2025-26ನೇ ಸಾಲಿನ 6ನೇ ತರಗತಿ ನವೋದಯ ಪರೀಕ್ಷೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07/10/2024 ಆಗಿದೆ.
ನವೋದಯ ಸಾಮಾನ್ಯ ಲಕ್ಷಣಗಳು
- ಜಿಲ್ಲೆಗೊಂದರಂತೆ ಇರುವ ಸಹ ಶಿಕ್ಷಣ ವಸತಿ ಶಾಲೆ.
- ಬಾಲಕ ಮತ್ತು ಬಾಲಕಿಯರಿಗೆ ಪ್ರತೇಕ ವಸತಿ ನಿಲಯಗಳು.
- ಉಚಿತ ಊಟ ವಸತಿಯೊಂದಿಗೆ ಶಿಕ್ಷಣ.
- ಕ್ರೀಡೆ ಮತ್ತು ಎನ್.ಸಿ.ಸಿ./ಎನ್.ಎಸ್.ಎಸ್. ಸ್ಕೌಟ್/ಗೈಡ್ಸ್ ಗೆ ಉತ್ತೇಜನ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
1.ವಿದ್ಯಾರ್ಥಿಯ ಫೋಟೋ ಮತ್ತು ಸಹಿ.
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
3. ಆಧಾರ್ ಕಾರ್ಡ್
4. ಪಾಲಕರ ಸಹಿ.
5. ಶಾಲೆಯ ದೃಢೀಕರಣ ಪತ್ರ.
ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವುದು.
ಸೂಚನೆ :- ಯಾವ ಜಿಲ್ಲೆಯ ವಿದ್ಯಾರ್ಥಿಗಳು ಪ್ರವೇಶ ಬಯಸುತ್ತಾರೋ ಆ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿ 01/05/2013 ರಿಂದ 31/07/2015ರೊಳಗೆ ಜನಿಸಿರಬೇಕು.
ಕಲಿಕಾ ಸಂಪನ್ಮೂಲಗಳು
ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿರುವ ಕುರಿತು
ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು 16/09/2024 ಕೊನೆಯ ದಿನ ಎಂದು ನಿಗದಿಯಾಗಿತ್ತು. ಇದೀಗ 23/09/2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸದವರು. 23/09/2024ರ ಒಳಗಾಗಿ ಅರ್ಜಿ ಸಲ್ಲಿಸುವುದು.
ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ದಿನಾಂಕ ಮುಂದೂಡಲಾಗಿದೆ. ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ 07/10/2024 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.