾಡಿ search ಮಾಡಬೇಕು.
Step 2
School education ಕರ್ನಾಟಕ ಸರ್ಕಾರ ಎಂಬಲ್ಲಿ click ಮಾಡಬೇಕು.
Step 3
ಶಾಲಾ ಶಿಕ್ಷಣ ಇಲಾಖೆ ವೆಬ್ ಸೈಟ್ ಕಾಣಿಸುತ್ತದೆ . ಕೆಳಗೆ scroll ಮಾಡಿದಾಗ ” ಇ ಆಡಳಿತ ತಂತ್ರಾಂಶ ಇಂಜಿನಿಯರಿಂಗ್ ಸೇವೆಗಳು” ಎಂಬ option ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. Samagra shikshana Karnataka ಎಂಬ page ಕಾಣಿಸುತ್ತದೆ.
Step 4
Sasys Shyamala Login ಎಂದು ಇರುವ box ನಲ್ಲಿ Login ಮೇಲೆ click ಮಾಡಬೇಕು.
Step 5
Username ಮತ್ತು Password ಬಳಸಿ Login ಆಗಬೇಕು. Username ಆಗಿ ಶಾಲೆಯ ಡೈಸ್ ಸಂಖ್ಯೆ ಹಾಗೂ ಪಾಸ್ವರ್ಡ್ ಶಾಲೆಯ SDMC ಖಾತೆ ಸಂಖ್ಯೆ ಆಗಿರುತ್ತದೆ.
Step 6
Modules ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ Saplings received ಮೇಲೆ click ಮಾಡಬೇಕು.
ಸಸಿಗಳನ್ನು ನೆಡಲು ಶಾಲಾ ಅವರಣದಲ್ಲಿ ಸ್ಥಳವಿದೆಯೇ ಎಂಬಲ್ಲಿ Yes ಅಥವಾ No ಎಂದು ನಮೂದಿಸಬೇಕು. ಅರಣ್ಯ ಇಲಾಖೆಯಿಂದ ಪಡೆದ ಸಸಿಗಳ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಬೇಕು. Submit ಕೊಡಬೇಕು.
Submit successful ಅಂತ ಬರುತ್ತದೆ. ಅಲ್ಲಿ OK ಕೊಡಬೇಕು.
Step7
ಹೊಸ ಪೇಜ್ ನಲ್ಲಿ ಈಗಾಗಲೇ ತುಂಬಿಸಿದ ಮಾಹಿತಿ ಕಾಣುತ್ತದೆ. ಮಾಹಿತಿ ತಪ್ಪಾಗಿದ್ದರೆ Delete ಎಂಬ option ಮೇಲೆ click ಮಾಡಿ. ಪುನಃ ತುಂಬಿಸಬಹುದು.
Step 8
ಮತ್ತೆ Module ಮೇಲೆ click ಮಾಡಿ Sapling planted ಎಂಬ option ಮೇಲೆ click ಮಾಡಿ ಸಸಿ ನೆಟ್ಟ ಮಾಹಿತಿಯನ್ನು update ಮಾಡಬೇಕು.
Step 9
ಶಾಲಾ ಆವರಣದಲ್ಲಿ ನೆಟ್ಟ ಸಸಿಗಳ ಸಂಖ್ಯೆ, ನೆಟ್ಟ ದಿನಾಂಕ, ಸಸಿಗಳನ್ನು ನೆಟ್ಟ ಫೋಟೋ upload ಮಾಡಬೇಕು. Photo jpeg format ನಲ್ಲಿ 500 MB ಯ ಒಳಗಡೆ ಇರಬೇಕು.
ನಂತರ Submit ಕೊಡಬೇಕು.