Phase 2 ವರ್ಗಾವಣೆಯ ಕುರಿತ ಪ್ರಮುಖ ಮಾಹಿತಿ

WhatsApp Group Join Now
Telegram Group Join Now

ದಿನಾಂಕ 14.02.2022 ರಿಂದ ನಡೆಯಲಿರುವ ಎರಡನೇ ಹಂತದ ಶಿಕ್ಷಕರ ಸಾಮಾನ್ಯ ವರ್ಗಾವಣೆಗಳ ಬಗ್ಗೆ ಮಾಹಿತಿ
(ದಿನಾಂಕ 30.06.2021 ರಂತೆ ಪಡೆದ ಅರ್ಜಿಗಳು)

  1. ಒಂದು ಮತ್ತು ಎರಡನೇ ಹಂತದ ವರ್ಗಾವಣೆಗೆ ವರ್ಗಾವಣಾ ಮಿತಿ ಒಂದೇ ಆಗಿದೆ. ಉದಾ: ಜಿಲ್ಲಾ ಹಂತಕ್ಕೆ ಶೇಕಡಾ 7.
  2. ಒಂದನೇ ಹಂತದಲ್ಲಿ ಉಳಿದಿರುವ ಶೇಕಡಾ ಮಿತಿಯ ಮುಂದುವರಿದ ಭಾಗಕ್ಕೆ ಮಾತ್ರ ಎರಡನೇ ಹಂತದಲ್ಲಿ ಅವಕಾಶ.
  3. ಈಗಾಗಲೇ ಒಂದನೇ ಹಂತದಲ್ಲಿ ಶೇಕಡಾ 7 ರ ಮಿತಿಯನ್ನು ತಲುಪಿರುವ ವೃಂದಕ್ಕೆ ಎರಡನೇ ಹಂತದಲ್ಲಿ ಕೌನ್ಸಿಲಿಂಗ್ ನಡೆಯುವುದಿಲ್ಲ.
  4. ಶೇಕಡಾ ಮಿತಿ ವೃಂದವಾರು ನಿಗದಿಯಾಗುವುದರಿಂದ ಪ್ರತಿ ವೃಂದದಲ್ಲಿ ಈ ಬಗ್ಗೆ ಪರಿಶೀಲನೆ ಮಾಡಿ ಅವಶ್ಯವಿರುವ ವೃಂದದವರನ್ನು ಮಾತ್ರ ಕೌನ್ಸಿಲಿಂಗ್ ಗೆ ಹಾಜರಾಗಲು ತಿಳಿಸುವುದು.
  5. ದಿನಾಂಕ 09-02 2022 ರ ನಂತರ ಖಾಲಿ ಹುದ್ದೆ ಇಂದೀಕರಣಕ್ಕೆ ಬಂದಿರುವ ಪ್ರಸ್ತಾವನೆಗಳನ್ನು ಪರಿಗಣಿಸಿರುವುದಿಲ್ಲ.
  6. ವೇಳಾ ಪಟ್ಟಿಯಂತೆ ದಿನಾಂಕ : 14.02.2022 ರಿಂದ ಜಿಲ್ಲಾ ಹಂತದಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಲು ಅವಕಾಶ ಕಲ್ಪಿಸಿದೆ. ಏಕಕಾಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಯ ನಡೆಸಲು ಅವಕಾಶ ಕಲ್ಪಿಸಿದೆ).
  7. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದವಾರು ಶೇಕಡಾ ವರ್ಗಾವಣೆ ಮಿತಿ ಜೇಷ್ಠತಾ ಪಟ್ಟಿ ಮತ್ತು ಖಾಲಿ ಹುದ್ದೆಗಳ ಮಾಹಿತಿಯನ್ನು ಡಿ. ಡಿ. ಪಿ. ಐ ವರ್ಗಾವಣಾ ಲಾಗಿನ್ ನಲ್ಲಿ ನೀಡಲಾಗಿದೆ.
  8. ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಕೆಲವು ಅರ್ಜಿಗಳು ತಿರಸ್ಕೃತಗೊಳ್ಳಲು ಇಇಡಿಎಸ್ ತಂತ್ರಾಶ ದಲ್ಲಿ ಪ್ರೊಬೇಷನರಿ ಅವಧಿ ಘೋಷಣೆ ಆಗದಿರುವುದು ಸೇವಾ ಮಾಹಿತಿ ತಪ್ಪಾಗಿರುವ ಪ್ರಕರಣಗಳಾಗಿವೆ.
  9. ಕೌನ್ಸಿಲಿಂಗ್ ನಡೆಯುವ ಮೊದಲೇ ಖಾಲಿ ಹುದ್ದೆ ಮಾಹಿತಿಯನ್ನು ಪ್ರಕಟಿಸುವುದು.
  10. ವರ್ಗಾವಣಾ ಆದೇಶಗಳನ್ನು ತಪ್ಪದೇ ಕೌನ್ಸಿಲಿಂಗ್ ಆದ ತಕ್ಷಣ ಸ್ಥಳದಲ್ಲೇ ವಿತರಿಸುವುದು.
IMG 20220212 WA0002 min
WhatsApp Group Join Now
Telegram Group Join Now
Sharing Is Caring:

Leave a Comment