ಶಿಕ್ಷಕ ರಾಷ್ಟ್ರದ ರಕ್ಷಕ. ಶ್ರೀ ಹಿರೇಮಗಳೂರು ಕಣ್ಣನ್ ಇವರಿಂದ ಉಪನ್ಯಾಸ ಕಾರ್ಯಕ್ರಮ
ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2021 ರ ಪ್ರಯುಕ್ತ, ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದಡಿಯಲ್ಲಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ
ಕನ್ನಡ ನಾಡಿನ ಜನಮಾನಸದಲ್ಲಿ ಕಣ್ಣನ್ ಮಾಮ ಎಂದೇ ಪ್ರಸಿದ್ಧರಾಗಿರುವ
ಶ್ರೀ ಹಿರೇಮಗಳೂರು ಕಣ್ಣನ್
ಇವರಿಂದ
ಶಿಕ್ಷಕ – ರಾಷ್ಟ್ರದ ರಕ್ಷಕ
ವಿಷಯವಾಗಿ ಉಪನ್ಯಾಸವನ್ನು ದಿನಾಂಕ: 05-09-2021ರ ಭಾನುವಾರದಂದು ಅಪರಾಹ್ನ 04-00 ಗಂಟೆಗೆ ಆನ್‌ಲೈನ್ ಮೂಲಕ DDPIDK YouTube ಚಾನಲ್‌ನಲ್ಲಿ Live ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ.
ಈ ಉಪನ್ಯಾಸದಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರು, ಸರ್ಕಾರಿ-ಅನುದಾನಿತ-ಅನುದಾನ ರಹಿತ ಶಾಲೆಗಳ ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು, ಎಲ್ಲ ಸಿ ಆರ್ ಪಿ, ಬಿ ಆರ್ ಪಿ, ಇಸಿಓ ಗಳು, ಹಾಗೂ ಇತರೆ ಎಲ್ಲ ಭಾಗಿದಾರರು, ಆಸಕ್ತ ಸಾರ್ವಜನಿಕರು ಕೆಳಗಿನ ಲಿಂಕ್ ಮೂಲಕ ಭಾಗವಹಿಸಲು ಕೋರಲಾಗಿದೆ.
ಉಪ ನಿರ್ದೇಶಕರು(ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ
ದಕ್ಷಿಣ ಕನ್ನಡ, ಮಂಗಳೂರು