2024-25ನೇ ಶೈಕ್ಷಣಿಕ ಸಾಲಿನ NMMS ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ತೆರೆಯಲಾಗಿದೆ. ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ತಿಳಿಸಿದೆ.
NMMS ವಿದ್ಯಾರ್ಥಿ ವೇತನಕ್ಕಾಗಿ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನಂತೆ ವೇಳಾಪಟ್ಟಿ ನಿಗದಿ ಪಡಿಸಲಾಗಿದೆ.
ವೇಳಾಪಟ್ಟಿ
NMMS’ ವಿದ್ಯಾರ್ಥಿ ವೇತನ ಪೋರ್ಟಲ್ ಆರಂಭ : 30-6-2024
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು/ನವೀಕರಿಸಲು ಅಂತಿಮ ದಿನಾಂಕ : 31-8-2024
ಶಾಲಾ/ ಕಾಲೇಜು ಹಂತದಲ್ಲಿ INO ಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ : 15-9-2024
ಜಿಲ್ಲಾ ಹಂತದಲ್ಲಿ DNO ಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮ ದಿನಾಂಕ : 30-9-2024
ಪ್ರಸಕ್ತ ಸಾಲಿನಲ್ಲಿ National Scholarship Portal ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಮುಖ ಅಂಶಗಳು.
2024-25ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಗಳನ್ನು ಸಲ್ಲಿಸಲು One Time Registration (OTR) ಕಡ್ಡಾಯವಾಗಿರುತ್ತದೆ.
One Time Registration (OTR) ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯ (unique) ಸಂಖ್ಯೆಯಾಗಿದ್ದು ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನಲ್ಲಿ ಅರ್ಜಿ ಸಲ್ಲಿಸಲು ಅನ್ವಯವಾಗುತ್ತದೆ.
NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSP ನಲ್ಲಿ ನೊಂದಾಯಿತ ಮೊಬೈಲ್ ಗೆ SMS ಮೂಲಕ Reference / OTR ಕಳುಹಿಸಲಾಗುತ್ತಿದೆ
Fresh ವಿದ್ಯಾರ್ಥಿಗಳಿಗೆ SMS ಮೂಲಕ Reference ID ಅಥವಾ OTR ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ (Fresh) 2 National Scholarship Portal , Student Login ಲಭ್ಯವಿರುವ “Know your OTR” ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರಫೆರನ್ಸ್ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
2024-25 ನೇ ಸಾಲಿನಲ್ಲಿ NSP ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು. ( ಆಧಾರ್ ನಲ್ಲಿ ಅತಿ ಚಿಕ್ಕ ವಯಸ್ಸಿನ ಫೋಟೊಗಳಿರುವುದರಿಂದ Face authentication Error ಎಂದು ಕಾಣಿಸಿಕೊಳ್ಳುತ್ತದೆ)
OTR ಪಡೆಯುವ ವಿಧಾನ
Step 1
Play store ನಲ್ಲಿ Nsp OTR app download ಮಾಡಿಕೊಳ್ಳಿ.
ಇದರ ಜೊತೆಗೆ photo scan ಆಗಲು Adhar faceRD ಎಂಬ app ಕೂಡ download ಮಾಡಿಕೊಂಡಿರಬೇಕು.
App ತೆರೆದಾಗ Login– register—ekyc by faceauth ಎಂಬ ಮೂರು option ಕಾಣಿಸುತ್ತದೆ.
Step 2
Register ಮೇಲೆ click ಮಾಡಿ. Guidlines ಬರುತ್ತದೆ box ಮೇಲೆ click ಮಾಡಿ Next ಕೊಡಿ. ನಂತರ ಮೊಬೈಲ್ ಸಂಖ್ಯೆ ನಮೂದಿಸಿ. OTP ಬರುತ್ತದೆ ಅದನ್ನು ನಮೂದಿಸಿ. ನಂತರ ಮಗುವಿನ ಆಧಾರ್ ಸಂಖ್ಯೆ ನಮೂದಿಸಿ. ಆಧಾರ್ ಲಿಂಕ್ ಆದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ ಕೊಟ್ಟಿರುವ capcha ನಮೂದಿಸಿ verify ಕೊಟ್ಟಾಗ ಮಗುವಿನ ಆಧಾರ್ ಮಾಹಿತಿ ಸಿಗುತ್ತದೆ.
Step 4
Reference ನಂಬರ್ ಬಳಸಿ ಅಲ್ಲಿಯೇ Login ಮೇಲೆ click ಮಾಡಿ ಅಥವಾ app ನಲ್ಲಿರುವ ekyc faceauth ಎಂಬಲ್ಲಿ click ಮಾಡಿ. ಅಲ್ಲಿ ಮೊದಲಿಗೆ reference number ಎಂದು ಇರುವಲ್ಲಿ reference no ನಮೂದಿಸಿ. OTP ಬರುತ್ತದೆ. ನಮೂದಿಸಿ capcha ನಮೂದಿಸಿದಾಗ ಮಗುವಿನ ಮಾಹಿತಿ ಬರುತ್ತದೆ. Proceed to face authentication ಎಂಬಲ್ಲಿ click ಮಾಡಿದಾಗ ಮಗುವಿನ ಮುಖವನ್ನು ಫ್ರೇಮ್ ಗೆ ಸರಿಯಾಗಿ ಇಟ್ಟು ಫೋಟೋ click ಮಾಡಬೇಕು. ಸರಿಯಾಗಿ click ಆದರೆ successful ಎಂದು ಬರುತ್ತದೆ. ಜೊತೆಗೆ 4 ಅಂಕಿಗಳ OTR ಸಂಖ್ಯೆ ಬರುತ್ತದೆ.
Step 3
ತಂದೆಯ ಹೆಸರು, ತಾಯಿಯ ಹೆಸರು, email address ನಮೂದಿಸಿ capcha ನಮೂದಿಸಿ submit ಕೊಟ್ಟಾಗ reference ನಂಬರ್ ಸಿಗುತ್ತದೆ. ನಿಮ್ಮ ಮೊಬೈಲ್ ಗೆ SMS ಮೂಲಕವು ಕಳುಹಿಸಲಾಗುತ್ತದೆ.
ಆಧಾರ್ ಸಂಖ್ಯೆ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯ ದಾಖಲೆಗಳು:
ಮೊಬೈಲ್ ನಂಬರ್
ವಿದ್ಯಾರ್ಥಿಯ ಆಧಾರ್ ಸಂಖ್ಯೆ
ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ.
ಆಧಾರ್ ಸಂಖ್ಯೆ ಇಲ್ಲದೇ ಇರುವ ವಿದ್ಯಾರ್ಥಿಗಳು OTR ಪಡೆಯಲು ಅಗತ್ಯವಿರುವ ದಾಖಲೆಗಳು
ವಿದ್ಯಾರ್ಥಿಯು ಆಧಾರ್ ಸಂಖ್ಯೆಗಾಗಿ ಸಲ್ಲಿಸಿದ ಅರ್ಜಿಯ EID ಸಂಖ್ಯೆ.
ಪೋಷಕರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ
ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ.
ಪೋಷಕರ ಆಧಾರ್ ಸಂಖ್ಯೆ.
NMMS ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ಮುಂದೂಡಿರುವ ಕುರಿತು ಸುತ್ತೋಲೆ,