ಸರ್ವೋತ್ತಮ ಸೇವಾ ಪ್ರಶಸ್ತಿ ಕುರಿತು ಮಾಹಿತಿ ಇಲ್ಲಿದೆ

or

IMG 20230324 WA0013

ರಾಜ್ಯ ಸರ್ಕಾರದ ಅಧಿಕಾರಿ/ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಯೋಜನೆಯನ್ನು 2012ರಿಂದ ಜಾರಿಗೆ ತರಲಾಗಿದೆ. ಪ್ರಸ್ತುತ 2023 ನೇ ಸಾಲಿನಲ್ಲಿ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ “ಸರ್ವೋತ್ಸಮ ಸೇವಾ ಪ್ರಶಸ್ತಿ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ತಮ್ಮ ನಾಮನಿರ್ದೇಶನಗಳನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.’ಸರ್ವೋತ್ತಮ ಸೇವಾ ಪ್ರಶಸ್ತಿ’ಯ ಎರಡು ಹಂತದ ಪ್ರಶಸ್ತಿಗಳಿಗೂ ಅರ್ಜಿ ಸಲ್ಲಿಸಬಯಸುವವರು, ಪ್ರತಿಹಂತಕ್ಕೂ, ಪ್ರತ್ಯೇಕವಾಗಿ ತಮ್ಮ ನಾಮ ನಿರ್ದೇಶನವನ್ನು ಸಲ್ಲಿಸತಕ್ಕದ್ದು, ನಾಮನಿರ್ದೇಶನವನ್ನು ಸಲ್ಲಿಸಬಯಸುವವರು ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka.gov.in ದ ಮೂಲಕ 31-03-2023 ರೊಳಗಾಗಿ ಸಲ್ಲಿಸುವುದು.ಉಲ್ಲೇಖಿತ ಆದೇಶದ ಪ್ರತಿಗಳನ್ನು ಜಾಲತಾಣ https://dparar.karnataka.gov.in/ ರ ಸರ್ಕಾರದ ಆದೇಶಗಳು ತರಬೇತಿ ಇಲ್ಲಿ ಅವಲೋಕಿಸಬಹುದಾಗಿದೆ.ರಾಜ್ಯ / ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ನಾಮನಿರ್ದೇಶನವನ್ನು ಕನ್ನಡ ಅಥವಾ English ನಲ್ಲಿ ಸಲ್ಲಿಸಬಹುದಾಗಿದ್ದು, ಕನ್ನಡದಲ್ಲಿ ಸಲ್ಲಿಸಲು ನುರಿ 6.0 ಆವೃತ್ತಿಯನ್ನು ಮಾತ್ರ ಬಳಸುವಂತೆ ಸೂಚಿಸಿದೆ.

Sharing Is Caring:

Leave a Comment