💫💫💫✨🇮🇳🇮🇳🇮🇳🇮🇳🇮🇳🇮🇳ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ರಾಷ್ಟ್ರದ್ವಜವನ್ನು ಹಾರಿಸುವ ಕಾರ್ಯಕ್ರಮ ಪ್ರತಿ ಮನೆಯಲ್ಲಿ ರಾಷ್ಟ್ರದ್ವಜ:-🇮🇳🇮🇳🇮🇳🇮🇳🇮🇳🇮🇳💫💫💫💫💫✨
🇮🇳 ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸುವ ಸಲುವಾಗಿ “ಹರ್ ಘರ್ ತಿರಂಗಾ” ಎಂಬ ಘೋಷವಾಕ್ಯದೊಂದಿಗೆ 2022 ರ 11ರಿಂದ 17ರವರೆಗೆ ಮನೆ ಮನೆಯಲ್ಲಿ ಆಚರಿಸಿ ದೇಶಭಕ್ತಿಯಲ್ಲೂ ದೇಶಭಕ್ತಿಯನ್ನು ಬಿಂಬಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವ ಅಭಿಯಾನವನ್ನು ಹಮ್ಮಿಕೊಂಡಿದೆ.
👉🏻ಈ ಸಂಬಂಧ ಸರ್ಕಾರಿ ,ಖಾಸಗಿ ಅನುದಾನಿತ, ಖಾಸಗಿ ಅನುದಾನರಹಿತ ಬೆಳಗಿನ ಪ್ರಾರ್ಥನಾ ಸಮಯದಲ್ಲಿ “ಪ್ರತಿ ಮನೆಯಲ್ಲಿ ರಾಷ್ಟ್ರದ್ವಜ” ಕಾರ್ಯಕ್ರಮದ ಬಗ್ಗೆ ಈ ಕೆಳಗಿನಂತೆ ಘೋಷಿಸುವ ಮೂಲಕ ಜಾಗೃತಿ ಮೂಡಿಸಿ ದಿನಾಂಕ 11/8/2022 ರಿಂದ 17/8/2022 ರ ವರೆಗೆ ಮನೆ ಮನೆಯಲ್ಲಿ ಆಚರಿಸಿ ದೇಶಭಕ್ತಿಯನ್ನು ಮೂಡಿಸಲು ಸೂಚಿಸಿದೆ.
👉🏻 ಘೋಷ ವಾಕ್ಯ:- ಅಸಂಖ್ಯಾತ ಹೋರಾಟ ತ್ಯಾಗ ಬಲಿದಾನಗಳ ಕಾರಣದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ
👉🏻 ಮುಂದುವರೆದು, ರಾಷ್ಟ್ರದ್ವಜವನ್ನು ಸಂಗ್ರಹಿಸಲು ಮತ್ತು ವಿತರಿಸಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಜವಾಬ್ಧಾರಿ ನೀಡಲಾಗಿದೆ.
👉🏻ಈ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಪ್ರಚುರಪಡಿಸಲು ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು, ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪದವಿಪೂರ್ವ ಕಾಲೇಜುಗಳಲ್ಲಿ ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವಂತೆ ಕ್ರಮವಹಿಸಲು ಪ್ರಾಂಶುಪಾಲರುಗಳಿಗೆ ತಿಳಿಸಲು ಹಾಗೂ ಕೈಗೊಂಡ ಕ್ರಮದ ಬಗ್ಗೆ ಛಾಯಾಚಿತ್ರಗಳನ್ನು ಮತ್ತು ವರದಿಯನ್ನು academic. dpue@karnataka.gov.in ಹಾಗೂ kanbhavblr@gmail.com ಕಡ್ಡಾಯವಾಗಿ ಕಲಿಸಲು ಸೂಚಿಸಿದೆ 🇮🇳🇮🇳🇮🇳🇮🇳🇮🇳🇮🇳🇮🇳