ಪ್ರತಿಭಾ ಕಾರಂಜಿ 2024-25ರ ಕುರಿತು ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

ಸ್ಪರ್ಧೆಗಳ ಆಯೋಜನೆ ಮತ್ತು ಸ್ಪರ್ಧಾ ನಿಯಮಗಳು:
ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ
ವಾಗಿರುವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.

  • ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಯಾವುದಾದರೂ 2 ವಿಷಯಗಳಲ್ಲಿ
    ಮಾತ್ರ ಮತ್ತು ಸಾಮೂಹಿಕ ವಿಭಾಗದಲ್ಲಿ ಯಾವುದಾದರೂ 1 ವಿಷಯದಲ್ಲಿ ಮಾತ್ರ ಭಾಗವಹಿಸಲು
    ಅವಕಾಶವಿದೆ.
  • ಯಾವುದೇ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದ ಸ್ಪರ್ಧಾ ವಿಷಯದಲ್ಲಿ ಕನಿಷ್ಠ 3
    ವಿದ್ಯಾರ್ಥಿಗಳು/ 3 ಗುಂಪುಗಳು ಭಾಗವಹಿಸಬೇಕು. ಭಾಷಾ ಅಲ್ಪ ಸಂಖ್ಯಾತ ಸ್ಪರ್ಧೆಗಳಲ್ಲಿ
    ವಿದ್ಯಾರ್ಥಿಗಳ ಸಂಖ್ಯೆ ನಿಗಧಿ ಇರುವುದಿಲ್ಲ, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಿ,
    ಬಹುಮಾನ ಘೋಷಣೆ ಮಾಡಿ ಉಳಿದ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆ ಜಮಾ ಮಾಡುವುದು.
    ಇದು ಎಲ್ಲಾ ಹಂತದ /ವಿಭಾಗಗಳ ಸ್ಪರ್ಧೆಗಳಿಗೂ ಅನ್ವಯಿಸುತ್ತದೆ.
    .
  • ಚಿತ್ರಕಲಾ ಸ್ಪರ್ಧೆಗೆ ಸಂಬಂಧಿಸಿದಂತೆ ಬಣ್ಣ, ಬ್ರಷ್ ಇತ್ಯಾದಿಗಳನ್ನು ಸ್ಪರ್ಧಾಳುಗಳೇ ತರಬೇಕು.
    ಸಂಘಟಕರು ಕಡ್ಡಾಯವಾಗಿ ಸ್ಪರ್ಧಿಗಳಿಗೆ ಒಂದೇ ಅಳತೆಯ ಡ್ರಾಯಿಂಗ್ ಶೀಟ್ ನೀಡುವುದು.
  • ಜಾನಪದ ನೃತ್ಯ, ಕೋಲಾಟ ಇವುಗಳಿಗೆ ಉಡುವು, ವರ್ಣಾಲಂಕಾರ, ಪಕ್ಕವಾದ್ಯ, ಹಾಡುಗಾರಿಕ
    ಇವುಗಳನ್ನು ಸ್ಪರ್ಧಾರ್ಥಿಗಳೇ ಒದಗಿಸಿಕೊಳ್ಳಬೇಕು.
  • ಕೇ ಮಾಡಲಿಂಗ್ ಗೆ ಜೇಡಿ ಮಣ್ಣನ್ನು ಸ್ಪರ್ಧಾಳುಗಳೇ ತರಬೇಕು.
  • ರಂಗೋಲಿ ಸ್ಪರ್ಧೆಗೆ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.
  • ಸ್ಪರ್ಧೆಗಳ ದಿನಾಂಕ ಮತ್ತು ಇನ್ನಿತರ ವಿವರಗಳನ್ನು ನಿಗಧಿ ಪಡಿಸಿರುವಂತೆ ಎಲ್ಲಾ ಶಾಲೆಗಳಿಗೂ
    ಸಾಕಷ್ಟು ಮುಂಚಿತವಾಗಿ ಸುತ್ತೋಲೆಗಳನ್ನು ಕಳುಹಿಸಿ, ಅರ್ಹ ವಿದ್ಯಾರ್ಥಿಗಳು ಈ ಅವಕಾಶದಿಂದ
    ವಂಚಿತರಾಗದಂತೆ ಎಚ್ಚರ ವಹಿಸಬೇಕು.
  • ಸ್ಪರ್ಧೆಗಳನ್ನು ನಡೆಸಿದ ಕೂಡಲೇ ಮುಂದಿನ ಹಂತದ ಸ್ಪರ್ಧೆಗೆ ಸಹಾಯವಾಗುವಂತೆ
    ನಿಗಧಿಪಡಿಸಿದ ದಿನಾಂಕದೊಳಗೆ ವಿಜೇತರ ಪಟ್ಟಿಯನ್ನು ತಕ್ಷಣವೇ ಕ್ರೋಢೀಕರಿಸಿ
    ಸಂಬಂಧಿಸಿದವರಿಗೆ ಕಳುಹಿಸಬೇಕು.
  • • ಸಂಗೀತ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಶೃತಿ ವಾದ್ಯವನ್ನು ಹೊರತುಪಡಿಸಿ, ಯಾವುದೇ ವಾದಗಳನ್ನು ಬಳಸಲು ಅವಕಾಶವಿಲ್ಲ, ಭರತನಾಟ್ಯ ಹಾಗೂ ಜಾನಪದ ನೃತ್ಯಕ್ಕೆ ಮುದ್ರಿತ ಧ್ವನಿಸುರುಳಿಯನ್ನು ಅವಕಾಶ ನೀಡುವುದು.
  • ಜಾನಪದ ನೃತ್ಯದಲ್ಲಿ ಜಾನಪದ ಶೈಲಿಯ ನೃತ್ಯವನ್ನೇ ಪುದರ್ಶಿಸಬೇಕು. ಸ್ಪರ್ಧೆಗಳಲ್ಲಿ ರಾಜ್ಯದಬುಡಕಟ್ಟು, ಜಾನಪದ ಮತ್ತು ಪಾರಂಪರಿಕ ಕಲಾ ಪ್ರಕಾರಗಳನ್ನು ಒಳಗೊಂಡಂತೆ ಪ್ರದರ್ಶಿಸಬೇಕು.ಉದಾ: ನಂದಿಕೋಲು ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಗಾಂಜೀಪಾ ಕಲೆ, ಯಕ್ಷಗಾನ ಕಲೆ,ಗೊರವರ ಕುಣಿತ, ಐತಿಹಾಸಿಕ ನಾಟಕ, ವೀರಗಾಸೆ, ಬಯಲಾಟ, ಮುಂತಾದವುಗಳನ್ನು ಆಯ್ಕೆಮಾಡಿಕೊಳ್ಳತಕ್ಕದ್ದು.
  • ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ತಂಡವನ್ನುಮುಂದಿನ ಸ್ಪರ್ಧೆಗೆ ಆಯ್ಕೆ ಮಾಡುವುದು. ಮೇಲಿನ ಎಲ್ಲಾ ನಿಯಮಗಳು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಹಾಗೂ 3 ವಿಭಾಗಗಳಿಗೂ ಅನ್ವಯಿಸುತ್ತದೆ.
IMG 20240630 WA0023
IMG 20240630 WA0019
IMG 20240630 WA0022
IMG 20240630 WA00211
IMG 20240630 WA00201
WhatsApp Group Join Now
Telegram Group Join Now
Sharing Is Caring:

Leave a Comment