ರಾಷ್ಟ್ರ ಗೀತೆ ಹಾಡಿ,ಸರಕಾರದ ಪ್ರಮಾಣ ಪತ್ರ ಪಡೆಯಿರಿ

ರಾಷ್ಟ್ರ ಗೀತೆ ಹಾಡಿ,ಸರಕಾರದ ಪ್ರಮಾಣ ಪತ್ರ ಪಡೆಯಿರಿ Step by step ಮಾಹಿತಿ ಇಲ್ಲಿದೆ

ರಾಷ್ಟ್ರಗೀತೆ ಅಲಾಪನೆ

National anthem
National anthem

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಅತೀ ಹೆಚ್ಚು ಮಂದಿ ಹಾಡಿ ರೆಕಾರ್ಡ್ ಮಾಡುವ ಒಂದು ವ್ಯವಸ್ಥೆಯನ್ನು ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯು ಆರಂಭಿಸಿದೆ .ಅದಕ್ಕಾಗಿ ಪ್ರತ್ಯೇಕ ವೆಬ್ಸೈಟನ್ನು ಪ್ರಾರಂಭಿಸಿದ್ದಾರೆ. ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡಿ ರೆಕಾರ್ಡ್ ಮಾಡಿ ರಾಷ್ಟ್ರಮಟ್ಟದ ಅಭಿಯಾನದಲ್ಲಿ ಭಾಗಿಯಾಗುವ ಸುವರ್ಣಾವಕಾಶ ಇದು. ಈ ವ್ಯವಸ್ಥೆಯಲ್ಲಿ ನಾವು ಕೂಡ ಎಲ್ಲರ ಸಹಕಾರದೊಂದಿಗೆ ಭಾಗಿಯಾಗೋಣ. ಇದರಲ್ಲಿರುವ ನಿಬಂಧನೆಗಳು ಈ ಕೆಳಗಿನಂತಿವೆ.

ಇದು ಒಂದು ಸ್ಪರ್ಧೆ ಅಲ್ಲ, ಇದರಲ್ಲಿ ಎಲ್ಲರೂ (ಕುಟುಂಬದವರು ಸೇರಿ) ಭಾಗವಹಿಸಬಹುದು. ದೇಶೀಯ ಮಟ್ಟದಲ್ಲಿ ಅತ್ಯುತ್ತಮ 100 ವಿಡಿಯೋಗಳನ್ನು ಆಯ್ಕೆ ಮಾಡಿ ಸಾಮೂಹಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವರು.

1.Uniform ನಲ್ಲಿ ವಿಡಿಯೋ record ಮಾಡುವುದು ಉತ್ತಮ.(ಕಡ್ಡಾಯ ಅಲ್ಲ).

2.ಕೆಳಗೆ ಕಳಿಸುವ ಲಿಂಕ್ ಕ್ಲಿಕ್ ಮಾಡಿದಾಗ ನಿಮಗೆ ಸೈಟ್ ಓಪನ್ ಆಗುತ್ತದೆ.ಅದರಲ್ಲಿ ನಾಲ್ಕು ಸ್ಟೆಪ್ ಗಳಿವೆ. ಪ್ರಾರಂಭದಲ್ಲಿ ನಿಮ್ಮ ಹೆಸರು ಹಾಗೂ ಇತರ ವಿವರಗಳನ್ನು ಟೈಪ್ ಮಾಡಬೇಕು. ನಂತರ ಪ್ರೋಸೀಡ್ ಕೊಟ್ಟಾಗ ಮುಂದಿನ ಹಂತವು ರೆಕಾರ್ಡಿಂಗ್. ಸರಿಯಾದ ರೀತಿಯಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ.(ಅಲ್ಲಿರುವ track ನ್ನೇ follow ಮಾಡಬೇಕೆಂದಿಲ್ಲ)ತಪ್ಪಾದರೆ ಅದನ್ನು ರೀಸ್ಟಾರ್ಟ್ ಮಾಡುವ ಅವಕಾಶವಿದೆ .ಹೆಚ್ಚು ಸರಿಯಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ.ಅಪ್ಲೋಡ್ ಮಾಡಿದ ನಂತರ ನಿಮಗೊಂದು ಸರ್ಟಿಫಿಕೇಟ್ ಸಿಗುತ್ತದೆ.

3.ಹಾಡುವವರು 14/08/2021 ರ ಮೊದಲು ವೆಬ್ ಸೈಟಿಗೆ ಅಪ್ಲೋಡ್ ಮಾಡಬೇಕು.

ಈ ಕೆಳಗಿನ ಬಟನ್ ಅನ್ನು ಕ್ಲಿಕ್ ಮಾಡಿ ವೆಬ್ ಸೈಟಿಗೆ ಪ್ರವೇಶಿಸಬಹುದು.

IMG 20210811 WA0008 min

ಆಜಾದಿ ಕಾ ಅಮೃತ್ ಮಹೋತ್ಸವ ಪ್ರಮಾಣಪತ್ರ ಡೌನ್ಲೋಡ್ ಮಾಡಲು ಹಂತಗಳು

IMG 20210811 WA0009 min
  • ಮೊದಲ ಹಂತ: – ಅಧಿಕೃತ ವೆಬ್‌ಸೈಟ್ ತೆರೆಯಿರಿ – rastrugaan.in
  • 2 ನೇ ಹಂತ:- ‘ಮುಂದುವರಿಯಿರಿ’ ಬಟನ್ ಮೇಲೆ ಕ್ಲಿಕ್ ಮಾಡಿ.
  • 3 ನೇ ಹಂತ:- ದಯವಿಟ್ಟು ನಿಮ್ಮ ವಿವರಗಳನ್ನು ನಮೂದಿಸಿ ಪೂರ್ಣ ಹೆಸರು, ವಯಸ್ಸಿನ ಗುಂಪು, ದೇಶ ಮತ್ತು ರಾಜ್ಯ.
  • 4 ನೇ ಹಂತ:- ‘Let’s Sing’ ಬಟನ್ ಮೇಲೆ ಕ್ಲಿಕ್ ಮಾಡಿ.
  • 5 ನೇ ಹಂತ:- ನಿಂತು ನಿಮ್ಮ ವಿಡಿಯೋ ರೆಕಾರ್ಡ್ ಮಾಡಿ.
  • 6 ನೇ ಹಂತ:-ರೆಕಾರ್ಡ್ ಮಾಡಿದ ವಿಡಿಯೋ ಅಪ್‌ಲೋಡ್ ಮಾಡಿ.
  • 7 ನೇ ಹಂತ:- ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ.
Sharing Is Caring:

Leave a Comment