UKG, LKG ಹಾಗೂ 1ನೇ ತರಗತಿಗೆ ದಾಖಲಾಗಲು ಗರಿಷ್ಠ ವಯೋಮಿತಿ ನಿಗದಿಪಡಿಸಿರುವ ಕುರಿತು ಮಾಹಿತಿ

WhatsApp Group Join Now
Telegram Group Join Now

ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಕಿಗೆ ಕಡ್ಡಾಯವಾಗಿ ಆರು ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಲಾಗಿರುತ್ತದೆ.

ದಿನಾಂಕ 26/7/2022ರ ಆದೇಶದಲ್ಲಿ ಜೂನ್ ಒಂದನೇ ತಾರೀಕಿಗೆ ಕಡ್ಡಾಯವಾಗಿ ಆರು ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಲಾಗಿರುವುದನ್ನು 2025 -26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಿ ಆದೇಶಿಸಲಾಗಿರುತ್ತದೆ.


LKG, UKG ಮತ್ತು ಒಂದನೇ ತರಗತಿ ಪ್ರವೇಶಕ್ಕೆ ಈಗಾಗಲೇ ದಾಖಲಾತಿಗೆ ಕನಿಷ್ಠ ಅರ್ಹ ವಯೋಮಾನವನ್ನು ಪರಿಷ್ಕರಿಸಿ ನಿಗದಿಪಡಿಸಲಾಗಿದೆ. ಆದರೆ ಗರಿಷ್ಠ ವಯೋಮಾನವನ್ನು ಪರಿಷ್ಕರಿಸಿರುವುದಿಲ್ಲ. ಗರಿಷ್ಠ ವಯೋಮಿತಿಯನ್ನು ಪರಿಷ್ಕರಿಸುವುದರಿಂದ ಡ್ರಾಪ್ ಔಟ್ ಮಕ್ಕಳ ಸಂಖ್ಯೆಯನ್ನು ಸಹ ತಗ್ಗಿಸಬಹುದಾಗಿದೆ. LKG, UKG ಹಾಗೂ ಒಂದನೇ ತರಗತಿಗೆ ಈಗಾಗಲೇ ಕನಿಷ್ಠ ವಯೋಮಿತಿಯನ್ನು ಪರಿಷ್ಕರಿಸಿ ನಿಗದಿಪಡಿಸಿರುವಂತೆ ಗರಿಷ್ಠ ವಯೋಮಾಮದ ಮಾನದಂಡವನ್ನು ಸಡಿಲಿಸಿ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.


ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ LKG, UKG ಮತ್ತು 1ನೇ ತರಗತಿ ಪ್ರವೇಶಕ್ಕೆ ಗರಿಷ್ಠ ವಯೋಮಾನವನ್ನು 2023-24ನೇ ಸಾಲಿಗೆ ಅನ್ವಯವಾಗುವಂತೆ ಈ ಕೆಳ ಕಂಡಂತೆ ಆದೇಶಿಸಿದೆ.

ತರಗತಿ : LKG
ಕನಿಷ್ಠ ವಯೋಮಿತಿ : 4 ವರ್ಷ
ಅನ್ವಯವಾಗುವ ವರ್ಷ : 2023-24
ಗರಿಷ್ಠ ವಯೋಮಿತಿ : 6 ವರ್ಷ
ಅನ್ವಯವಾಗುವ ವರ್ಷ : 2023-24

ತರಗತಿ : UKG
ಕನಿಷ್ಠ ವಯೋಮಿತಿ : 5 ವರ್ಷ
ಅನ್ವಯವಾಗುವ ವರ್ಷ : 2024-25
ಗರಿಷ್ಠ ವಯೋಮಿತಿ : 7 ವರ್ಷ
ಅನ್ವಯವಾಗುವ ವರ್ಷ : 2023-24

ತರಗತಿ: 1ನೇ ತರಗತಿ
ಕನಿಷ್ಠ ವಯೋಮಿತಿ : 6 ವರ್ಷ
ಅನ್ವಯವಾಗುವ ವರ್ಷ : 2025-26
ಗರಿಷ್ಠ ವಯೋಮಿತಿ : 8 ವರ್ಷ
ಅನ್ವಯವಾಗುವ ವರ್ಷ : 2023-24

WhatsApp Group Join Now
Telegram Group Join Now
Sharing Is Caring:

Leave a Comment