ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ
ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀಮತಿ ಮೇರಿ ಎನ್.ಜೆ
ಸ.ಹಿ.ಪ್ರಾ.ಶಾಲೆ ಕಳೆಂಜ.
ದಿನಾಂಕ 16.03.1964 ರಲ್ಲಿ ಜನಿಸಿದ ಇವರು ದಿನಾಂಕ 13.01.1996 ರಲ್ಲಿ ಸೇವೆಗೆ ಸೇರಿದ ಇವರು ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ನಿರ್ಮಲ ಬಿ ಎಸ್
ಸ.ಕಿ.ಪ್ರಾ ಶಾಲೆ ಹೊಸಪಟ್ನ
ಬೆಳ್ತಂಗಡಿ ತಾಲೂಕು
02.02.1999 ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಲವಾಡಿ ಶಾಲೆಗೆ ಕರ್ತವ್ಯಕ್ಕೆ ಸೇರ್ಪಡೆಗೊಂಡು ಮುಂದೆ ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ ಶಾಲೆಗೆ ವರ್ಗಾವಣೆಗೊಂಡು ನಂತರ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸ ಪಟ್ಟಣಕ್ಕೆ ಸೇರ್ಪಡೆಗೊಂಡು 26 ವರ್ಷಗಳ ಸುಧೀರ್ಘ ಸೇವೆಯಿಂದ ಈ ದಿನ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಇಂದ್ರಾವತಿ ಎನ್
ಸ.ಹಿ.ಪ್ರಾ ಶಾಲೆ ಗಾಂಧಿನಗರ
ಮಂಗಳೂರು ಉತ್ತರ
11-3 -1964 ರಲ್ಲಿ ಜನಿಸಿದ ಇವರು 11-01-1996 ರಲ್ಲಿ ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ ಶಾಲೆ ಗೋಳ್ತಮಜಲು ಇಲ್ಲಿ ಸೇವೆಗೆ ಸೇರಿದರು. ತಮ್ಮ 28 ವರ್ಷಗಳ ಸುದೀರ್ಘ ಸೇವೆಯಿಂದ ಸ.ಹಿ.ಪ್ರಾ ಶಾಲೆ ಗಾಂಧಿನಗರದಲ್ಲಿ ಇಂದು ನಿವೃತ್ತರಾಗುತ್ತಿರುವರು. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಇಂದಿರಾ ಯನ್
ಮುಖ್ಯ ಶಿಕ್ಷಕರು.
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಉಚ್ಚಿಲಗುಡ್ಡೆ ಸೋಮೇಶ್ವರ.
ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಉಮಾರಾಣಿ ಟಿ.ಹೆಚ್
ಸ.ಹಿ.ಪ್ರಾ.ಶಾಲೆ ಮೂಡುಬಿದಿರೆ.
ತೋಕೂರು ಹಳೆಯಂಗಡಿ ಶ್ರೀಯುತ ಟಿ.ಹರಿಭಟ್ ಹಾಗೂ ಶ್ರೀಮತಿ ಟಿ.ರಮಾಭಟ್ ದಂಪತಿಗಳ ಪುತ್ರಿಯಾಗಿ
ದಿನಾಂಕ 21.03.1964 ರಲ್ಲಿ ಜನಿಸಿದ ಇವರು ದಿನಾಂಕ 31.01.1995 ರಲ್ಲಿ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಾಸ್ತಿ ಆನೆಮೆಟ್ಟನಹಳ್ಳಿ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 08.06.1998 ರಲ್ಲಿ ಸೂಲಿಕುಂಟೆ ಎಸ್ ಮಾದಮಂಗಲ ಬಂಗಾರ ಪೇಟೆ ತಾಲೂಕು ಕೋಲಾರ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 11.09.2012 ರಲ್ಲಿ ಸ.ಹಿ.ಪ್ರಾ.ಶಾಲೆ ಮೂಡುಬಿದಿರೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ದೇಜಮ್ಮ
ಸಹ ಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ, ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿಗ್ರಾಮದ ಸೂಫಿಕೋಡಿ ಎಂಬಲ್ಲಿ ದಿ/ ಕಾಂತಪ್ಪ ಗೌಡ ಮತ್ತು ಚೆನ್ನಮ್ಮ ದಂಪತಿಯ ಪುತ್ರಿಯಾಗಿ ದಿನಾಂಕ 06/03/1964 ರಲ್ಲಿ ಜನನ. ಶ್ರೀ ಗೋಪಾಲ ಕೃಷ್ಣ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಾರು ಬೆಳ್ತಂಗಡಿ ತಾಲೂಕು ಇಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪ್ರೌಢ ಶಿಕ್ಷಣ ಮತ್ತು ಪಿಯುಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಪಡೆದಿರುತ್ತಾರೆ. ಸರಸ್ವತಿ ಶಿಕ್ಷಕ ತರಬೇತಿ ಶಾಲೆ ಮಡಿಕೇರಿಯಲ್ಲಿ ಟಿ.ಸಿ.ಹೆಚ್ ತರಬೇತಿಯನ್ನು ಪಡೆದು, ಪ್ರಾರಂಭದಲ್ಲಿ ಸುಮಾರು 4 ವರ್ಷಗಳ ಕಾಲ ಖಾಸಗಿ ಶಾಲೆ ತೆಕ್ಕಾರುಎಂಬಲ್ಲಿ ಉಚಿತ ಶಿಕ್ಷಕವೃತ್ತಿಯ ಸೇವೆಯನ್ನು ನೀಡಿರುತ್ತಾರೆ. ಬಳಿಕ 1994 ರಲ್ಲಿ ಹಿರೆಬಂಡಾಡಿ ಗ್ರಾಮದ ಶ್ರೀಯುತ (CISF) ಮೋನಪ್ಪ ಎಂಬವರೊಂದಿಗೆ ವಿವಾಹವಾಗಿದ್ದು, ನಂತರ ದಿನಾಂಕ 02/08/ 1994ರಲ್ಲಿ ಸರ್ಕಾರಿ ಶಿಕ್ಷಕ ವೃತ್ತಿಗೆ ಆಯ್ಕೆಗೊಂಡು ಸರ್ಕಾರಿ ಪ್ರಾಥಮಿಕ ಶಾಲೆ ಹಿರೇ ಬಂಡಾಡಿ ಇಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು 22 ವರ್ಷಗಳು ಇಲ್ಲಿ ಸೇವೆ ಸಲ್ಲಿಸಿರುತ್ತಾರೆ. ಬಳಿಕ 2016 ಜನವರಿಯಲ್ಲಿ ಸ.ಮಾ.ಉ.ಹಿ.ಪ್ರಾ.ಶಾಲೆ ಉಪ್ಪಿನಂಗಡಿಗೆ ವರ್ಗಾವಣೆಗೊಂಡು ಸುಮಾರು ಎಂಟು ವರ್ಷಗಳು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಒಟ್ಟು ಎರಡು ಶಾಲೆಗಳಲ್ಲಿ ಸುಮಾರು 30 ವರ್ಷಗಳು ಸಾರ್ಥಕ ಸೇವೆ ಸಲ್ಲಿಸಿ ದಿನಾಂಕ 31/03/2024ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಶಾಲಾ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ ಅಭಿನಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕಿಯಾಗಿ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆದರ್ಶ ಶಿಕ್ಷಕಿ ಆಗಿರುತ್ತಾರೆ.
ಪ್ರಸ್ತುತ ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಯುತ ಮೋನಪ್ಪ ಹಾಗೂ ಪುತ್ರ ವಿನ್ಯಾಸ್,ಪುತ್ರಿ ಹರ್ಷಿತಾ ಇವರೊಂದಿಗೆ ಆದರ್ಶ ಜೀವನವನ್ನು ನಡೆಸುತ್ತಿದ್ದಾರೆ. ಇವರ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಸಾವಿತ್ರಿ ಎನ್
ಸಹಶಿಕ್ಷಕಿ ಸ.ಉ.ಪ್ರಾ.ಶಾಲೆ ಕೆಮ್ಮಾಯಿ ಪುತ್ತೂರು ತಾಲೂಕು.
ತಂದೆ: ಕಣ್ಣ ಪಾಟಾಳಿ
ತಾಯಿ: ಯಮುನಾ
ಜನನ: 12-03-1964
ಸೇವೆಗೆ ಸೇರಿದ ದಿನಾಂಕ: 18-12-1997
ಸೇವೆ ಸಲ್ಲಿಸಿದ ಶಾಲೆಗಳು: ಕೆದಾಂಬಾಡಿ,ಹಂಟ್ಯಾರು ಹಾಗೂ ಕೆಮ್ಮಾಯಿ
ಸುಮಾರು 27 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ. ಪ್ರಸ್ತುತ ರಾಘವ ಎಸ್ ಇವರ ಜೊತೆ ಮನಿಯ ನರಿಮೊಗರು ಗ್ರಾಮದಲ್ಲಿ ವಾಸಿಸುವ ತಮ್ಮ ನಿವೃತ್ತಿಯ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ನೇತ್ರಾವತಿ
ದೈಹಿಕ ಶಿಕ್ಷಣ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ ಬಜತ್ತೂರು ಪುತ್ತೂರು ತಾಲೂಕು
ತಂದೆ: ವೀರಪ್ಪ ಗೌಡ
ತಾಯಿ: ಹೊನ್ನಮ್ಮ
ಜನನ: 15-03-1964
ಸೇವೆಗೆ ಸೇರಿದ ದಿನಾಂಕ: 03-02-1997
ಸೇವೆ ಸಲ್ಲಿಸಿದ ಶಾಲೆಗಳು: ಗೋಳಿತಟ್ಟು ಮತ್ತು ಬಜತ್ತೂರು
ಸುಮಾರು 27 ವರ್ಷಗಳ ಕಾಲ ದೈಹಿಕ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ. ಪ್ರಸ್ತುತ ಗ್ರಾಮದಲ್ಲಿ ಶ್ರೀಧರ ಗೌಡ ಹಾಗೂ ಮಕ್ಕಳ ಜೊತೆ ವಾಸಿಸುವ ತಮ್ಮ ನಿವೃತ್ತಿಯ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಇಂದಿರಾ ಕೆ
ಸಹಶಿಕ್ಷಕಿ
ಸ.ಹಿ.ಪ್ರಾ.ಶಾಲೆ ಕಟ್ಟತ್ತಾರು ಪುತ್ತೂರು ತಾಲೂಕು
ತಂದೆ: ಸುಬ್ಬಣ್ಣ ರೈ ಎಸ್
ತಾಯಿ: ಸುಂದರಿ
ಜನನ ದಿನಾಂಕ: 14-03-1964
ಸೇವೆಗೆ ಸೇರಿದ ದಿನಾಂಕ: 23-02-1996
ಸೇವೆ ಸಲ್ಲಿಸಿದ ಶಾಲೆಗಳು ಸ.ಹಿ.ಪ್ರಾ.ಶಾಲೆ ತೆಗ್ಗು ಹಾಗೂ ಸ.ಹಿ.ಪ್ರಾ.ಶಾ.ಕಟ್ಟತ್ತಾರು
ಸುಮಾರು 28 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ.ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ನೀಲಾವತಿ ಕೆ
ಮುಖ್ಯಗುರುಗಳು
ಸ.ಹಿ.ಪ್ರಾ.ಶಾಲೆ ಪೆರ್ಲಂಪಾಡಿ ಪುತ್ತೂರು ತಾಲೂಕು
ತಂದೆ: ಪೂವಣಿ ಗೌಡ ತಾಯಿ: ಹೊನ್ನಮ್ಮ
ಜನನ ದಿನಾಂಕ: 02-03-1964
ಸೇವೆಗೆ ಸೇರಿದ ದಿನಾಂಕ: 27-07-1994
ಸೇವೆ ಸಲ್ಲಿಸಿದ ಶಾಲೆಗಳು: ಸ.ಹಿ.ಪ್ರಾ.ಶಾಲೆ ಎಡಮಂಗಲ ಸುಳ್ಯ ತಾಲೂಕು, ಸ.ಕಿ.ಪ್ರಾ.ಶಾ. ಮಾಲೆತ್ತೋಡಿ ಹಾಗೂ ಸ.ಹಿ.ಪ್ರಾ.ಶಾಲೆ ಪೆರ್ಲಂಪಾಡಿ.
ಭಡ್ತಿ: 30-04-2022ರಂದು ಪೂರ್ಣಕಾಲಿಕ ಮುಖ್ಯಗುರುಗಳಾಗಿ ಭಡ್ತಿ.
ಸುಮಾರು 30 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ. ಪ್ರಸ್ತುತ ನಿವೃತ್ತ ಮುಖ್ಯಗುರುಗಳಾದ ವೀರಪ್ಪ ಗೌಡ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಸಮಾಜಕ್ಕೆ ತಮ್ಮಿಂದ ಇನ್ನಷ್ಟು ಸೇವೆಗಳು ಲಭಿಸಲಿ. ದೇವರು ತಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತಿದ್ದೇವೆ.