ರಾಜ್ಯ ಮಟ್ಟದ ಅನುಪಮ ಸೇವಾ ಪುರಸ್ಕಾರಕ್ಕೆ ನೆರ್ಲ ಶಾಲೆಯ ಮುಖ್ಯ ಗುರುಗಳು ಶಾಂತಿ ವಿ ಭಟ್ ಆಯ್ಕೆ

ಶಾಂತಿ ವಿ ಭಟ್
ದ.ಕ. ಜಿ.ಪಂ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನೇರ್ಲ ಇಚ್ಲಂಪಾಡಿ.

IMG 20210307 WA0007
ಅನುಪಮ ಸೇವಾ ಪುರಸ್ಕಾರ

ಉತ್ತರ ಕನ್ನಡ ಜಿಲ್ಲೆಯ ಶ್ರೀ ಮತ್ತು ಶ್ರೀಮತಿ ಇವರ ಮಗಳಾಗಿ 12.05.1961 ರಲ್ಲಿ ಜನಿಸಿದ ಶ್ರೀಮತಿ ಶಾಂತಿ ವಿ.ಭಟ್ ರವರು ಹುಟ್ಟೂರಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ ಸರಕಾರಿ ತರಬೇತಿ ಕಾಲೇಜು ಕುಮಟಾ ಉತ್ತರ ಕನ್ನಡ ಇಲ್ಲಿಂದ ಶಿಕ್ಷಕಿ ತರಬೇತಿಯನ್ನು ಪಡೆದು 1982 ರಲ್ಲಿ ಸರಕಾರಿ ಶಾಲಾ ಶಿಕ್ಷಕಿಯಾಗಿ ಸ.ಹಿ.ಪ್ರಾ. ಶಾಲೆ ತುಂಬೆಬೀಡು ಉ.ಕ ಇಲ್ಲಿ ಸೇವೆಗೆ ಸೇರಿ ಬಳಿಕ 1985 ರಿಂದ 1987 ರವರೆಗೆ ಸ.ಹಿ.ಪ್ರಾ ಶಾಲೆ ಹೆಬ್ಬಾರ್ನಕೆರೆ ಹೊನ್ನಾವರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. 1987 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸ.ಹಿ.ಪ್ರಾ. ಶಾಲೆ ಕಡಬ ಇಲ್ಲಿಗೆ ವರ್ಗಾವಣೆಗೊಂಡು ಬಳಿಕ 1990 ರಲ್ಲಿ ಸ.ಹಿ.ಪ್ರಾ. ಶಾಲೆ ಪಡುಬೆಟ್ಟು ಇಲ್ಲಿ 1994 ರವರೆಗೆ ಕರ್ತವ್ಯ ನಿರ್ವಹಿಸಿ,1994 ರಲ್ಲಿ ಸ.ಹಿ.ಪ್ರಾ. ಶಾಲೆ ನೆಲ್ಯಾಡಿಗೆ ವರ್ಗಾವಣೆಗೊಂಡು ಸುಮಾರು ಹದಿನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತಾರೆ. ಇದೇ ಅವಧಿಯಲ್ಲಿ ಪೂರ್ಣಕಾಲಿಕ ಮುಖ್ಯಗುರುಗಳಾಗಿ ಬಡ್ತಿಗೊಂಡು ಸ.ಹಿ.ಪ್ರಾ.ಶಾಲೆ ರೆಂಜಿಲಾಡಿ ಬಳಿಕ ಅಲ್ಲಿಂದ ವರ್ಗಾವಣೆಗೊಂಡು ಪ್ರಸ್ತುತ ಸ.ಉ.ಪ್ರಾ. ಶಾಲೆ ನೇರ್ಲ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತನ್ನ ಕರ್ತವ್ಯದ ಅವಧಿಯಲ್ಲಿ ಶಾಲಾ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಗೆ ಸದಾ ತಮ್ಮನ್ನು ತೆರೆದುಕೊಂಡಿರುವ ಇವರು ಭಾರತ ಸ್ಕೌಟ್ಸ್- ಗೈಡ್ಸ್ ನಿಂದ ತರಬೇತಿ ಪಡೆದು ಹಿಮಾಲಯ ವುಡ್ ಬ್ಯಾಡ್ಜ್ ಪಡೆದುಕೊಂಡಿದ್ದು ವಿದ್ಯಾರ್ಥಿಗಳಿಗೂ ಗೈಡ್ಸ್ ತರಬೇತಿ ನೀಡಿ ಅನೇಕ ಗೈಡ್ಸ್ ಶಿಬಿರಗಳನ್ನು ಆಯೋಜಿಸಿರುತ್ತಾರೆ ಹಾಗೆಯೇ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ, ರಾಷ್ಟ್ರಪತಿ ಪುರಸ್ಕಾರ ಕೊಡಿಸುವಲ್ಲಿಯೂ ಸಫಲರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಚಿನ್ನರ ಅಂಗಳ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿ ರುತ್ತಾರೆ. ತಮ್ಮ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗಾಗಿ 2003 ರ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಶಾಂತಿವನ ಟ್ರಸ್ಟ್ ನಿಂದ ಯೋಗ ತರಬೇತಿಯನ್ನು ಪಡೆದಿರುವ ಇವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸುತ್ತಿದ್ದಾರೆ. ಶಾಲೆಗಳಲ್ಲಿ ವಿವಿಧ ಸಂಘಗಳನ್ನು ರಚಿಸಿ ಅವುಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತಿದ್ದು ಇಲಾಖೆಯಿಂದ ಸಿಗುವ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ. ತೋಟಗಾರಿಕೆ, ಹೊಲಿಗೆ, ಕರಕುಶಲ ವಸ್ತು ತಯಾರಿಕೆಯಂತಹ ಹವ್ಯಾಸಗಳನ್ನು ಹೊಂದಿರುವ ಇವರು ಶಿಕ್ಷಕರ ದಿನಾಚರಣೆಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.
ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಜೇಸಿಯಂತಹ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಜೇಸಿರೇಟ್ ಅಧ್ಯಕ್ಷೆ ರನ್ನರ್ಸ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಹೀಗೆ ಶೈಕ್ಷಣಿಕ ಹಾಗೂ ಭೌತಿಕವಾಗಿ ಶಾಲೆಯ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಪರಿ ಶ್ರಮಿಸುತ್ತಿರುವವರು ಇವರು ತಮ್ಮ ಪತಿ ನಿವೃತ್ತ ಶಿಕ್ಷಕ ಶ್ರೀ ವಿ.ಆರ್.ಹೆಗಡೆ ಪುತ್ರಿ, ಅಳಿಯ ಹಾಗೂ ಮೊಮ್ಮಗನೊಂದಿಗೆ ‘ಸಾಧನ ಮನೆ’ ಹೊಸಮಜಲು ಇಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಅನುಪಮ ಸೇವಾ ಪುರಸ್ಕಾರ
ಅನುಪಮ ಸೇವಾ ಪುರಸ್ಕಾರ

ಶ್ರೀಮತಿ ಶಾಂತಿ ವಿ ಭಟ್ ಇವರ profile

ರಾಜ್ಯ ಮಟ್ಟದ ಪ್ರಶಸ್ತಿ ವಿಜೇತರ ಪಟ್ಟಿ

Sharing Is Caring:

Leave a Comment