---Advertisement---

ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿಗೆ 6 ರಿಂದ 9ನೇ ತರಗತಿಯ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ (SA-2) ಸಂಪೂರ್ಣ ಮಾಹಿತಿ

By kspstadk.com

Published On:

Follow Us
sa_2-timetable-2025_26
---Advertisement---
WhatsApp Group Join Now
Telegram Group Join Now

ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಸರಳವಾದ ಮಾದರಿ ಪ್ರಶ್ನೆಪತ್ರಿಕೆ, ಕೀ ಉತ್ತರ ನೀಲನಕ್ಷೆ (Blueprint)ಯನ್ನು DSERT (https://dsert.karnataka.gov.in.) ಮತ್ತು KSQAAC (https://kseab.karnataka.gov.in) ವೆಬ್‌ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಲಾಗಿರುತ್ತದೆ. ಸಿದ್ಧಪಡಿಸಿರುವ ಮೌಲ್ಯಾಂಕನ ನಿರ್ವಹಣೆ ಮಾರ್ಗಸೂಚಿ ಹಾಗೂ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರುಗಳಿಗೆ, ಶಿಕ್ಷಕರಿಗೆ ಮಾಹಿತಿ ನೀಡುವುದು ಹಾಗೂ ಶಾಲೆಗಳ ಪ್ರಕಟಣಾ ಫಲಕದಲ್ಲಿ (Notice Board) ಸದರಿ ವೇಳಾಪಟ್ಟಿಯನ್ನು ಪುಕಟಿಸಿ, ವೇಳಾ ಪಟ್ಟಿಯಂತೆ ಮೌಲ್ಯಾಂಕನ ಕಾರ್ಯ ನಿರ್ವಹಿಸಲು ತಿಳಿಸಿದೆ.

ಮೌಲ್ಯಾಂಕನ ನಿರ್ವಹಣಾ ಮಾರ್ಗಸೂಚಿಗಳು :

  • ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ 6 ರಿಂದ 9 ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ಎಲ್ಲಾ ವಿಷಯಗಳು, ಆಂಗ್ಲ ಮಾಧ್ಯಮದಲ್ಲಿ Core ವಿಷಯಗಳು 6 ಮತ್ತು 7ನೇ ತರಗತಿಗಳಿಗೆ English Bilingual, ಉರ್ದು ಮಾಧ್ಯಮದಲ್ಲಿ ಪ್ರಥಮ ಭಾಷೆ ಉರ್ದು ಹಾಗೂ Core ವಿಷಯಗಳು, ಮರಾಠಿ ಮಾಧ್ಯಮದಲ್ಲಿ ಪ್ರಥಮ ಭಾಷೆ ಮರಾಠಿ ಹಾಗೂ Core ವಿಷಯಗಳು, 8 & 9ನೇ ತರಗತಿಯ ಪಥಮ ಹಾಗೂ ತೃತೀಯ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಕನ್ನಡ ವಿಷಯಗಳಿಗೆ LBA ಆಧರಿಸಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ.
  • ಈ ಸಂಬಂಧ ಮಾದರಿ ಪ್ರಶ್ನೆಪತ್ರಿಕೆ, ಕೀ ಉತ್ತರ ಮತ್ತು ಪಾಠಾವಾರು ಅಂಕಗಳ ಹಂಚಿಕೆ (Lesson wise weightage) ಯನ್ನು DSERT (https://dsert.karnataka.gov.in.) ಮತ್ತು KSQAAC
    (https://kseab.karnataka.gov.in) ವೆಬ್‌ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದು, ಮಾದರಿ ಪ್ರಶ್ನೆಪತ್ರಿಕೆಯಂತೆ ದ್ವಿತೀಯ ಸಂಕಲನಾತ್ಮಕ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುವುದು.
  • ಉಳಿದ ವಿಷಯಗಳಿಗೆ ಶಾಲಾ ಹಂತದಲ್ಲಿಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿಕೊಳ್ಳುವುದು.
  • ಲಿಖಿತ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ, 6 ಮತ್ತು 7ನೇ ತರಗತಿಗಳಿಗೆ 40 ಅಂಕಗಳು, 8ನೇ ತರಗತಿಗೆ 50 ಅಂಕಗಳು ಹಾಗೂ 9ನೇ ತರಗತಿಗೆ ಪಥಮ ಭಾಷೆಗೆ 100 ಅಂಕಗಳು ಉಳಿದ ಭಾಷೆಗಳು ಹಾಗೂ ಕೋರ್ ವಿಷಯಗಳಿಗೆ 80 ಅಂಕಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ.
  • ಮೌಖಿಕ ಮತ್ತು ಆಂತರಿಕ ಮೌಲ್ಯಾಂಕನಕ್ಕೆ ಉಲ್ಲೇಖ 1ರ ಮೌಲ್ಯಾಂಕನ ಸುತ್ತೋಲೆಯಂತೆ ಕ್ರಮವಹಿಸುವುದು.
  • ಸದರಿ ಪ್ರಶ್ನೆಪತ್ರಿಕೆಗಳನ್ನು KSQAAC ಮೂಲಕ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ Login ಗೆ ಕಳುಹಿಸಲಾಗುವುದು.
  • ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು 8 ಮತ್ತು 9ನೇ ತರಗತಿಯ ಪ್ರಶ್ನೆ ಪತ್ರಿಕೆಗಳನ್ನು ವೇಳಾ ಪಟ್ಟಿಗನುಗುಣವಾಗಿ ತಮ್ಮ ಹಂತದಲ್ಲಿಯೇ ಮುದ್ರಣ ಮಾಡಿ ಮೌಲ್ಯಾಂಕನ ಕಾರ್ಯ ನಿರ್ವಹಿಸುವುದು.
  • ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಗೆ ಜೋಡಣೆ ಮಾಡಿರುವ 6,7,ಮತ್ತು8ನೇ ತರಗತಿಗಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವೇಳಾ ಪಟ್ಟಿಗನುಗುಣವಾಗಿ ಪ್ರಶ್ನೆ ಪತ್ರಿಕೆಗಳ ಒಂದು ಪ್ರತಿಯನ್ನು ನೀಡುವುದು.
  • ಪ್ರಶ್ನೆ ಪತ್ರಿಕೆಗಳನ್ನು ಪಡೆದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆ ಪತ್ರಿಕೆಯ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮೂಲಕ ಯಾವುದೇ ಅವಗಡಗಳಿಗೆ ಅವಕಾಶವಿಲ್ಲದಂತೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಿ ಮೌಲ್ಯಾಂಕನ ಕಾರ್ಯ ನಿರ್ವಹಿಸುವುದು.
  • ಮೌಲ್ಯಾಂಕನ ಕಾರ್ಯದಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
  • ರಾಜ್ಯದ ಸರ್ಕಾರಿ ಶಾಲೆಗಳಲ್ಲಿ SA-2 ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ Online ಮೂಲಕ Confidential Modeನಲ್ಲಿ ಕಳುಹಿಸಲಾಗುವುದು. ಪರೀಕ್ಷೆಯ ಗೌಪ್ಯತೆಯನ್ನು ಕಾಪಾಡಿಕೊಂಡು SA-2 ಪರೀಕ್ಷೆಯನ್ನು ನಡೆಸುವ ಸಂಬಂಧ ಪ್ರಶ್ನೆಪತ್ರಿಕೆ ಮತ್ತು ಪರೀಕ್ಷೆ ಬರೆಯಲು ಬಿಳಿ ಹಾಳೆಗಳನ್ನು ನೀಡುವ ಸಲುವಾಗಿ SATS ನಲ್ಲಿನ ಮಾಹಿತಿಯಂತೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ 6ನೇ ತರಗತಿ ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ. 20 ರಂತೆ, 8ನೇ ತರಗತಿ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ. 30 ರಂತೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಪ್ರಶ್ನೆಪತ್ರಿಕೆಗಳನ್ನು ಶಾಲಾ ಹಂತದಲ್ಲಿ ಮುದ್ರಣ ಮಾಡಲು SSK ರಾಜ್ಯ ಕಛೇರಿಯಿಂದ ಬಿಡುಗಡೆ ಮಾಡುವ ಅನುದಾನವನ್ನು ನಿಯಮಾನುಸಾರ ಬಳಸಿಕೊಳ್ಳುವುದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment