ವಿದ್ಯಾರ್ಥಿಗಳ ಬ್ಯಾಗ್ ಹೊರೆ ಕಡಿಮೆ ಮಾಡಲು ತಿಂಗಳ 3ನೇ ಶನಿವಾರದಂದು “ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನ” ವನ್ನು ಆಚರಿಸಲು ಸೂಚನೆ ನೀಡಲಾಗಿದೆ
ವಿದ್ಯಾರ್ಥಿಗಳ ಕಲಿಕೆಯನ್ನು ಸಂತಸದಾಯಕವಾಗಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳ ಕುರಿತಾದ ಕಾಳಜಿಯಿಂದ ಶಾಲಾ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಲು ಚಟುವಟಿಕೆಗಳನ್ನೊಳಗೊಂಡ ಮಾರ್ಗಸೂಚಿಯನ್ನು ರೂಪಿಸಿ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಮಾಡೆಲ್ ನಲ್ಲಿನ ಚಟುವಟಿಕೆಗಳಿಗನುಸಾರ ಪ್ರತಿ ಮಾಹೆಯ 3ನೇ ಶನಿವಾರದಂದು “ಸಂಭ್ರಮ ಶನಿವಾರ” ಬ್ಯಾಗ್ ರಹಿತ ದಿನವನ್ನು ಆಚರಿಸಲು ಸೂಚನೆ ನೀಡಲಾಗಿರುತ್ತದೆ.
ಈ ಸಂಬಂಧ ಇಲಾಖೆಯ ಆದೇಶಗಳ ಪಾಲನೆ ಮತ್ತು ಅನು ಪಾಲನೆ ಸಂಬಂಧ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶಾಲಾ ಬ್ಯಾಗ್ ಹೊರೆಯನ್ನು ಕಡಿತಗೊಳಿಸುವ ಕ್ರಮವನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಶಾಲಾ ಭೇಟಿ ಹಾಗೂ ಪರಿಶೀಲನೆ ಮೂಲಕ ಖಾತ್ರಿಪಡಿಸಿಕೊಳ್ಳಲು ನಿರ್ದೇಶನವನ್ನು ನೀಡಲಾಗಿರುತ್ತದೆ. ಹಾಗಾಗಿ ಅನೇಕ ಶಾಲೆಗಳಲ್ಲಿ ಶಾಲಾ ಮಕ್ಕಳು ಶಾಲಾ ಬ್ಯಾಗ್ ಹೊರೆಯನ್ನು ಅನುಭವಿಸುತ್ತಿರುವ ಕುರಿತು ದೂರುಗಳು ಇಲಾಖೆಯಲ್ಲಿ ಸ್ವೀಕೃತವಾಗಿರುತ್ತವೆ.
ಈ ಹಿನ್ನಲೆಯಲ್ಲಿ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡುವ ಕುರಿತು ಇಲಾಖೆಯು ಹೋರಾಡಿಸಿದ ನಿಗದಿತ ಮಾರ್ಗಸೂಚಿ ಮತ್ತು ಅನು ಪಾಲನೆ ಕುರಿತು ಪರಿಶೀಲನೆ ನಡೆಸಿ ಎಲ್ಲಾ ಶಾಲೆಗಳು ಸದರಿ ನಿರ್ದೇಶನಗಳನ್ನು ಅನುಸರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮತ್ತು ವಿಫಲವಾಗಿರುವ ಶಾಲೆಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲು ಹಾಗೂ ಈ ಬಗ್ಗೆ ವರದಿಯನ್ನು ದಿನಾಂಕ 12.08.2024ರ ಒಳಗೆ DSERT ಕಚೇರಿಗೆ ಸಲ್ಲಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.