2023-24ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕುರಿತು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಇಲಾಖೆಯು ಆದೇಶ ಮಾಡಲಾಗಿದ್ದು ಮಾಹಿತಿ ಇಲ್ಲಿದೆ
2023-24ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಶಿಕ್ಷಕರುಗಳಿಗೆ ಹಾಗೂ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲುಉದ್ದೇಶಿಸಿದೆ. ಈಗಾಗಲೇ 2022-23ನೇ ಸಾಲಿನ ಹೆಚ್ಚುವರಿ ಮುಖ್ಯ ಶಿಕ್ಷಕರ/ಸಹಶಿಕ್ಷಕರಮರುಹೊಂದಾಣಿಕೆಪ್ರಕ್ರಿಯೆ ಮತ್ತು ಮುಖ್ಯ ಶಿಕ್ಷಕರುಗಳ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿರುವುದರಿಂದ ಪ್ರಸ್ತುತಲಭ್ಯವಿರುವ ಖಾಲಿ ಹುದ್ದೆಗಳಿಗೆ ಎದುರಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯಶಿಕ್ಷಕರು, ಮುಖ್ಯಶಿಕ್ಷಕರಿಗೆ ಹಿರಿಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳಾದಉಪನಿರ್ದೆಶಕರು(ಆಡಳಿತ)ರವರುಗಳ ಹಂತದಲ್ಲಿ ರಾಜ್ಯದಾದ್ಯಂತ ಏಕಕಾಲದಲ್ಲಿ ಕೆಳಕಂಡ ನಿಯಮಾನುಸಾರ ಬಡ್ತಿನೀಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಬೇಕಾಗಿದೆ ಪ್ರಯುಕ್ತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಉಲ್ಲೇಖ-Iರ ಜೇಷ್ಟತಾ ನಿಯಮಾನುಸಾರದಿನಾಂಕ: 01/01/2023ರಲ್ಲಿದ್ದಂತೆ ಆಯಾ ವೃಂದವಾರು ಪ್ರಕಟಿಸಲಾಗಿರುವ ಜಿಲ್ಲಾ ಜೇಷ್ಟತಾ ಪಟ್ಟಿಗೆ ಅನುಗುಣವಾಗಿಬಡ್ತಿಯನ್ನು ನೀಡಬೇಕಾಗುತ್ತದೆ.
ಸದರಿ ಬಡ್ತಿ ಪ್ರಕ್ರಿಯೆಯನ್ನು ಸದರಿ ವರ್ಗಾವಣಾ ಪ್ರಕ್ರಿಯೆ ಮುಕ್ತಾಯದ ನಂತರ ದಿನಾಂಕ:01/08/2023ರಲ್ಲಿದ್ದಂತೆ ಅಪ್‌ಡೇಟ್ (ಪರಿಷ್ಕರಿಸಿದ) ಖಾಲಿ ಹುದ್ದೆಗಳಿಗೆ ಹಾಗೂ ಜಿಲ್ಲಾವಾರು ನಿಗಧಿಪಡಿಸಿರುವವೃಂದವಾರು ಮಿತಿಯೊಳಗೆ ಲಭ್ಯ ಖಾಲಿಹುದ್ದೆಗಳನ್ನು ಬಡ್ತಿಗೆ ಪರಿಗಣಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈಕೆಳಕಂಡ ವೇಳಾಪಟ್ಟಿಯನು ಸಾರ ಬಡ್ತಿ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಏಕಕಾಲಕ್ಕೆ ಕೈಗೊಳ್ಳಲು ಅಧಿಕೃತ ಜಾಪನವನ್ನುಪ್ರಕಟಿಸಲಾಗಿದೆ. ಅದರಂತೆ ಬಡ್ತಿ ಪ್ರಕ್ರಿಯೆ ಕೈಗೊಳ್ಳಲು ಸೂಚನೆ ನೀಡಬಹುದಾಗಿದೆ.
ಬಡ್ತಿ ಪ್ರಕ್ರಿಯೆಗೆ ವಿವರಣೆ
1. 14/08/2023. ಬಡ್ತಿ ಪ್ರಕ್ರಿಯೆಗೆ ಅಧಿಕೃತ ಜ್ಞಾಪನ ಪ್ರಕಟಣೆ
2.18/08/2023ಬಡ್ತಿಗೆ ಅರ್ಹರಿರುವ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ವೃಂದದ ತಾತ್ಕಾಲಿಕಜೇಷ್ಟತಾಪಟ್ಟಿ ದಿನಾಂಕ: 1/1/2023ರಲ್ಲಿದ್ದಂತೆ ಪ್ರಕಟಿಸುವುದು
3. 18/8/2023 ರಿಂದ 23/08/2023 ಪ್ರಕಟಿತ ಜೇಷ್ಟತಾ ಪಟ್ಟಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸುವುದು(ಆಯಾ ಸಂಬಂಧಿಸಿದ ಬ್ಲಾಕ್ ಕಛೇರಿಗಳಿಗೆ ಸಲ್ಲಿಸುವುದು)
4.24/08/2023 ಕ್ಷೇತ್ರಶಿಕ್ಷಣಾಧಿಕಾರಿಗಳು ಆಕ್ಷೇಪಣೆಗಳನ್ನುಪರಿಶೀಲಿಸಿಉಪನಿರ್ದೇಶಕರು(ಆಡಳಿತ) ಇವರಿಗೆ ದಾಖಲೆಗಳನ್ನು ಸಲ್ಲಿಸುವುದು
5.25/08/2023 ರಿಂದ 29/08/2023 ತಾತ್ಕಾಲಿಕ ಜೇಷ್ಟತಾ ಪಟ್ಟಿಗೆ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಜಿಲ್ಲಾಕಛೇರಿಯಲ್ಲಿ ಪರಿಶೀಲನೆ ಮಾಡಿ ಇತ್ಯರ್ಥಗೊಳಿಸುವುದು
6. 30/08/2023ಉಲ್ಲೇಖ(1 ರಿಂದ 7) ರಂತೆ ಹಾಗೂ ಸ್ವೀಕೃತ ಆಕ್ಷೇಪಣೆಗಳನ್ನು ಪರಿಶೀಲಿಸಿಬಡ್ತಿಗೆ ಅರ್ಹರಿರುವ ಶಿಕ್ಷಕರ/ಮುಖ್ಯಶಿಕ್ಷಕರ ಅಂತಿಮವಾಗಿ ಜೇಷ್ಟತಾ ಪಟ್ಟಿಸಿದ್ಧಪಡಿಸುವುದು
7. 31/08/2023 ದಿನಾಂಕ: 31/08/2023ಕ್ಕೆ ಇದ್ದಂತೆ ವೃಂದವಾರು ಖಾಲಿ ಹುದ್ದೆಗಳ ಪ್ರಕಟಣೆ
ಸೂಚನೆ:-
ಕೌನ್ಸಿಲಿಂಗ್ ಪ್ರಕ್ರಿಯೆ ಕುರಿತಂತೆ ನಂತರದಲ್ಲಿ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗುವುದು.ಬಡ್ತಿ ಪ್ರಕ್ರಿಯೆಯನ್ನು ಕೈಗೊಳ್ಳುವಾಗ ಕೆಳಕಂಡ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಖಚಿತಪಡಿಸಿಕೊಂಡುಮುಂದುವರೆಯಲು ಸೂಚಿಸಿದೆ.
1. ಮುಖ್ಯಶಿಕ್ಷಕರ ಬಡ್ತಿಗಾಗಿ ಜಿಲ್ಲಾ ಹಂತದಲ್ಲಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳತಕ್ಕದ್ದು, ಆದರೆ ಅಂಗವಿಕಲಅಭ್ಯರ್ಥಿಗಳ ಮೀಸಲಾತಿ ಪ್ರಕ್ರಿಯೆ ಇತ್ಯರ್ಥದ ನಂತರ ಹಾಗೂ ಜೇಷ್ಟತಾ ಪಟ್ಟಿಯನ್ನು ಅಂತಿಮಗೊಳಿಸಿಪ್ರಕಟಿಸಬೇಕಾಗಿರುವುದರಿಂದ ಯಾವುದೇ ಕಾರಣಕ್ಕೂ ಈ ಕಛೇರಿಯ ಮುಂಚಿತವಾಗಿ ಕೌನ್ಸಿಲಿಂಗ್‌ನ್ನು ಮಾಡಿಸ್ಥಳನಿಯುಕ್ತಿಗೊಳಿಸತಕ್ಕದ್ದಲ್ಲ.
2. ಪ್ರಸ್ತುತ 1/8/2023ಕ್ಕೆ ವರ್ಗಾವಣಾ ಪ್ರಕ್ರಿಯೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಜಿಲ್ಲಾವಾರು ಖಾಲಿಹುದ್ದೆಗಳಮಾಹಿತಿಯನ್ನು ನೀಡಲಾಗುವುದು. ಅದರಂತೆ ಯಾವುದೇ ಕಾರಣಕ್ಕೂ ಜಿಲ್ಲೆಗೆ ಮಂಜೂರಾದ ಮುಖ್ಯಶಿಕ್ಷಕರ ಮತ್ತು ಹಿರಿಯ ಮುಖ್ಯ ಶಿಕ್ಷಕರ ವೃಂದಬಲದ ಸಂಖ್ಯೆಯ ಮಿತಿಯನ್ನು ಮೀರತಕ್ಕದ್ದಲ್ಲ ಎಂದುಸ್ಪಷ್ಟಪಡಿಸಿದೆ.
3. ಉಲ್ಲೇಖ-3ರ ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಜೇಷ್ಟತೆಯಲ್ಲಿ ಪರಿಗಣಿಸಬಹುದಾದ ಎದ್ದುಕಾಣುವಅಂಗವ್ಯಕಲ್ಯತೆಯನ್ನು ಉಳ್ಳ ನೌಕರರಿಗೆ ಗ್ರೂಪ್ ‘ಡಿ’ ಮತ್ತು ‘ಸಿ’ ವೃಂದಗಳಿಗೆ ನೀಡುವ ಬಡ್ತಿಯಲ್ಲಿ ಶೇಕಡಾ4ರಷ್ಟು ಮೀಸಲಾತಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅದರಂತೆ ಅಂತಿಮ ಜೇಷ್ಟತಾ ಪಟ್ಟಿಯಲ್ಲಿ ಅರ್ಹರಿರುವರುವ ಎಲ್ಲಾ ಅಂಗವಿಕಲ ಶಿಕ್ಷಕರು ಸಕ್ಷಮ ಪ್ರಾಧಿಕಾರದಿಂದ ‘ಜಿಲ್ಲಾ ವೈದ್ಯಕೀಯ ಮಂಡಳಿಯ ತ್ರಿಸದಸ್ಯಸಮಿತಿಯಯಿಂದ ಪಡೆದ ಪ್ರಮಾಣ ಪತ್ರವನ್ನು ಅಥವಾ Permanent disability certificateUDID ಕಡ್ಡಾಯವಾಗಿ ಸಲ್ಲಿಸತಕ್ಕದ್ದು, ನಿಯಮಾನುಸಾರ ಕಡ್ಡಾಯವಾಗಿ ಎದ್ದುಕಾಣುವ ಅಂಗವೈಕಲ್ಯತೆಯಪ್ರಮಾಣದ(ಶೇಕಡಾವಾರು) ಬಗ್ಗೆ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ವದಲ್ಲಿ ಖಚಿತಪಡಿಸಿಕೊಳ್ಳತಕ್ಕದ್ದು.
4. ಒಂದು ವೇಳೆ ಸುಳ್ಳು ದಾಖಲಾತಿ ನೀಡಿ ಬಡ್ತಿ ಪಡೆದಿದಲ್ಲಿ ಅಂತಹಾ ಶಿಕ್ಷಕರನ್ನು ಶಿಸ್ತು ಕ್ರಮಕ್ಕೆ ಒಳಪಡಿಸಿಅಂತಹಾ ಶಿಕ್ಷಕರಿಗೆ ನೀಡುರುವ ಬಡ್ತಿಯನ್ನು ರದ್ದುಪಡಿಸಿ ಶಿಸ್ತು ಕ್ರಮ ಜರುಗಿಸಲಾಗುವುದು.
5. ಉಲ್ಲೇಖ 2-6 ರಲ್ಲಿನ ಅಂಗವೈಕಲ್ಯ ಮೀಸಲಾತಿ ಅನುಷ್ಠಾನ ಕ್ರಮ, ಬ್ಯಾಕ್‌ಲಾಗ್, ಮೀಸಲಾತಿಯ ಬಿಂದು,ರೋಸ್ಟರ್ ಗುರುತಿಸುವಿಕೆ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
6.ಪ್ರಸ್ತುತ ಇರುವ ಖಾಲಿ ಹುದ್ದೆಗಳನ್ನು ಬಡ್ತಿಗೆ ಪರಿಗಣಿಸದೇ ರಾಜ್ಯ ಕಛೇರಿಯಿಂದ ಅಂತಿಮವಾಗಿ ಪರಿಷ್ಕರಿಸಿ ದಿನಾಂಕ: 31/08/2023ಕ್ಕೆ ನೀಡುವ ಖಾಲಿ ಹುದ್ದೆಗಳನ್ನು ಮಾತ್ರ ಬಡ್ತಿಗೆ ಪರಿಗಣಿಸತಕ್ಕದ್ದು
7. ಮುಖ್ಯ ಶಿಕ್ಷಕರ/ಹಿರಿಯ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಾಧಿಕಾರಿ ಜಿಲ್ಲಾ ಉಪನಿರ್ದೇಶಕರೇಆಗಿರುವುದರಿಂದ ಜಿಲ್ಲಾ ಹಂತದಲ್ಲಿ ರಾಜ್ಯ ಕಛೇರಿಯಿಂದ ಏಕ ರೂಪವಾಗಿ ಮೇಲ್ಕಂಡಂತೆ ನಿಗಧಿಪಡಿಸಿರುವವೇಳಾಪಟ್ಟಿಯಂತೆ ಬಡ್ತಿ ಪ್ರಕ್ರಿಯೆಗೆ ಅಗತ್ಯ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಂಡು ಯಾವುದೇಲೋಪಗಳಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ತಿಳಿಸಿದೆ.
ಈ ಪ್ರಕ್ರಿಯೆಯಲ್ಲಿ ಯಾವುದೇಲೋಪಗಳಾದಲ್ಲಿ ಬಡ್ತಿ ಪ್ರಾಧಿಕಾರಿಯಾದ ಉಪನಿರ್ದೆಶಕರು(ಆಡಳಿತ) ನೇರಹೊಣೆಗಾರರನ್ನಾಗಿಮಾಡಲಾಗುವುದು.ಈಗಾಗಲೇ ಉಲ್ಲೇಖ- 6 ರಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್-ಡಿ ಮತ್ತು ಗ್ರೂಪ್-ಸಿ ವೃಂದದ ಹುದ್ದೆಗಳಲ್ಲಿ ಬೋದಕ ಮತ್ತು ಬೋಧಕೇತರ ವೃಂದದ ಹಲವು ಹುದ್ದೆಗಳಿರುತ್ತದೆ. ಇದರಲ್ಲಿ ಶಾಲಾ ಮುಖ್ಯಶಿಕ್ಷಕರುಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳೂ ಒಳಗೊಂಡಿರುತ್ತದೆ. ಸದರಿ ಹುದ್ದೆಗಳು ಶೈಕ್ಷಣಿಕ ಆಡಳಿತಕ್ಕೆ ವಿಶಿಷ್ಟವಾದಅವಶ್ಯಕತೆಗಳಿಗಾಗಿ ಸೃಜನೆಯಾಗಿರುವ ಹುದ್ದೆಗಳಾಗಿರುತ್ತದೆ. ಸದರಿ ಹುದ್ದೆಗಳಿಗೆ ಮೀಸಲಾತಿಗೆ ಪರಿಗಣಿಸಬಹುದಾದಮತ್ತು ಯಾವ ಅಂಗವೈಕಲ್ಯತೆಯನ್ನುಳ್ಳ ಸಿಬ್ಬಂದಿಗೆ ಯಾವೆಲ್ಲಾ ಹುದ್ದೆಗಳನ್ನು ಪರಿಗಣಿಸಬಹುದಾಗಿದೆ ಎಂಬ ಬಗ್ಗೆ ಆದೇಶ ಹೊರಡಿಸಲು ಕೋರಿ ಉಲ್ಲೇಖಿತ-7ರಲ್ಲಿ ಸರ್ಕಾರಕ್ಕೆ ಪತ್ರಬರೆಯಲಾಗಿದೆ. ಸರ್ಕಾರದಿಂದ ಸೂಕ್ತ ನಿರ್ದೇಶನಬಂದ ನಂತರ ಬಡ್ತಿ ಕೌನ್ಸಿಲಿಂಗ್ ನಡೆಸಲು ಅಗತ್ಯ ಸೂಚನೆಗಳನ್ನು ನೀಡಲಾಗುವುದು.