ಸರ್ಕಾರಿ ಶಾಲೆಗಳ ಅವರಣ ಹಾಗೂ ಕಟ್ಟಡಗಳಲ್ಲಿ ಜಾಹಿರಾತು ಫಲಕಗಳನ್ನು ಅಳವಡಿಸಲು ಅವಕಾಶ ನೀಡದಿರುವ ಬಗ್ಗೆ
.ಶಶಿ ಅಡ್ವರ್ಟೈಸಿಂಗ್ ಕಂಪನಿ, ಮಲ್ಲೇಶ್ವರಂ, ಬೆಂಗಳೂರು ರವರು ಬೆಂಗಳೂರು ಉತ್ತರ ಜಿಲ್ಲೆಯ ಸರ್ಕಾರಿ ಶಾಲೆಯ ಮೇಲಾವಣಿ ಮೇಲೆ ಒಂದು ವರ್ಷದ ಅವಧಿಗೆ ಬಾಡಿಗೆ ಆಧಾರದ ಮೇಲೆ ಒಪ್ಪಂದದ ಮೇರೆಗೆ ಜಾಹೀರಾತು ಫಲಕ ಅಳವಡಿಸಲು ಅನುಮತಿಯನ್ನು ಉಪನಿರ್ದೇಶಕರು ಬೆಂಗಳೂರು ಉತ್ತರ ಜಿಲ್ಲೆ ರವರನ್ನು ಕೋರಿರುವ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಉಲ್ಲೇಖ (2)ರಲ್ಲಿ ಸಲ್ಲಿಸಿರುತ್ತಾರೆ.ಈ ಸಂಬಂಧ ಪರಿಶೀಲಿಸಲಾಗಿ, ಉಲ್ಲೇಖ(1) ರ ಸರ್ಕಾರದ ಪತ್ರದಲ್ಲಿ ಶಿಕ್ಷಣ ಇಲಾಖೆಯ ಖಾಲೆ ಜಾಗ ಕಟ್ಟಡದಲ್ಲಿ ವಾಣಿಜ್ಯ ಜಾಹೀರಾತು ಫಲಕಗಳನ್ನು ಆಳವಡಿಸುವುದು ಸರ್ಕಾರದ ನೀತಿಗೆ ವಿರುದ್ಧವಾಗಿರುತ್ತದೆ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಶಾಲೆಗಳ ಆವರಣ ಹಾಗೂ ಕಟ್ಟಡಗಳಲ್ಲಿ ವಾಣಿಜ್ಯ ಜಾಹೀರಾತು ಫಲಕಗಳನ್ನು ಅಳವಡಿಸಲು ಅವಕಾಶ ನೀಡಬಾರದೆಂದು ಸೂಚಿಸಿದೆ. ಅಲ್ಲದೆ, ಪ್ರಸ್ತಾಪಿತ ವಿಷಯದ ಕುರಿತು ಪ್ರಸ್ತಾವನೆಗಳನ್ನು ಸ್ವೀಕರಿಸಿದಲ್ಲಿ ತಮ್ಮ ಹಂತದಲ್ಲಿಯೇ ಅರ್ಜಿದಾರರಿಗೆ ಹಿಂಬರಹ ನೀಡುವುದು.