“ಪರೀಕ್ಷಾ ಪೆ ಚರ್ಚಾ” – 2023 ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು.
ಉದ್ದೇಶಗಳು:
- ಮಕ್ಕಳಲ್ಲಿರುವ ಪರೀಕ್ಷಾ ಒತ್ತಡ ಕಡಿಮೆ ಮಾಡುವುದು.
- ನಮ್ಮ ಭವಿಷ್ಯದ ರಾಷ್ಟ್ರ ನಿರ್ಮಾತೃಗಳಿಗೆ ಕಲಿಕೆಯನ್ನು ಹೆಚ್ಚು ಆಸಕ್ತಿ ಹಾಗೂ
ಸಂತೋಷದಾಯಕವಾಗಿಸುವುದು. - ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ನೇರ ಸಂವಹನ ನಡೆಸಿ, ಪರೀಕ್ಷಾ
ಪದ್ಧತಿ ಕುರಿತು ಅಮೂಲ್ಯವಾದ ಸಲಹೆಗಳನ್ನು ಪಡೆದು ಪರೀಕ್ಷಾ ಪದ್ಧತಿಯನ್ನು
ಉತ್ತಮಪಡಿಸುವುದು
ಅರ್ಹತೆ:
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ – ಕಾಲೇಜುಗಳಲ್ಲಿ 6 ರಿಂದ 12ನೇ
ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು ಈ
ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಪ್ರಸಕ್ತ ಸಾಲಿನ ಸ್ಪರ್ಧೆಯು ಬಹು ಆಯ್ಕೆಯ
ಪ್ರಶ್ನೆ (MCQ)ದ್ದಾಗಿದೆ. ಭಾಗವಹಿಸುವವರೆಲ್ಲರಿಗೂ ಪುಮಾಣ ಪತ್ರ ದೊರೆಯುವುದು.
ಭಾಗವಹಿಸುವ ವಿಧಾನ :-
ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು https://innovateindia.mygov.in/ppc-
2024/ ವೆಬ್ ಸೈಟ್ ಗೆ ಭೇಟಿ ನೀಡಿ “ಪರೀಕ್ಷಾ ಪೆ ಚರ್ಚಾ” -2023 ಪರೀಕ್ಷಾ ಪೆ ಚರ್ಚಾ ಈ
ಕಾರ್ಯಕ್ರಮದಲ್ಲಿನ ನಿಯಮಗಳನ್ನು ಓದಿಕೊಂಡು, ಭಾಗವಹಿಸಿ ಎಂಬ ಬಟನ್ ಕ್ಲಿಕ್
ಮಾಡುವುದು ಹಾಗೂ ತಮ್ಮ ಸ್ವವಿವರಗಳನ್ನು ನೀಡಿ, ಆನ್ಲೈನ್ ಮೂಲಕ ಸ್ಪರ್ಧೆಯಲ್ಲಿ
ಭಾಗವಹಿಸಬಹುದಾಗಿದೆ.
ಪುಸಕ್ತ ಸಾಲಿನ ಸ್ಪರ್ಧೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ
ಬರವಣೆಗೆ ಅವಕಾಶವಿದೆ. ಭಾಗವಹಿಸುವವರೆಲ್ಲರಿಗೂ NCERT ನಿರ್ದೇಶಕರು ಸಹಿ ಮಾಡಿದ
ಪುಮಾಣ ಪತ್ರ ದೊರೆಯುವುದು, ವಿಜೇತರಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ
ಪೋಷಕರೊಂದಿಗೆ ಆನ್ ಲೈನ್ ಮೂಲಕ ಗೌರವನ್ವಿತ ಪ್ರಧಾನ ಮಂತ್ರಿಯವರು ನೇರವಾಗಿ
ಸಂವಹನ ನಡೆಸುವರು.
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಆಡಳಿತ ಹಾಗೂ ಅಭಿವೃದ್ಧಿರವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿ, ಶಿಕ್ಷಕರು ವಿದ್ಯಾರ್ಥಿಗಳು
ಹಾಗೂ ಪೋಷಕರು ದಿನಾಂಕ:12-01-2024ರೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ
ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.