2024 25 ನೇ ಸಾಲಿನ ಯೋಜನಾ ಅನುಮೋದನ ಮಂಡಳಿಯಿಂದ “ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ” ಕಾರ್ಯಕ್ರಮದಡಿ ಪ್ರಾರ್ಥನಾ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಗಣಿತ ವಿಜ್ಞಾನ ತಂತ್ರಜ್ಞಾನ ಭಾಷೆ ಸಾಮಾನ್ಯ ಜ್ಞಾನ ಭಾರತ ದೇಶದ ಪರಂಪರೆ ಹಾಗೂ ಇತರ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯ ಹಂತಗಳು
1.ಜೂನಿಯರ್ ಹಂತ (5 ರಿಂದ 7)
2.ಸೀನಿಯರ್ ಹಂತ (8 ರಿಂದ 10)
ಸ್ಪರ್ಧೆಯ ನೋಂದಣಿ ಮತ್ತು ಪ್ರಕ್ರಿಯೆ
ಪ್ರತಿ ಶಾಲೆಯಿಂದ ಶಾಲಾ ಹಂತದ ಸ್ಪರ್ಧೆಗೆ ಶಿಕ್ಷಕರು ಗಣಿತ, ವಿಜ್ಞಾನ, ತಂತ್ರಜ್ಞಾನ , ಭಾರತದ ಇತಿಹಾಸ- ಪರಂಪರೆ, ಭೌಗೋಳಿಕ, ಸಾಂಸ್ಕೃತಿಕ, ಸಾಹಿತ್ಯ, ಕಲೆ, ಭಾಷೆ, ಸಾಮಾನ್ಯ ಜ್ಞಾನ, ಕ್ರೀಡೆ, ಮಾನಸಿಕ ಸಾಮರ್ಥ್ಯ, ಪ್ರಚಲಿತ ವಿದ್ಯಮಾನ ಇತ್ಯಾದಿ ವಿಷಯಗಳ 50 ಬಹು ಆಯ್ಕೆಯ ಪ್ರಶ್ನೆಗಳನ್ನು ಆಯ್ಕೆ ಮಾಡಿ ಮುಖ್ಯ ಶಿಕ್ಷಕರಿಂದ ಅನುಮೋದಿಸಿಕೊಂಡು ಶಾಲಾ ಹಂತದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳುವುದು.
*ಶಾಲಾ ಹಂತದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಹೆಸರು, SATS ID, ಮೊಬೈಲ್ ಸಂಖ್ಯೆ, ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ವಿದ್ಯಾವಾಹಿನಿ portal ನಲ್ಲಿ ನೋಂದಣಿ ಮಾಡುವುದು.
- ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳು ನಿಗದಿಪಡಿಸಿದ ದಿನಾಂಕದಂದು ಶಾಲೆಯ ಅವಧಿಯಲ್ಲಿ, ಮುಖ್ಯಗುರುಗಳ ಸಮ್ಮುಖದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು.
- ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮೂರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ನೀಡಲಾಗುವುದಯ. ಬಹುಮಾನದ ಮೊತ್ತವನ್ನು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.
- ತಾಲೂಕು ಹಂತದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುವುದು.
ಜಿಲ್ಲಾ ಹಂತದ ರಸಪ್ರಶ್ನೆ ಸ್ಪರ್ಧೆ
- ತಾಲೂಕು ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತಥತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಹಂತದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.
- ಜೂನಿಯರ್ ವಿಭಾಗದ ಜಿಲ್ಲಾ ಹಂತದ ಸ್ಪರ್ಧೆ ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ನಡೆಸಲಾಗುವುದು.
- ಸೀನಿಯರ್ ಹಂತದ ಜಿಲ್ಲಾ ಹಂತದ ರಸಪ್ರಶ್ನೆ ಸ್ಪರ್ಧೆ ದೂರದರ್ಶನ ಚಂದನವಾಹಿನಿಯಲ್ಲಿ ಮುಖಾಮುಖಿಯಾಗಿ ಹಮ್ಮಿಕೊಳ್ಳಲಾಗುವುದು.
- ಜಿಲ್ಲಾ ಹಂತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳನ್ನು ವಿಭಾಗ ಹಂತಕ್ಕೆ ಆಯ್ಕೆ ಮಾಡಲಾಗುವುದು. ವಿಭಾಗ ಹಂತದ ರಸಪ್ರಶ್ನೆ ಸ್ಪರ್ಧೆ
*ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಆಯಾ ವಿಭಾಗದ ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. - ಸೀನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ವಿಭಾಗ ಮಟ್ಟದ ಸ್ಪರ್ಧೆಯನ್ನು ದೂರದರ್ಶನ ಚಂದನ ವಾಹಿನಿಯಲ್ಲಿ ಮುಖಾಮುಖಿಯಾಗಿ ಹಮ್ಮಿಕೊಳ್ಳಲಾಗುವುದು.
- ವಿಭಾಗ ಮಟ್ಟದಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಜೂನಿಯರ್ ಹಾಗೂ ಸೀನಿಯರ್ ಹಂತದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು
- ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ಜೂನಿಯರ್ ಹಾಗೂ ಸೀನಿಯರ್ ಹಂತದ 4 ವಿಭಾಗದ ಒಟ್ಟು 16 ಮಕ್ಕಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಅಯ್ಕೆ ಮಾಡಲಾಗುವುದು.
- ರಾಜ್ಯಮಟ್ಟದ ಸ್ಪರ್ಧೆಯು ನಿಗದಿಪಡಿಸನಾದ ದಿನಾಂಕದಂದು ಮುಖಾಮುಖಿಯಾಗಿ ಕ್ವಿಜ್ ಮಾಸ್ಟರ್ ಮೂಲಕ ನಡೆಸಲಾಗುವುದು.
ಸ್ಪರ್ಧಾ ನಿಯಮಗಳು
- ಗಣಿತ, ವಿಜ್ಞಾನ, ತಂತ್ರಜ್ಞಾನ , ಭಾರತದ ಇತಿಹಾಸ- ಪರಂಪರೆ, ಭೌಗೋಳಿಕ, ಸಾಂಸ್ಕೃತಿಕ, ಸಾಹಿತ್ಯ, ಕಲೆ, ಭಾಷೆ, ಕ್ರೀಡೆ, ಸಾಮಾನ್ಯ ಜ್ಞಾನ ಇತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತವೆ.
- ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಉತ್ತರಿಸಲು ಆಯ್ಕೆ ಮಾಡಿಕೊಂಡ ಭಾಷೆಯಲ್ಲಿಯೇ ಪ್ರಶ್ನೆಗಳು ಇರುತ್ತವೆ. ಸ್ಪರ್ಧೆಯ ಸಮಯದಲ್ಲಿ ಭಾಷೆಯ ಬದಲಾವಣೆಗೆ ಅವಕಾಶ ಇರುವುದಿಲ್ಲ.
- ಪ್ರತಿ ವಿದ್ಯಾರ್ಥಿಗೂ ಯಾದೃಚ್ಛಿಕ ಪ್ರಶ್ನೆಯನ್ನು ಆಯ್ಕೆ ಮಾಡಲಾಗುತ್ತದೆ.
- ಸರಿಯಾದ ಉತ್ತರಕ್ಕೆ 1 ಅಂಕ ತಪ್ಪಾದ ಉತ್ತರಕ್ಕೆ 0 ಅಂಕ ಹಾಗೂ ಪ್ರಶ್ನೆಯನ್ನು ಬಿಟ್ಟರೆ 0 ಅಂಕ ನೀಡಲಾಗುತ್ತದೆ.
- ಪ್ರತಿ ಪ್ರಶ್ನೆಗೆ ಉತ್ತರಿಸಲು ತೆಗೆದುಕೊಂಡ ಸಮಯವನ್ನು ಪರಿಗಣಿಸಲಾಗುವುದು.
- ಸ್ಪರ್ಧೆಯ ಸಮಯದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳಿಗೆ ಇಲಾಖೆ ಹೊಣೆಯಲ್ಲ.
- ನಿಗದಿತ ವೇಳಾಪಟ್ಟಿಯಂತೆ ಸ್ಪರ್ಧೆಗೆ ಹಾಜರಾಗಬೇಕು. ಪರ್ಯಾಯ ಆಯ್ಕೆ ಇರುವುದಿಲ್ಲ.
- ಸ್ಪರ್ಧೆಗೆ ವಿದ್ಯಾರ್ಥಿಗಳು ಯಾರ ಸಹಾಯವನ್ನು ಪಡೆಯುವಂತಿಲ್ಲ. ರಸಪ್ರಶ್ನೆ ಸ್ಪರ್ಧೆಯ ವೇಳಾಪಟ್ಟಿ
ಶಾಲಾ ಹಂತದ ನೋಂದಣಿ ದಿನಾಂಕ : 15/07/2924 ರಿಂದ ದಿನಾಂಕ 31/07/2024
ತಾಲೂಕು ಹಂತದ ಸ್ಪರ್ಧೆ
ಜೂನಿಯರ್ ವಿದ್ಯಾರ್ಥಿಗಳಿಗೆ:-
01/08/2024 – 5ನೇ ತರಗತಿ
02/08/2024- 6ನೇ ತರಗತಿ
03/08/2024- 7ನೇ ತರಗತಿ
ಸೀನಿಯರ್ ವಿದ್ಯಾರ್ಥಿಗಳಿಗೆ :-
05/08/2024- 8ನೇ ತರಗತಿ
06/08/2024 – 9ನೇ ತರಗತಿ
07/98/2024- 10ನೇ ತರಗತಿ
ಸಮಯ: ಶಾಲಾ ಅವಧಿಯಲ್ಲಿ
ಫಲಿತಾಂಶ:- 09/08/2024
ಜಿಲ್ಲಾ ಹಂತದ ಸ್ಪರ್ಧೆ:-
ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗೆ
28/08/2024 ಆಯಾ ಜಿಲ್ಲೆಯ ಡಯಟ್ ಹಾಗೂ ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ
ಫಲಿತಾಂಶ : 28/08/2024
ವಿಭಾಗ ಹಂತದ ರಸಪ್ರಶ್ನೆ ಸ್ಪರ್ಧೆ :-
ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗೆ
31/08/2024 ಆಯಾ ಜಿಲ್ಲೆಯ ಡಯಟ್ ಹಾಗೂ ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಮುಖಾಮುಖಿಯಾಗಿ.
ಫಲಿತಾಂಶ : 31/08/2024
ರಾಜ್ಯ ಹಂತದ ಸ್ಪರ್ಧೆ:-
ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗೆ
ದಿನಾಂಕವನ್ನು ನಿಗದಿಪಡಿಸಲಾಗುವುದು.
ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಮುಖಾಮುಖಿಯಾಗಿ