ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

WhatsApp Group Join Now
Telegram Group Join Now

ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ

ಗುರುಭ್ಯೋ ನಮಃ

IMG 20250131 WA0014

ಶ್ರೀ ಪದ್ಮನಾಭ ಅತ್ಯಾಡಿ
ಮುಖ್ಯ ಶಿಕ್ಷಕರು
ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅತ್ಯಾಡಿ ಶ್ರೀ ರಾಮಯ್ಯ ಗೌಡ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 01.02.1965 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಅಡ್ಪಂಗಾಯ ಹಾಗೂ ಸ.ಹಿ.ಪ್ರಾ.ಶಾಲೆ ಅಜ್ಜಾವರ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸ.ಪ್ರೌ.ಶಾಲೆ ಅಜ್ಜಾವರ ಇಲ್ಲಿ ಪೂರೈಸಿ ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯದಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಕರ ತರಬೇತಿ ಸಂಸ್ಥೆ ಮಡಿಕೇರಿ ಮಡಿಕೇರಿಯಲ್ಲಿ ಪೂರೈಸಿ ಪದವಿ ಶಿಕ್ಷಣವನ್ನು ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಹಾಗೂ ಎಂ.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ
ಪಡೆದ ಇವರು ದಿನಾಂಕ 26.03.1990 ರಲ್ಲಿ ಸ.ಕಿ.ಪ್ರಾ.ಶಾಲೆ ಪೈಂಬೆಚ್ಚಾಲು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅಜ್ಜಾವರದಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಅಜ್ಜಾವರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ನಂತರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸುಳ್ಯ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ನಂತರ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಸ.ಹಿ.ಪ್ರಾ.ಶಾಲೆ ಅಡ್ತಲೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಶಿಕ್ಷಣ ಸಂಯೋಜಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಪ್ರತಿನಿಯುಕ್ತಿಗೊಂಡು ಕರ್ತವ್ಯ ನಿರ್ವಹಿಸಿದ ಇವರು ನಂತರ ಸ.ಹಿ.ಪ್ರಾ.ಶಾಲೆ ಅಮೈ ಮಡಿಯಾರು ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20250131 WA0005 edited

ಶ್ರೀಮತಿ ವಿದ್ಯಾಕುಮಾರಿ
ಸಹ ಶಿಕ್ಷಕರು.
ಸ.ಹಿ.ಪ್ರಾ.ಶಾಲೆ ಗಂಡಿಬಾಗಿಲು.
ಬೆಳ್ತಂಗಡಿ ತಾಲೂಕು

ದಿನಾಂಕ 04.01.1965 ರಂದು ಜನಿಸಿದ ಇವರು ದಿನಾಂಕ 03.08.1998 ರಂದು ಸ.ಹಿ.ಪ್ರಾ.ಶಾಲೆ ಗಂಡಿಬಾಗಿಲು ಇಲ್ಲಿ ಸೇವೆಗೆ ಸೇರಿದ ಇವರು ಸುಮಾರು 26 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20250131 WA0006

ಶ್ರೀಮತಿ ರೆಜಿನಾ ಡಿಸಿಲ್ವಾ
ಸಹ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನ
ಬೆಳ್ತಂಗಡಿ ತಾಲೂಕು

ಕಾರ್ಕಳ ತಾಲೂಕಿನ ಮರಣೆ ಗ್ರಾಮದ ಅಜೆಕಾರು ದಿ.ಲೂಯಿಸ್ ಡಿಸಿಲ್ವಾ ಮತ್ತು ಶ್ರೀಮತಿ ಎಲಿಜ್ ಡಿಸಿಲ್ವಾ ದಂಪತಿಗಳ ಪುತ್ರಿಯಾಗಿ ದಿನಾಂಕ 05.01.1965 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಮಾ.ಹಿ.ಪ್ರಾ.ಶಾಲೆ ಅಜೆಕಾರು ಹಾಗೂ ಪ್ರೌಢ ಶಿಕ್ಷಣವನ್ನು ಜ್ಯೋತಿ ಪ್ರೌಢ ಶಾಲೆ ಅಜೆಕಾರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆ ಕೈಕಂಬ ಇಲ್ಲಿ ಪೂರೈಸಿ ದಿನಾಂಕ 17.01.1996 ರಂದು ಸ.ಉ.ಹಿ.ಪ್ರಾ.ಶಾಲೆ ಬದನಾಜೆ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಹಳೆಪೇಟೆ ಉಜಿರೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 30.07.2015 ರಂದು ಸ.ಹಿ.ಪ್ರಾ.ಶಾಲೆ ಕೊಯ್ಯೂರು ದೇವಸ್ಥಾನ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20250131 WA0007

ಶ್ರೀಮತಿ ಸಿಸಿಲಿಯಾ ಡಾಯಸ್
ಸ.ಕಿ.ಪ್ರಾ.ಶಾಲೆ ಎಲಿಯನಡುಗೋಡ
ಬಂಟ್ವಾಳ ತಾಲೂಕು


ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದ ಶ್ರೀ ಸಾಲ್ವೊಮೋರ್ ಡಾಯಸ್ ಮತ್ತು ಶ್ರೀಮತಿ ಪಿಯಾದ್ ಮಸ್ಕರೇನ್ಹಸ್ ದಂಪತಿಗಳ ಪುತ್ರಿಯಾಗಿ ದಿನಾಂಕ 05.01.1965 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹೋಲಿ ಏಂಜಲ್ಸ್ ಹಿ.ಪ್ರಾ.ಶಾಲೆ ಶಿರ್ತಾಡಿಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಜವಾಹರ್ ಲಾಲ್ ನೆಹರು ಹೈಸ್ಕೂಲ್ ಮಕ್ಕಿಯಲ್ಲಿ ಪೂರೈಸಿ ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಹಾಗೂ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆ ಕಿನ್ನಿಕಂಬಳ ಇಲ್ಲಿ ಪೂರೈಸಿ ದಿನಾಂಕ 17.01.1996 ರಂದು ಸ.ಕಿ.ಪ್ರಾ.ಶಾಲೆ ಕಾನ ಬೆಳುವಾಯಿ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 15.10.1999 ರಂದು ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಕೆರೆಬಳಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 10.06.2005 ರಂದು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಸ.ಹಿ.ಪ್ರಾ.ಶಾಲೆ ಹೊಕ್ಕಾಡಿಗೋಳಿ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ನಂತರ 03.08.2010 ರಂದು ಸ.ಕಿ.ಪ್ರಾ.ಶಾಲೆ ಮಂಡಾಡಿ ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 08.08.2014 ರಂದು ಬಂಟ್ವಾಳ ತಾಲೂಕಿನ ಸ.ಕಿ.ಪ್ರಾ.ಶಾಲೆ ಎಲಿಯನಡುಗೋಡು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20250131 WA0008

ಪಿ.ವಿ.ವೆಂಕಟ್ರಮಣ ಭಟ್
ಸಹಶಿಕ್ಷಕರು
ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಪುತ್ತೂರು ತಾಲೂಕು.


ಜನನ:24-1-1965 ಸೇವೆಗೆ ಸೇರಿದ ದಿನಾಂಕ:29.7.1994

ಸೇವೆ ಸಲ್ಲಿಸಿದ ಶಾಲೆಗಳು:
1.ಸ.ಹಿ.ಪ್ರಾ.ಶಾಲೆಕೆದಂಬಾಡಿ-3 ವರ್ಷಗಳು
2.ಸ.ಮಾ.ಉ.ಹಿ.ಪ್ರಾ.ಶಾಲೆ ಉಪ್ಪಿನಂಗಡಿ-13 ವರ್ಷಗಳು
3.ಸ.ಉ.ಹಿ.ಪ್ರಾ.ಶಾಲೆಕೆಮ್ಮಾರ-14ವರ್ಷ
ತಾವು ಇಂದು ನಿವೃತ್ತಿ ಯಾಗುತ್ತಿರುವಿರಿ. ಸುಮಾರು 30 ವರ್ಷಗಳ ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.

IMG 20250131 WA0009

ಶ್ರೀಮತಿ ರೆಜಿನಾ ಡಿ ಸೋಜ
ಸಹಶಿಕ್ಷಕಿ
ಸ.ಉ.ಹಿ.ಪ್ರಾ.ಶಾಲೆ ಅರಿಯಡ್ಕ ಪುತ್ತೂರು ತಾಲೂಕು


ಜನ್ಮ ದಿನಾಂಕ:04-01-1965
ಸೇವೆಗೆ ಸೇರಿದ ದಿನಾಂಕ: 14-02-1996
ಸೇವೆ ಸಲ್ಲಿಸಿದ ಶಾಲೆಗಳು: ಸ.ಹಿ.ಪ್ರಾ.ಶಾಲೆ ಚಿಕ್ಕಪಡ್ನೂರು ಹಾಗೂ
ಸ.ಹಿ.ಪ್ರಾಥಮಿಕ ಶಾಲೆ ಅರಿಯಡ್ಕ ಇಲ್ಲಿ ಇದುವರೆಗೆ ಸೇವೆ ಸಲ್ಲಿಸಿರುತ್ತಾರೆ. ತಾವು ಇಂದು ನಿವೃತ್ತಿ ಯಾಗುತ್ತಿರುವಿರಿ. ಸುಮಾರು 28 ವರ್ಷಗಳ ತನ್ನ ಸೇವಾವಧಿಯಲ್ಲಿ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿರುವ ತಾವು ಶಾಲೆಗಳಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಂಡು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.

IMG 20250131 WA0013

ಚಂದ್ರಾವತಿ ಡಿ
ಮುಖ್ಯಶಿಕ್ಷಕರು
ಸರಕಾರಿ ಉನ್ನ ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರ್ ಎಂ ಎಸ್ ಎ ಸಂಪಾಜೆ, ಸುಳ್ಯ, ದ ಕ

ಸುಳ್ಯ ತಾಲೂಕಿನ ಕೇರ್ಪಳದ ದಿವಂಗತ ಶೇಷಪ್ಪಗೌಡ ಮತ್ತು ದಿವಂಗತ ಸೀತಮ್ಮ ದಂಪತಿಗಳ ಸುಫುತ್ರಿಯಾಗಿ ದಿನಾಂಕ 9.1.1965 ರಂದು ಜನಿಸಿದ ತಾವು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಹಾಗೂ ಬಿಕಾಂ ಪದವಿಯನ್ನು ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ಪಡೆದು ಕುಮುದ ಉಮಾಶಂಕರ ಶಿಕ್ಷಕ ತರಬೇತಿ ಸಂಸ್ಥೆ ಕೊಕ್ಕರ್ಣೆ ಉಡುಪಿ ಇಲ್ಲಿ ಶಿಕ್ಷಕ ತರಬೇತಿಯನ್ನು ಪಡೆದುಕೊಂಡಿರುತ್ತೀರಿ. ದಿನಾಂಕ 28. 7. 1994 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸೋಣಂಗೇರಿಯಲ್ಲಿ ಹಿಂದಿ ಶಿಕ್ಷಕಿಯಾಗಿ ಸರಕಾರಿ ಸೇವೆಯನ್ನು ಪ್ರಾರಂಭಿಸಿರುತ್ತೀರಿ. ಹಿಂದಿ ಭಾಷಾ ಬೋಧಕರಾಗಿ ವಿದ್ಯಾರ್ಥಿಗಳನ್ನು ಓದಿನೊಂದಿಗೆ ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಾ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಶ್ಲಾಘನೀಯ. ಇಲ್ಲಿ ಸುಮಾರು 22 ವರ್ಷ ಶಿಕ್ಷಕಿಯಾಗಿ, ಪ್ರಭಾರ ಮುಖ್ಯ ಶಿಕ್ಷಕಿಯಾಗಿ, ತಾಲೂಕು,ಜಿಲ್ಲೆಯ ಸಂಪನ್ಮೂಲ ವ್ಯಕ್ತಿಯಾಗಿ, ಶಿಕ್ಷಕರಿಗೆ, ಎಸ್ ಡಿ ಎಂ ಸಿ ಯವರಿಗೆ ಅದೆಷ್ಟೋ ತರಬೇತಿಗಳನ್ನು ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾಯ, ವಾಚ, ಮನಸಾ ಪ್ರಯತ್ನಿಸಿದ ತಾವು ಈ ಸಂದರ್ಭದಲ್ಲಿ ಶಾಲೆಯ ಕಾಂಪೌಂಡ್, ಶೌಚಾಲಯ ನಿರ್ಮಾಣ, ಆಟದ ಮೈದಾನದ ವಿಸ್ತಾರ ಹೀಗೆ ಶಾಲೆಯ ಭೌತಿಕ ಅಭಿವೃದ್ಧಿಯಲ್ಲೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಾವು ದಿನಾಂಕ 10.08.2016 ರಂದು ಸಂಪಾಜೆ ಶಾಲೆಗೆ ವರ್ಗಾವಣೆಗೊಂಡು ಹಿಂದಿ ಭಾಷಾ ಶಿಕ್ಷಕಿಯಾಗಿ, ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ದಿನಾಂಕ 5. 5.2022 ರಂದು ಮುಖ್ಯ ಶಿಕ್ಷಕಿಯಾಗಿ ಬಡ್ತಿಗೊಂಡು ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿರುವ ತಾವು ಶಾಲೆಯ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ವಿದ್ಯಾ ಭಿಮಾನಿಗಳ, ಪೋಷಕರ ಮತ್ತು ವಿದ್ಯಾರ್ಥಿಗಳ ಪ್ರೀತಿ,ಗೌರವಕ್ಕೆ ಪಾತ್ರರಾದ ತಾವು ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಕ್ರೀಯಾಶೀಲ ನಾಮನಿರ್ದೇಶನ ಸದಸ್ಯರಾಗಿ, ಹಿಂದಿ ಭಾಷಾ ಶಿಕ್ಷಕರ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು
ವಿದ್ಯಾರ್ಥಿಗಳೊಂದಿಗಿನ ಪ್ರೀತಿ, ಕರ್ತವ್ಯ ನಿಷ್ಠೆ, ಪ್ರಾಮಾಣಿಕ ಸೇವೆಯನ್ನು ಗುರುತಿಸಿ 2023/24ನೇ ಶೈಕ್ಷಣಿಕ ವರ್ಷದಲ್ಲಿ ಸುಳ್ಯ ತಾಲೂಕಿನ ಪ್ರತಿಷ್ಠಿತ ರೋಟರಿ ಕ್ಲಬ್ ವತಿಯಿಂದ ತಮ್ಮನ್ನು NATION BUILDER AWARD ನೀಡಿ ಗೌರವಿಸಿರುವುದು ಅಭಿನಂದನೀಯ.
ಸುದೀರ್ಘ 30 ವರ್ಷ 6 ತಿಂಗಳ ಸರಕಾರಿ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಆದರ್ಶ ಗುರುವಾಗಿ, ವಿದ್ಯಾಭಿಮಾನಿಗಳ ಒಡನಾಡಿಯಾಗಿ ಇಂದು ಅಂದರೆ 31.01.2025ರಂದು ಸೇವೆಯಿಂದ ನಿವೃತ್ತಿಯನ್ನು ಹೊಂದುತ್ತಿದ್ದೀರಿ. ಮೇಡಂ ತಮ್ಮ ನಿಸ್ವಾರ್ಥ, ಪ್ರಾಮಾಣಿಕ, ದಕ್ಷ ಸೇವೆಯನ್ನು ಸ್ಮ ರಿಸುತ್ತಾ ಅತ್ಯಂತ ಗೌರವದಿಂದ ಮತ್ತು ಅಭಿಮಾನದಿಂದ ಅಭಿನಂದಿಸುತಿದ್ದೇವೆ.
1994 ರಲ್ಲಿ ಪ್ರಭಾಕರ ಬಪ್ಪಳಿಗೆ ಪುತ್ತೂರು ಇವರೊಂದಿಗೆ ವೈವಾಹಿಕ ಜೀವನವನ್ನು ಪ್ರಾರಂಭಿಸಿದ್ದು ಪ್ರಸ್ತುತ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ರ ತನುಷ್ ಮತ್ತು ಗ್ರಾಫಿಕ್ ಡಿಸೈನರ್ ಆಗಿ ಸೇವೆ ಸಲ್ಲಿಸುತ್ತಿರುವ ಪುತ್ರಿ ತನ್ವಿ ಯೊಂದಿಗಿನ ತಮ್ಮ ಸುಮಧುರ ಜೀವನವು ಆರೋಗ್ಯ, ಸುಖ,ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಸೃಷ್ಟಿಕರ್ತ ಭಗವಂತನಲ್ಲಿ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತೇವೆ.

IMG 20250131 WA0011

ಶ್ರೀಮತಿ ಜೆನೆಟ್ ಪಿಂಟೋ
ಮುಖ್ಯ ಶಿಕ್ಷಕರು.
ದ.ಕ.ಜಿ.ಪಂ.ಮಾದರಿ.ಹಿ.ಪ್ರಾ.ಶಾಲೆ ತಿರುವೈಲು ಮಂಗಳೂರು ತಾಲೂಕು

27 ವರ್ಷಗಳ ಕಾಲ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ನಂತರ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20250131 WA0012 edited

2 ಜೆಸಿಂತಾ ಡಿಸೋಜಾ
ಸ.ಹಿ.ಪ್ರಾ.ಶಾಲೆ ಕಣ್ಣೂರು.
ಮಂಗಳೂರು ತಾಲೂಕು

ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಸಮಾಜಕ್ಕೆ ತಮ್ಮಿಂದ ಇನ್ನಷ್ಟು ಸೇವೆಗಳು ಲಭಿಸಲಿ. ದೇವರು ತಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತಿದ್ದೇವೆ

WhatsApp Group Join Now
Telegram Group Join Now
Sharing Is Caring:

Leave a Comment