ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ/ಅನುದಾನಿತ/ಖಾಸಗಿ ಶಾಲೆಯ ಮುಖ್ಯ ಗುರುಗಳ ಗಮನಕ್ಕೆ

Institute login ನಲ್ಲಿ VERIFY ಮಾಡುವ ಕುರಿತು ವೀಡಿಯೋ ಮಾಹಿತಿ

ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಎನ್ ಪಿ ಎಸ್ ಪೋರ್ಟಲ್ ನ ಲಾಗಿನ್ ನಲ್ಲಿ ವಿದ್ಯಾರ್ಥಿಗಳ ಅರ್ಜಿಗಳನ್ನು ಅತಿ ಶೀಘ್ರವೇ ಪರೀಶೀಲಿಸುವಂತೆ ಸೂಚನೆ

2021-22 ನೇ ಸಾಲಿನ ರಾಷ್ಟ್ರೀಯ ವಿದ್ಯಾರ್ಥಿ ವೇತನ (NPS) ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15.12.2021 ಆಗಿದ್ದು, ದ ಕ ಜಿಲ್ಲೆಯ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು ಎನ್ ಪಿ ಎಸ್ ಪೋರ್ಟಲ್ ನ ಲಾಗಿನ್ ನಲ್ಲಿ ವಿದ್ಯಾರ್ಥಿಗಳ ಸುಮಾರು 52460 ಅರ್ಜಿಗಳಲ್ಲಿ 12732 ಅರ್ಜಿಗಳನ್ನು ವಿಲೇವಾರಿ ಮಾಡಲು ಬಾಕಿ ಇರುತ್ತದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ದ.ಕ ಜಿಲ್ಲೆಯ ಪ್ರಕ್ರಿಯೆ ಕುಂಠಿತವಾಗಿರುವ ಬಗ್ಗೆ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇವರು ವೀಡಿಯೋ ಸಂವಾದದಲ್ಲಿ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ದ‌‌.ಕ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲಾ ತಾಲೂಕು ಸಿ ಆರ್ ಪಿ ಗಳಿಗೆ ಹಾಗೂ ಸರ್ಕಾರಿ/ಖಾಸಗಿ/ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಲಾಗಿದೆ.

IMG 20211220 WA0010 min
Sharing Is Caring:

Leave a Comment