ನಿರಕ್ಷೇಪಣಾ ಪ್ರಮಾಣ ಪತ್ರ‌ ಪಡೆಯುವ ನಿಯಮದಲ್ಲಿ ತಿದ್ದುಪಡಿ

WhatsApp Group Join Now
Telegram Group Join Now

ಈ ಮೊದಲು ಸರಕಾರಿ ನೌಕರರು ಸೇವೆ ಸಲ್ಲಿಸುತ್ತಲೇ ಬೇರೆ ಹುದ್ದೆಗೆ ನೇಮಕಾತಿ ಹೊಂದಲು ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲೇ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಮುಖ್ಯಸ್ಥರಿಂದ NOC (No objection Certificate) ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿತ್ತು. ಆದರೆ ಇದೀಗ ಆ ನಿಯಮವನ್ನು ತಿದ್ದುಪಡಿ ಮಾಡಿ ಆಯ್ಕೆಯಾದ ನಂತರವೂ ಇಲಾಖೆಯಿಂದ NOC ಪಡೆಯಲು ಅವಕಾಶ ಕಲ್ಪಿಸಲಾಗಿದೆ.


ಒಬ್ಬ ಸರ್ಕಾರಿ ನೌಕರರು ಅಥವಾ ಬೇರೆ ಯಾವುದೇ ರಾಜ್ಯ ಸರಕಾರದಲ್ಲಿ ಅಥವಾ ಸಾರ್ವಜನಿಕ ವಲಯದ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯು ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಯೊಂದಕ್ಕೆ ಆತನ ಆಯ್ಕೆ ಅಧಿ ಸೂಚನೆಗೊಂಡ ಕೂಡಲೇ ಆದರೆ ಅವನಿಗೆ ನೇಮಕಾತಿ ಆದೇಶ ಹೊರಡಿಸುವ ಮುನ್ನ ನಿರಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದು ಅವನನ್ನು ಅಂತಹ ಹುದ್ದೆಗೆ ನೇಮಕಾತಿ ಮಾಡಲು ಸಕ್ಷಮವಾದ ಪ್ರಾಧಿಕಾರಕ್ಕೆ ಅದನ್ನು ಹಾಜರುಪಡಿಸದ ಅಥವಾ ಅದನ್ನು ನಿಯಮ 11ರ ಅನುಸಾರ ಪಡೆದಿದ್ದಾನೆ ಎಂದು ಪರಿಗಣಿತಗೊಳ್ಳದ ಹೊರತು ಆತನು ನೇಮಕಾತಿ ಹೊಂದಲು ಅರ್ಹನಾಗಿರತಕ್ಕದಲ್ಲ.

ಸದರಿ ನಿಯಮಗಳ ನಿಯಮ 11 ಬದಲಿಗೆ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು.
ಸರ್ಕಾರಿ ನೌಕರರ ಅರ್ಜಿಗಳಿಗೆ ಸಂಬಂಧಿಸಿದ ಕಾರ್ಯವಿಧಾನ:-
ಯಾವುದೇ ಸೇವೆ ಅಥವಾ ಹುದ್ದೆಗೆ ಆಯ್ಕೆಯಾಗಲು ಅರ್ಜಿ ಸಲ್ಲಿಸುವ ಸರ್ಕಾರಿ ನೌಕರರು ತನ್ನ ಅರ್ಜಿಯನ್ನು ನೇರವಾಗಿ ಆಯ್ಕೆ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು. ಆತನ ಆಯ್ಕೆಯನ್ನು ಅಧಿಸೂಚಿತಗೊಳಿಸಿದ ಕೂಡಲೇ ಆತನು ಆಯ್ಕೆಯಾದ ವಾಸ್ತವಾಂಶವನ್ನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಇಲಾಖಾ ಮುಖ್ಯಸ್ಥರಿಗೆ ತಿಳಿಸತಕ್ಕದ್ದು ಹಾಗೂ ಆತನು ಆಯ್ಕೆಯಾದ ಹುದ್ದೆಯ ನೇಮಕಾತಿಯನ್ನು ಒಪ್ಪಿಕೊಳ್ಳಲು ಅನುವಾಗುವಂತೆ ನಿರಕ್ಷೇಪಣಾ ಪತ್ರವನ್ನು ನೀಡುವಂತೆ ಕೋರತಕ್ಕದ್ದು


ಸರ್ಕಾರಿ ನೌಕರನ್ನು ಶಿಸ್ತು ಕ್ರಮಕ್ಕೆ ಒಳಗೊಂಡಿದ್ದಲ್ಲಿ ಅಥವಾ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ನಡಾವಳಿಗಳನ್ನು ಎದುರಿಸುತ್ತಿದ್ದಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ಅಥವಾ ಸರ್ಕಾರಿ ನೌಕರ ಮತ್ತು ಸರ್ಕಾರದ ನಡುವೆ ಮಾಡಿಕೊಳ್ಳಲಾದ ಯಾವುದೇ ನಿರ್ದಿಷ್ಟ ಒಪ್ಪಂದಕ್ಕೆ ಅಸಂಗತವಾದಂತಹ ಸಂದರ್ಭರಲ್ಲಿ ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಿ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡಬಾರದೆಂದು ಇಲಾಖಾ ಮುಖ್ಯಸ್ಥರು ಪರಿಗಣಿಸಿದ ಹೊರತು ಸಾಮಾನ್ಯವಾಗಿ ಇಲಾಖಾ ಮುಖ್ಯಸ್ಥರು ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡತಕ್ಕದ್ದು. ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಕೋರಿ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಿದ ಅರ್ಜಿಯ ದಿನಾಂಕದ 30 ದಿನಗಳ ಒಳಗಾಗಿ ಇಲಾಖಾ ಮುಖ್ಯಸ್ಥರು ಈ ಕುರಿತು ನಿರ್ಣಯವನ್ನು ಕೈಗೊಳ್ಳತಕ್ಕದ್ದು.


ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ ತಾನಾಗಿ ಕೋರಿಕೆ ಸಲ್ಲಿಸುವ ಉಪಕ್ರಮದ ಜವಬ್ದಾರಿಯು ಸರ್ಕಾರಿ ನೌಕರನದ್ದಾಗಿದ್ದು, ಆಯ್ಕೆಗೊಂಡ ಹುದ್ದೆಗೆ ಅವನಿಗೆ ನೇಮಕಾತಿ ಆದೇಶ ಹೊರಡಿಸುವ ಮುನ್ನ ನಿರಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆದು ಆಯ್ದುಕೊಂಡ ಹುದ್ದೆಗೆ ಅವನನ್ನು ನೇಮಕಾತಿ ಮಾಡಲು ಸಕ್ಷಮವಾದ ಪ್ರಾಧಿಕಾರಕ್ಕೆ ಸಲ್ಲಿಸುವುದಕ್ಕೆ ಅವನು ಹೊಣೆಗಾರನಾಗಿರುತ್ತಾನೆ. ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಪರಿಗಣಿತಗೊಂಡಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ತಿಳಿಸಲು ಇಲಾಖಾ ಮುಖ್ಯಸ್ಥರು ಹೊಣೆಗಾರರಾಗಿರತಕ್ಕದ್ದು . ಬೇರೆ ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಸಲ್ಲಿಸುವ ಅರ್ಜಿಗಳು ಬೇರೆ ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರಕಾರ ಅಥವಾ ಸಾರ್ವಜನಿಕ ವಲಯದ ಸಂಸ್ಥೆ ಒಂದರಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಸಲ್ಲಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಉಪನಿಯಮ 1ರಿಂದ 3ರವರೆಗೆ ನಿರ್ದಿಷ್ಟ ಪಡಿಸಲಾದ ಕಾರ್ಯವಿಧಾನವು ಉಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸತಕ್ಕದ್ದು.

WhatsApp Group Join Now
Telegram Group Join Now
Sharing Is Caring:

Leave a Comment