ಮದ್ಯ, ಗಾಂಜಾ, ಗುಟ್ಕಾ, ಸಿಗರೇಟ್ , ರಾಸಾಯನಿಕ ಔಷಧಿಗಳು ಯಾವುದೇ ರೀತಿಯ ಮಾದಕ ದ್ರವ್ಯ ಸೇವನೆಯು ದೇಶಾದ್ಯಂತ ಬೆಳೆಯುವ ಭೀತಿಯಾಗಿದೆ. ಸಣ್ಣ ವಯಸ್ಸಿನ ಮಕ್ಕಳು ಇಂತಹ ವ್ಯಸನಗಳಿಗೆ ದಾಸರಾಗುವುದು ತುಂಬಾ ಸುಲಭ. ಅಂತಹ ವಸ್ತುಗಳ ಇರುವಿಕೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಭ್ರಮ ಶನಿವಾರದಂದು ಮಾಡ್ಯುಲ್ ಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ ಮಾಡ್ಯುಲ್ ಗಳನ್ನು 3 ಘಟಕಗಳಾಗಿ ವಿಂಗಡಿಸಿದೆ.
೧. ಅರಿವು ೨.ಅನುಭವ ೩.ಅವಲೋಕನ/ ಪ್ರತಿಫಲನ
ಶಿಕ್ಷಕರ ಕರ್ತವ್ಯಗಳು
- ಎಲ್ಲಾ ಮಕ್ಕಳು ಆಯಾ ಹಂತಗಳಿಗೆ ನೀಡಿರುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು.
- ಚಟುವಟಿಕೆಗಳಲ್ಲಿ ಯಾವ ವಿದ್ಯಾರ್ಥಿಯು ಹೊರಗುಳಿಯದಂತೆ ಅಥವಾ ಒಂದೇ ವಿದ್ಯಾರ್ಥಿ ಪುನರಾವರ್ತನೆ ಆಗದಂತೆ ಪ್ರತಿ ಬಾರಿ ವಿವಿಧ ವಿದ್ಯಾರ್ಥಿಗಳು ಚಟುವಟಿಕೆಗಳ ನೇತೃತ್ವ ವಹಿಸುವುದನ್ನು ಖಾತ್ರಿಪಡಿಸುವುದು.
- ಮಕ್ಕಳು ಚಟುವಟಿಕೆ ಕೈಗೊಳ್ಳುವಾಗ ಪೂರ್ಣ ಸ್ವಾತಂತ್ರ್ಯ ನೀಡುವುದು ಅವಶ್ಯಕತೆ ಇದ್ದಾಗ ಮಾತ್ರ ಶಿಕ್ಷಕರು ಮಾರ್ಗದರ್ಶನ ನೀಡುವುದು.
- ನಿರೂಪಿಸುವ ವಿದ್ಯಾರ್ಥಿಗಳು ಅಪೇಕ್ಷಿಸಿದರೆ ಮಾತ್ರ ಮಾರ್ಗದರ್ಶನ ನೀಡುವುದು ಇಲ್ಲದಿದ್ದರೆ ಮಧ್ಯಪ್ರವೇಶಿಸುವಂತಿಲ್ಲ.
- ವಿದ್ಯಾರ್ಥಿ ನಾಯಕ ನಿರೂಪಕರು ಚರ್ಚೆಗಳ ಸಾರಾಂಶ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಶಿಕ್ಷಕರು ಅವರಿಗೆ ಮಾರ್ಗದರ್ಶನ ನೀಡುವುದು.
- ಶಾಲೆ ಹಾಗೂ ತರಗತಿಯಲ್ಲಿ ಚರ್ಚೆ ಹಾಗೂ ಕ್ರೀಡಾ ಪ್ರದರ್ಶನಗಳಿಗೆ ಪ್ರತ್ಯೇಕ ಸ್ಥಳ ಗುರ್ತಿಸಿ ಅವಕಾಶ ಒದಗಿಸುವುದು.
- ಚಟುವಟಿಕೆ ನಿರ್ವಹಿಸುವ ಮುನ್ನ ಅಗತ್ಯ ಲೇಖನ ಸಾಮಗ್ರಿ ಹಾಗೂ ಇತರೆ ವಸ್ತುಗಳು ಲಭ್ಯವಾಗಿವೆ ಎಂದು ಖಾತ್ರಿಪಡಿಸುವುದು.
- ಗುಂಪು ಮಾಡುವಾಗ ಬಾಲಕ ಹಾಗೂ ಬಾಲಕಿಯರಿಗೆ ಸಮಾನ ಅವಕಾಶ ಒದಗಿಸುವುದು.
- ಬ್ಯಾಗ್ರಹಿತ ಜನ ದಿನದ ಉದ್ದೇಶದಂತೆ ಮಕ್ಕಳಲ್ಲಿ ಉತ್ಸಾಹ ಕಡಿಮೆಯಾಗದಂತೆ ಅರ್ಥಪೂರ್ಣವಾಗಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವುದು.
ತರಗತಿ : 1-3 ಸಮಯ:60 ನಿಮಿಷ
.
.ನಿರೂಪಕರಿಗೆ / ವಿದ್ಯಾರ್ಥಿ ನಾಯಕರಿಗೆ ಸೂಚನೆ
ಚಟುವಟಿಕೆ 1: ಅರಿವು
ಮಕ್ಕಳಿಗೆ 5-6 ಗುಂಪುಗಳಾಗಿ ವಿಂಗಡಿಸಿ ಫ್ಲಾಶ್ ಕಾರ್ಡ್ ತೋರಿಸಿ ವಯಸ್ಕರ ಅನುಮತಿ ಇಲ್ಲದೆ ಈ ವಸ್ತುಗಳನ್ನು ಬಳಸಬಹುದೇ ಎಂದು ಕೇಳಬೇಕು. ಈ ಪಟ್ಟಿಗೆ ಹೆಚ್ಚಿನ ವಸ್ತುಗಳನ್ನು ಸೇರಿಸಬಹುದು. ಈ ವಸ್ತುಗಳನ್ನು ಹಿರಿಯರ ಅನುಮತಿ ಇಲ್ಲದೆ ಯಾಕೆ ಬಳಸಬಾರದು ? ಎಂದು 20 ನಿಮಿಷ ಚರ್ಚೆ ಮಾಡಲು ಅವಕಾಶ ನೀಡಬೇಕು.
ಚಟುವಟಿಕೆ 2 : ಅನುಭವ
ಫ್ಲಾಷ್ ಕಾರ್ಡ್ ತೋರಿಸಿ ಅಲ್ಲಿ ನೀಡಲಾದ ಪ್ರಶ್ನೆಗಳನ್ನು ನಿರೂಪಕ ವಿದ್ಯಾರ್ಥಿಗಳು ಕೇಳಬೇಕು.
- ಕೊಟ್ಟಿರುವ ವಸ್ತು ಯಾವುದು?
- ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವೇ?
- ನಿಮ್ಮ ಕುಟುಂಬ ಅಥವಾ ನೆರೆಹೊರೆಯವರು ಇಂತಹ ವಸ್ತುಗಳನ್ನು ಬಳಸುವುದನ್ನು ನೋಡಿದ್ದೀರಾ?
- ಯಾರಾದ್ರೂ ಇಂತಹ ವಸ್ತುಗಳನ್ನು ಬಳಸಿದಾಗ ಉಂಟಾದ ಪರಿಣಾಮ ಏನು?
- ಈ ಉತ್ಪನ್ನಗಳನ್ನು ಬಳಸುವುದು ಸರಿಯೇ?
- ಇವುಗಳನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳೇನು
ಕೊಟ್ಟಿರುವ ವಸ್ತುಗಳನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಚರ್ಚಿಸುವುದು.
ಚಟುವಟಿಕೆ : 3 ಅವಲೋಕನ
ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಗುಂಪಿನಲ್ಲಿ ಚಿತ್ರಗಳನ್ನು ರಚಿಸಲು ತಿಳಿಸುವುದು. ಹಾಗೂ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವುದು.
ತರಗತಿ : 4-5. ಸಮಯ : 60 ನಿಮಿಷ
ಚಡುವಟಿಕೆ : 1 ಅರಿವು
ವಿದ್ಯಾರ್ಥಿಗಳನ್ನು 4-5 ಗುಂಪುಗಳನ್ನಾಗಿ ಮಾಡಿ ಫ್ಲಾಷ್ ಕಾರ್ಡ್ ನಲ್ಲಿ ನೀಡಿದ ಚಟುವಟಿಕೆ ಪೂರ್ಣಗೊಳಿಸುವುದು.
ಚಟುವಟಿಕೆ 2: ಅನುಭವ
ಶಾಲೆಯ ಸುತ್ತ ಮುತ್ತ ಇರುವ ವಿಷಕಾರಿ ಹಾಗೂ ವಿಷಕಾರಿಯಲ್ಲದ ವಸ್ತುಗಳನ್ನು ಸಂಗ್ರಹಿಸುವುದು. ಏಕೆ ವಿಷಕಾರಿ? ಎಂಬುವುದನ್ನು ಚರ್ಚಿಸುವುದು.
ಚಟುವಟಿಕೆ : 3 ಅವಲೋಕನ
ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಘೋಷಣೆ ರಚಿಸುವುದು.
ತರಗತಿ : 6-8. ಸಮಯ : 60 ನಿಮಿಷ
ಚಟುವಟಿಕೆ : 1 ಅರಿವು
ಫ್ಲಾಷ್ ಕಾರ್ಡ್ ನಲ್ಲಿ ನೀಡಿದಂತೆ ಚಟುವಟಿಕೆ ಪೂರ್ಣಗೊಳಿಸುವುದು.
ಚಟುವಟಿಕೆ 2 : ಅನುಭವ
ನೀಡಿದ ಕಥೆಯನ್ನು ಪೂರ್ಣಗೊಳಿಸುವುದು.
ಚಟುವಟಿಕೆ 3: ಅವಲೋಕನ
ಬೀದಿ ನಾಟಕ, ಕವಿತೆ, ಹಾಡು, ಪೋಸ್ಟರ್ ರಚನೆ ಮೊದಲಾದ ಚಟುವಟಿಕೆ ನಡೆಸುವುದು.
ಪ್ರತಿಜ್ಞೆ