ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಗುರುಭ್ಯೋ ನಮಃ
ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀಮತಿ ಮೇರಿ ಕೆ ಎಂ
ಸ.ಹಿ.ಪ್ರಾ ಶಾಲೆ ಓಂತ್ರಡ್ಕ
ಕಡಬ ತಾಲೂಕು
ದಿನಾಂಕ 29.09.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಕನ್ಯಾಡಿಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸೈಂಟ್ ಆಂಟನಿ ಹೈಸ್ಕೂಲ್ ಉದನೆ ಇಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಸರ್ವೋದಯ ಶಿಕ್ಷಕರ ತರಬೇತಿ ಕೇಂದ್ರ ವಿರಾಜಪೇಟೆ ಇಲ್ಲಿ ಪೂರೈಸಿ ದಿನಾಂಕ 06.08.1998 ರಲ್ಲಿ ಸ.ಹಿ.ಪ್ರಾ.ಶಾಲೆ ಕುಂತೂರು ಪದವು ಇಲ್ಲಿ ಸೇವೆಗೆ ಸೇರಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಉ.ಪ್ರಾ.ಶಾಲೆ ಓಂತ್ರಡ್ಕ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸುಲೋಚನಾ ಕೆ
ಸ.ಹಿ.ಪ್ರಾ.ಶಾಲೆ ಶಾಂತಿನಗರ ಪುತ್ತೂರು ತಾಲೂಕು
ಜನನ:25-09-1962
ತಂದೆ: ರಾಮ
ತಾಯಿ: ಕಮಲ
ಪತಿ: ಹೆಸರಾಂತ ಯಕ್ಷಗಾನ ಕಲಾವಿದರು ಕುಂಬಳೆ ಶ್ರೀಧರ್ ರಾವ್
ಪ್ರಾಥಮಿಕ ಶಿಕ್ಷಣ ಹೋಲಿ ಫ್ಯಾಮಿಲಿ ಶಾಲೆ ಮತ್ತು ಪ್ರೌಢಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿ ಶಿಕ್ಷಕರ ಶಿಕ್ಷಣವನ್ನು ಮಡಿಕೇರಿಯಲ್ಲಿ ಪಡೆದಿರುವಿರಿ.
14-09-1985ರಂದು ಪೆರಾಬೆ ಶಾಲೆಯಲ್ಲಿ ಸರ್ಕಾರಿ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿದಿರಿ. ಅಲ್ಲಿಂದ ವರ್ಗಾವಣೆ ಗೊಂಡು ಬಿಳಿಯೂರು ಶಾಲೆ, ಬಂಟ್ವಾಳದ ಕರ್ವೇಲ್ ಶಾಲೆ ಹಾಗೂ ರಾಮಕುಂಜ ಶಾಲೆಯಲ್ಲಿ ಸೇವೆ ಸಲ್ಲಿಸಿ ತದನಂತರ 2006ರಲ್ಲಿ ವರ್ಗಾವಣೆ ಪಡೆದು ಸ.ಹಿ.ಪ್ರಾ.ಶಾಲೆ ಶಾಂತಿನಗರದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಇದುವರೆಗೆ ಅಲ್ಲಿ ಸೇವೆ ಸಲ್ಲಿಸಿ, ಸುಮಾರು 37 ವರ್ಷಗಳ ಕಾಲದ ವೃತ್ತಿ ಜೀವನದಿಂದ ನಿವೃತ್ತಿಯಾಗುತ್ತಿರುವಿರಿ. ಅಪಾರ ಶಿಷ್ಯ ಬಳಗವನ್ನು ಹೊಂದಿರುವ ತಾವು ಅವರ ಬಾಳಿಗೆ ಬೆಳಕಾಗಿದಿರಿ. ನಿಮ್ಮ ನಿವೃತ್ತ ಜೀವನವು ಸುಖ, ನೆಮ್ಮದಿ ಶಾಂತಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಲಕ್ಷ್ಮೀ
ಸ.ಹಿ.ಪ್ರಾ.ಶಾಲೆ ಕೋಡಿಂಬಾಡಿ ಪುತ್ತೂರು ತಾಲೂಕು.ದ.ಕ
ತಂದೆ- ಆದಪ್ಪ ಶೆಟ್ಟಿ ಕೋಡಿಂಬಾಡಿ ಗ್ರಾಮ
ತಾಯಿ-ಕಮಲ
ಜನನ:01-10-1962
ಪ್ರಾಥಮಿಕ ಶಿಕ್ಷಣವನ್ನು ಕೋಡಿಂಬಾಡಿಯಲ್ಲಿ ಪ್ರೌಢ ಶಿಕ್ಷಣವನ್ನು ಕೊಂಬೆಟ್ಟು ಶಾಲೆಯಲ್ಲಿ ಮುಗಿಸಿ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆಯಲು ಶಿಕ್ಷಕಿಯರ ತರಬೇತಿ ಕೇಂದ್ರ ಬಲ್ಮಠ ಮಂಗಳೂರು ಇಲ್ಲಿಗೆ ಸೇರಿದರು. ಶಿಕ್ಷಣದ ಮೇಲೆ ಅಪಾರ ಕಾಳಜಿ ಇರುವ ಇವರು 1986ನೇ ಇಸವಿಯಲ್ಲಿ ಸ.ಹಿ.ಪ್ರಾ.ಶಾ.ನೆಕ್ಕಿಲಾಡಿ ಇಲ್ಲಿ ಸೇವೆಗೆ ಸೇರಿ ಸುಮಾರು 19ವರ್ಷಗಳ ಕಾಲ ಸೇವೆ ಸಲ್ಲಿಸಿದರು. ತದನಂತರ 27-05-2015ರಿಂದ ವರ್ಗಾವಣೆ ಗೊಂಡು ಇದುವರೆಗೆ ಸ.ಹಿ.ಪ್ರಾ.ಶಾ.ಕೋಡಿಂಬಾಡಿ ಯಲ್ಲಿ ಸೇವೆ ಸಲ್ಲಿಸಿ ಇದೀಗ ಸುಮಾರು 25 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಇಂದು ನಿವೃತ್ತಿಗೊಳ್ಳುತ್ತಿದ್ದಾರೆ. ತಮ್ಮ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ಇವರು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿರುವರು. ತಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.
ಶ್ರೀಮತಿ ನಿರ್ಮಲ ಕುಮಾರಿ.ಎನ್
ಸಿ.ಆರ್.ಪಿ
ಮೂಡುಬಿದಿರೆ ಮೈನ್.
ದಿನಾಂಕ 13.09.1962 ರಲ್ಲಿ ಜನಿಸಿದ ಇವರು ಎಸ್ಸೆಸ್ಸೆಲ್ಸಿ, ಟಿಸಿಎಚ್, ಬಿ.ಎ ಶಿಕ್ಷಣವನ್ನು ಪೂರೈಸಿ ದಿನಾಂಕ 25.10.1982 ರಲ್ಲಿ ಸ.ಹಿ.ಪ್ರಾ.ಶಾಲೆ ಎರ್ಲಪಾಡಿ ಇಲ್ಲಿ ಸೇವೆಗೆ ಸೇರಿ ನಂತರ ದಿನಾಂಕ 19.01.1990 ರಲ್ಲಿ ಸ.ಹಿ.ಪ್ರಾ.ಶಾಲೆ ನೆಲ್ಲಿಕಾರು ಇಲ್ಲಿಗೆ ವರ್ಗಾವಣೆಗೊಂಡು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 02.06.1992 ರಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಮೂಡುಬಿದಿರೆ ಇಲ್ಲಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿ ನಂತರ ದಿನಾಂಕ 13.07.2005 ರಲ್ಲಿ ಸ.ಹಿ.ಪ್ರಾ.ಶಾಲೆ ಪಡುಕೋಣಾಜೆ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 23.07.2007 ರಲ್ಲಿ ಸ.ಹಿ.ಪ್ರಾ.ಶಾಲೆ ಮೂಡುಬಿದಿರೆ-3 ಇಲ್ಲಿ ಸಿ ಆರ್ ಪಿ ಯಾಗಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 01.10.2007 ರಿಂದ ದಿನಾಂಕ 22.05.2011 ರವರೆಗೆ ಇರುವೈಲು ಇಲ್ಲಿ ಸಿ ಆರ್ ಪಿ ಯಾಗಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 23.05.2011 ರಿಂದ ದಿನಾಂಕ 31.08.2014 ರವರೆಗೆ ಮೂಡುಬಿದಿರೆ ಇಲ್ಲಿ ಸಿ ಆರ್ ಪಿ ಯಾಗಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 01.09.2014 ರಿಂದ ದಿನಾಂಕ 03.06.2017 ರವರೆಗೆ ಸ.ಹಿ.ಪ್ರಾ.ಶಾಲೆ ಮಾಸ್ತಿಕಟ್ಟೆ ಇಲ್ಲಿ ಸಿ ಆರ್ ಪಿ ಯಾಗಿ ಕರ್ತವ್ಯ ನಿರ್ವಹಿಸಿ ನಂತರ ದಿನಾಂಕ 03.06.2017 ರಿಂದ ದಿನಾಂಕ 30.09.2022 ರವರೆಗೆ ಮೂಡುಬಿದಿರೆ ಇಲ್ಲಿ ಸಿ ಆರ್ ಪಿ ಯಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಇಂದಿರಾ.ಸಿ.ಕೆ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಸಿದ್ಧಾರ್ಥ ನಗರ ಮಂಗಳೂರು ಉತ್ತರ.
ದಿನಾಂಕ 15.02.1996 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ , ಸಿದ್ಧಬೈಲು ಪರಾರಿ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 02.11.1999 ರಲ್ಲಿ ಸ.ಹಿ.ಪ್ರಾ.ಶಾಲೆ ದಡ್ಡಿ ಬಡಗ ಎಡಪದವು ಮಂಗಳೂರು ದಕ್ಷಿಣ ವಲಯ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 13.09.2007 ರಲ್ಲಿ ವರ್ಗಾವಣೆ ಗೊಂಡು ಸ.ಹಿ.ಪ್ರಾ.ಮಾದರಿ ಶಾಲೆ ಕಾಟಿಪಳ್ಳ 8ನೇ ವಿಭಾಗ ಮಂಗಳೂರು ಉತ್ತರ ವಲಯ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 14.06.2012 ರಲ್ಲಿ ವರ್ಗಾವಣೆಗೊಂಡು ಸ.ಹಿ.ಪ್ರಾ.ಶಾಲೆ ತಲಪಾಡಿ ಪಟ್ನಾ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 07.06.2019 ರಲ್ಲಿ ಸ.ಹಿ.ಪ್ರಾ.ಶಾಲೆ ಸಿದ್ಧಾರ್ಥ ನಗರ ಮಂಗಳೂರು ಉತ್ತರ ಇಲ್ಲಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಮೇರಿ ತೆರೆಸಾ ಮಿರಾಂದ
ಸ.ಹಿ.ಪ್ರಾ.ಶಾಲೆ ಕಣ್ಣೋರಿ.
ಮಂಗಳೂರು
ದಿನಾಂಕ 23.09.1962 ರಲ್ಲಿ ಜನಿಸಿದ ಇವರು ದಿನಾಂಕ 28.01.1997 ರಲ್ಲಿ ಸೇವೆಗೆ ಸೇರಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಅಂಬಿಕಾ.ಆರ್
ದೈಹಿಕ ಶಿಕ್ಷಣ ಶಿಕ್ಷಕಿ.
ಸ.ಮಾ.ಹಿ.ಪ್ರಾ.ಶಾಲೆ, ಮಳಲಿ.
ಮಂಗಳೂರು
ದಿನಾಂಕ 01.10.1962 ರಲ್ಲಿ ಜನಿಸಿದ ಇವರು ದಿನಾಂಕ 29.07.1994 ರಲ್ಲಿ ಸೇವೆಗೆ ಸೇರಿದ ಇವರು ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರೀಟಾ ಪಿಂಟೋ
ದ.ಕ.ಜಿ.ಪಂ.ಉರ್ದು.ಹಿ.ಪ್ರಾ.ಶಾಲೆ ಗಂಜಿಮಠ ಮಂಗಳೂರು.
ದಿನಾಂಕ 17.09.1962 ರಲ್ಲಿ ಜನಿಸಿದ ಇವರು ದಿನಾಂಕ 17.01.1996 ರಲ್ಲಿ ಸೇವೆಗೆ ಸೇರಿ ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೇ ತಮ್ಮಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಲಭಿಸಲಿ, ದೇವರು ನಿಮಗೆ ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ ನೀಡಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ. ತಮಗೆಲ್ಲರಿಗೂ ನಿವೃತ್ತ ಜೀವನದ ಶುಭಾಶಯಗಳು.