ವಿಮಾ ಇಲಾಖೆಯು ಜೀವ ವಿಮೆ ಸೌಲಭ್ಯವನ್ನು ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ 21-07-1891 ರಿಂದ ಒದಗಿಸುತ್ತಾ ಬಂದಿರುತ್ತದೆ.
ತದನಂತರ 1959 ರಲ್ಲಿ ಸಾರ್ವಜನಿಕರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ರದ್ದು ಪಡಿಸಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ವಿಮಾ ಸೌಲಭ್ಯವನ್ನು ಮುಂದುವರಿಸಲಾಯಿತು. ಅಂದಿನಿಂದ ಈವರೆಗೆ
ಸುಮಾರು 60 ವರ್ಷಗಳಿಂದ ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯವನ್ನು 55 ವರ್ಷ ವಯಸ್ಸಿನ ವರೆಗೆ
ಮಾತ್ರ ನೀಡಲಾಗುತ್ತಿದೆ.
ರಾಜ್ಯ ಸರ್ಕಾರವು 1984 ರಲ್ಲಿ ಉಲ್ಲೇಖ (2) ರನ್ವಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ವರ್ಷಗಳಿಗೆ ಹೆಚ್ಚಿಸಲಾಯಿತು ಮತ್ತು 2008 ರಲ್ಲಿ ಉ (3) ರನ್ವಯ ಸರ್ಕಾರಿ
ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲಾಯಿತು, ಆದರೆ ನಿವೃತ್ತಿ ವಯಸ್ಸನ್ನ ಸರ್ಕಾರ 55 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಿದರೂ ಕೂಡ ಇಲಾಖೆಯ ವಿಮಾ ಸೌಲಭ್ಯವನ್ನು
ಸರ್ಕಾರಿ ನೌಕರರ ವಯಸ್ಸು 55 ವರ್ಷಗಳವರೆಗೆ ಮಾತ್ರ ನೀಡಲಾಗುತ್ತಿದೆ. ಇದರಿಂದ55 ವರ್ಷದಿಂದ 60 ವರ್ಷದ ವರೆಗೆ ಅಂದರೆ 5 ವರ್ಷಗಳ ಅವಧಿಗೆ ವಿಮಾ ಸೌಲಭ್ಯದಿಂದ ಸರ್ಕಾರಿ ನೌಕರರು ವಂಚಿತರಾಗಿದ್ದಾರೆ. ಈ 5 ವರ್ಷಗಳ ಅವಧಿಯಲ್ಲಿ ಸರ್ಕಾರಿ ನೌಕರರು ಅಕಾಲಿಕ ಮರಣ ಹೊಂದಿದರೆ ಅವರ ಅವಲಂಬಿತ ಕುಟುಂಬಕ್ಕೆ ದೊರೆಯುತ್ತಿದ್ದ ಆರ್ಥಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆ.
ಆದಕಾರಣ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ವಿಮಾ ಸೌಲಭ್ಯವನ್ನು 55 ವರ್ಷಗಳಿಂದ 60
ವರ್ಷಗಳವರೆಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ