ಬೋರುಗುಡ್ಡೆ ಕ್ಲಸ್ಟರ್ ಶಿಕ್ಷಕರಿಂದ ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಗೌರವ ಶಿಕ್ಷಕರಿಗೆ ಧನಸಹಾಯ

ಬೋರುಗುಡ್ಡೆ ಕ್ಲಸ್ಟರ್ ಶಿಕ್ಷಕರಿಂದ ಅಕ್ಷರದಾಸೋಹ ಸಿಬ್ಬಂದಿ ಹಾಗೂ ಗೌರವಶಿಕ್ಷಕರಿಗೆ ಧನಸಹಾಯ

IMG 20210702 WA0022 11zon

ಮೂಡುಬಿದಿರೆ ತಾಲೂಕು ಬೋರುಗುಡ್ಡೆ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಸರಕಾರಿ , ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಮಂದಿ ಅಕ್ಷರದಾಸೋಹ ಸಿಬ್ಬಂದಿಗಳು ಹಾಗೂ ಗೌರವ ಶಿಕ್ಷಕರಿಗೆ ಕೋವಿಡ್ ನಿಂದಾಗಿರುವ ಆರ್ಥಿಕ ಸಹಕಾರ ನೀಡುವ ಉತ್ತಮ ಕಾರ್ಯದಲ್ಲಿ ಜೊತೆಯಾಗಿದ್ದಾರೆ. ಪ್ರತೀ ಶಾಲೆಗೂ ತೆರಳಿ ಕ್ಲಸ್ಟರ್ ನ ಶಿಕ್ಷಕರಿಂದ ಒಟ್ಟು 52,500/- ಗಳನ್ನು ಸಂಗ್ರಹಿಸಿ ಪ್ರತಿಯೊಬ್ಬ ಫಲಾನುಭವಿಗೂ ಸಮಾನವಾಗಿ ಹಂಚಲಾಗಿದೆಯೆಂದು ಸಮೂಹ ಸಂಪನ್ಮೂಲ ವ್ಯಕ್ತಿ ಆದರ್ಶರವರು ತಿಳಿಸಿರುತ್ತಾರೆ.ಈ ಪುಣ್ಯ ಕಾರ್ಯದಲ್ಲಿ ಸಹಕಾರ ನೀಡಿರುವ ಕ್ಲಸ್ಟರ್ ನ ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೆ ಕೃತಜ್ಞತೆಯನ್ನು ಸಮೂಹ ಸಂಪನ್ಮೂಲ ಕೇಂದ್ರ ಬೋರುಗುಡ್ಡೆಯಿಂದ ಸಲ್ಲಿಸಿದ್ದರು.

IMG 20210702 WA0019 11zon
IMG 20210702 WA0020 11zon
IMG 20210702 WA0021 11zon
IMG 20210702 WA0023 11zon
Sharing Is Caring:

Leave a Comment