ಗುರುಭ್ಯೋ ನಮಃ
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಅಕ್ಷರ ಸೇವಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿ ತಮ್ಮ ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ನೀಡಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ…. 🌹🙏🌹
ಶ್ರೀ ವಿಶ್ವೇಶ್ವರ
ಸ.ಹಿ.ಪ್ರಾ.ಶಾಲೆ.ಬುಲೇರಿ
ಬೆಳ್ತಂಗಡಿ ತಾಲೂಕು
ಬಿ.ಶ್ಯಾಮ್ ಭಟ್ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಮಗನಾಗಿ ಜನಿಸಿದ ಇವರು, ಪ್ರಾಥಮಿಕ ಶಿಕ್ಷಣವನ್ನು ಸುಳ್ಯ, ಗಾಂಧಿನಗರ ಹಾಗೂ ಸ.ಹಿ.ಪ್ರಾ.ಶಾಲೆ ಬೆಳಂದೂರು ಪುತ್ತೂರು ತಾಲೂಕು, ಇಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಕಾಸಿಯಾ ಹೈಸ್ಕೂಲ್ ಮಂಗಳೂರು ಇಲ್ಲಿ ಪೂರೈಸಿ, ಟಿ.ಸಿ.ಎಚ್. ತರಬೇತಿಯನ್ನು, ಶಿಕ್ಷಕರ ತರಬೇತಿ ಕೇಂದ್ರ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 01.09.1993 ರಲ್ಲಿ ಮೇಗದ್ದೆ ಕಾರ್ಕಳದಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿ ನಂತರ ದಿನಾಂಕ 31.04.1998ರಲ್ಲಿ ನೆಟ್ಟಣಿಗೆ ಮುಡ್ನೂರು, ಪುತ್ತೂರು ಇಲ್ಲಿಗೆ ವರ್ಗಾವಣೆಗೊಂಡು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 14.09.2000ರಲ್ಲಿ ಸ.ಹಿ.ಪ್ರಾ.ಶಾಲೆ.ಕೆಮ್ಮಾರ ಪುತ್ತೂರು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 15.04.2002ರಲ್ಲಿ ಸ.ಹಿ.ಪ್ರಾ.ಶಾಲೆ.ಗಂಡಿಬಾಗಿಲು ಪುತ್ತೂರು ಇಲ್ಲಿಗೆ ವರ್ಗಾವಣೆಗೊಂಡು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 2012-2016ರವರೆಗೆ ಸಿ.ಆರ್.ಪಿಯಾಗಿ ಬಜತ್ತೂರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 10.05.2016ರಲ್ಲಿ ಸ.ಹಿ.ಪ್ರಾ.ಶಾಲೆ.ಉಪ್ಪಿನಂಗಡಿ ಮಠ ಪುತ್ತೂರು ಇಲ್ಲಿಗೆ ವರ್ಗಾವಣೆಗೊಂಡು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಮುಖ್ಯ ಗುರುಗಳಾಗಿ ಪದೋನ್ನತಿ ಪಡೆದು ದಿನಾಂಕ 20.02.2020ರಿಂದ ಸ.ಹಿ.ಪ್ರಾ.ಶಾಲೆ.ಬುಳೇರಿ, ಬೆಳ್ತಂಗಡಿ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಮಾಧವ ಕುದ್ರೆತ್ತಾಯ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಳಂತಿಮೊಗರು
ಬಂಟ್ವಾಳ ತಾಲೂಕು
ದಿನಾಂಕ 20.02.1962ರಂದು,
ವಿ.ನಾರಾಯಣ ಕುದ್ರೆತ್ತಾಯ ಮತ್ತು ಸುಲೋಚನಾ ದಂಪತಿಗಳ ನಾಲ್ಕನೇ ಸುಪುತ್ರರಾಗಿ ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದಲ್ಲಿ ಜನಿಸಿ, ಒಂದನೇ ತರಗತಿಯಿಂದ ಪಿ.ಯು.ಸಿ ವರೆಗಿನ ವಿದ್ಯಾಭ್ಯಾಸವನ್ನು ವಿಟ್ಲದಲ್ಲಿ ಮುಗಿಸಿ, ಟಿ.ಸಿ.ಎಚ್ ನ್ನು ಮಂಗಳೂರಿನ ಶಿಕ್ಷಕರ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಇಲ್ಲಿ ಪಡೆದಿರುತ್ತಾರೆ.
ದಿನಾಂಕ 10.01.1996ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೆಲಿಂಜ, ವೀರಕಂಭ ಗ್ರಾಮ ಇಲ್ಲಿ ಸೇವೆಗೆ ಸೇರಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ನಂತರ 23.10.2000ರಂದು ವರ್ಗಾವಣೆಗೊಂಡು, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬೊಳಂತಿಮೊಗರು, ಇಲ್ಲಿ ಕರ್ತವ್ಯವನ್ನು ಮುಂದುವರೆಸಿ ಈ ಶಾಲೆಯಲ್ಲಿ ಸುಮಾರು 13 ವರ್ಷಗಳ ಕಾಲ ನಲಿ-ಕಲಿ ತರಗತಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಈ ಶಾಲೆಯಲ್ಲಿ 22 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಮಂಗಳ
ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಸುರತ್ಕಲ್
ಮಂಗಳೂರು ಉತ್ತರ
ಇವರು ದಿನಾಂಕ 30.10.1982 ರಲ್ಲಿ ಸೇವೆಗೆ ಸೇರಿ ಸ.ಕಿ.ಪ್ರಾ.ಶಾಲೆ ಆಚಾರಿಪಲ್ಕೆ ಬಂಟ್ವಾಳ, ಸ.ಹಿ.ಪ್ರಾ.ಶಾಲೆ ಹಂಡೇಲು, ಮೂಡುಬಿದಿರೆ,
ಸ.ಹಿ.ಪ್ರಾ.ಶಾಲೆ ಪದ್ಮನೂರು, ಮಂಗಳೂರು
ಸ.ಹಿ.ಪ್ರಾ.ಶಾಲೆ ಉಳ್ಳಂಜೆ, ಮಂಗಳೂರು ಇಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಸುರತ್ಕಲ್ ಮಂಗಳೂರು ಇಲ್ಲಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಶಶಿಕಲಾ ಯು
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ.
ಮೀನಾದಿ, ಕಿನ್ಯಾ
ಮಂಗಳೂರು ದಕ್ಷಿಣ
ದಿನಾಂಕ 02.02.1962ರಂದು ಸುಂದರ ಯು ಮತ್ತು ಗೋಪಿಯವರ ಪುತ್ರಿಯಾಗಿ ಜನಿಸಿದ ಇವರು ದಿನಾಂಕ 06.11.1982ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಡ್ರಪ್ಪಾಡಿ ಧರ್ಮಸ್ಥಳ, ಬೆಳ್ತಂಗಡಿ ಇಲ್ಲಿ ಸೇವೆಗೆ ಸೇರಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, ನಂತರ ದಿನಾಂಕ 10.09.1985ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಿನ್ಯಾ ಬೆಳರಿಂಗೆ ಅಂಚೆ ಕಿನ್ಯಾ, ಮಂಗಳೂರು ಇಲ್ಲಿಗೆ ವರ್ಗಾವಣೆಗೊಂಡು 8 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 10.06.1993ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮುನ್ನೂರು, ಕುತ್ತಾರು ಪದವು, ಮಂಗಳೂರು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 01.06.2011ರಿಂದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಿನ್ಯಾ, ಮೀನಾದಿ ಅಂಚೆ ಕಿನ್ಯಾ ಮಂಗಳೂರು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು
ಶ್ರೀಮತಿ ಸುಕೇಶಿನಿ ಕೆ
ಸ.ಹಿ.ಪ್ರಾ ಶಾಲೆ ಮಲಾಲ್ ಮಂಗಳೂರು ದಕ್ಷಿಣ
28.02.1962 ರಲ್ಲಿ ಜನಿಸಿದ ಸುಕೇಶಿನಿ ಕೆ ಇವರು ಸ.ಹಿ.ಪ್ರಾ ಶಾಲೆ ಮಲಾಲ್, ಮಂಗಳೂರು ದಕ್ಷಿಣದಲ್ಲಿ ಈ ತಿಂಗಳು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಮೇರಿ ಇ.ಟಿ
ಸ.ಕಿ.ಪ್ರಾ ಶಾಲೆ ಹೊಸ್ತೋಟ
ಕಡಬ ತಾಲೂಕು
ಸ.ಕಿ.ಪ್ರಾ. ಶಾಲೆ ಹೊಸ್ಮಠ ಇಲ್ಲಿಯ ಶಿಕ್ಷಕಿಯಾದ ಶ್ರೀಮತಿ ಮೇರಿ ಇ.ಟಿ ಇವರು ಈ ತಿಂಗಳು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಜೂಲಿಯಾನ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು.
ಕಡಬ ತಾಲೂಕು
ಮಂಗಳೂರು ತಾಲೂಕು ಹರೇಕಳ ಗ್ರಾಮದಲ್ಲಿ ಮ್ಯಾಸ್ಟಿಲ್ ಡಿ’ಸೋಜ ಮತ್ತು ಮ್ಯಾಗ್ದಲಿನ್ ಡಿಸೋಜ ಇವರ ಪುತ್ರಿಯಾಗಿ ದಿನಾಂಕ 16.02.1962 ರಂದು ಜನಿಸಿ, ಹರೇಕಳದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನೂ, ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿ, ಕಪಿತಾನಿಯೋ ಶಿಕ್ಷಕ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ 1979-81 ರ ಕಾಲದಲ್ಲಿ ಟಿ.ಸಿ.ಎಚ್ ಪೂರ್ಣಗೊಳಿಸಿ ಸುಮಾರು ಏಳು ವರ್ಷಗಳ ಕಾಲ ಹುಣಸೂರು ಮತ್ತು ಮೆಲಾರ್ ಪದವಿನಲ್ಲಿ, ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿ 1987ರಲ್ಲಿ ಫೆಲಿಕ್ಸ್ ಡಿ’ಕುನ್ಹ ಇವರೊಂದಿಗೆ ತಮ್ಮ ದಾಂಪತ್ಯ ಬದುಕಿಗೆ ಕಾಲಿರಿಸಿದ ಇವರು ದಿನಾಂಕ 1.12.1986ರಂದು ತಮ್ಮ ವೃತ್ತಿಜೀವನವನ್ನು ಸರಕಾರಿ ಪ್ರಾಥಮಿಕ ಶಾಲೆ ಕುರಿಯ ಇಲ್ಲಿ ಪ್ರಾರಂಭಿಸಿ ಬಳಿಕ ಆರು ವರ್ಷ
ಈ ಶಾಲೆಯಲ್ಲಿ, ಹದಿನೈದು ವರ್ಷಗಳ ಕಾಲ ಮುಕ್ವೆ ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ದಿನಾಂಕ 02.10.2014 ರಂದು ಮುಖ್ಯ ಗುರುಗಳಾಗಿ ಪದೋನ್ನತಿ ಪಡೆದು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಕುಸುಮಾವತಿ ಎ
ಸ.ಕಿ.ಪ್ರಾ.ಶಾಲೆ ಸಂಪ್ಯಾಡಿ
ಬಳ್ಪ, ಕಡಬ ತಾಲೂಕು
ಕುಶಾಲಪ್ಪ ಗೌಡರ ಮಗಳಾಗಿ ಜನಿಸಿದ ಕುಸುಮಾವತಿ ಯವರು 30.11.1998ರಲ್ಲಿ ಸೇವೆಗೆ ಸೇರಿದರು. ತಮ್ಮ 25 ವರ್ಷಗಳ ಸುದೀರ್ಘ ಸೇವೆಯಿಂದ ಸ.ಕಿ.ಪ್ರಾ ಶಾಲೆ ಸಂಪ್ಯಾಡಿಯಲ್ಲಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ.
ಪತಿಯಾದ ಹೊನ್ನಪ್ಪ ಗೌಡ ರೊಂದಿಗಿನ ತಮ್ಮ ನಿವೃತ್ತ ಜೀವನವು ಸುಖಮಯವಾಗಿರಲಿ.
ಶೀ ವೆಂಕಟ್ರಮಣ ಎನ್
ದ.ಕ.ಜಿ.ಪಂ.ಉ.ಪ್ರಾ.ಶಾಲೆ ಮೇನಾಲ ಈಶ್ವರಮಂಗಲ
ಪುತ್ತೂರು ತಾಲೂಕು
ದಿನಾಂಕ:12-02-1962ರಂದು ಜನಿಸಿದ ತಾವು ಶಿಕ್ಷಣದ ಮೇಲಿನ ಪ್ರೀತಿಯಿಂದ ಶಿಕ್ಷಕ ತರಬೇತಿ ಮುಗಿಸಿ ದಿನಾಂಕ 28-11-2003 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಜಂಕಾಡಿ ಇಲ್ಲಿ ಸೇವೆಗೆ ಸೇರಿದರು. ತದನಂತರ ವರ್ಗಾವಣೆಗೊಂಡು 04-07-2009 ರಿಂದ 30-03-2016ರವರೆಗೆ ಸ.ಹಿ.ಪ್ರಾ.ಶಾ.ನೆಟ್ಟಣಿಗೆ ಮುಡ್ನೂರು ಇಲ್ಲಿ ಸೇವೆ ಸಲ್ಲಿಸಿದಿರಿ.ಅಲ್ಲಿಂದ ಇದುವರೆಗೆ ಸ.ಉ.ಹಿ.ಪ್ರಾ.ಶಾಲೆ ಮೇನಾಲ ಈಶ್ವರಮಂಗಲದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವಿರಿ.ಸುಧೀರ್ಘ 19ವರ್ಷಗಳ ಕಾಲ ಅಪಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ಮಕ್ಕಳ, ಹೆತ್ತವರ ಹಾಗೂ ಊರವರ ಪ್ರಶಂಸೆಗೆ ಪಾತ್ರವಾಗಿರುವಿರಿ.ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಶ್ರಮಿಸಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದಿರಿ.ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ವಂದನ
ದ.ಕ.ಜಿ.ಪಂ.ಉ.ಪ್ರಾ.ಶಾಲೆ ಉಪ್ಪಿನಂಗಡಿ.
ಪುತ್ತೂರು ತಾಲೂಕು
ಸುಮಾರು 28 ವರ್ಷಗಳ ಕಾಲ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಹಾಗೂ ಸಾವಿರಾರು ವಿದ್ಯಾರ್ಥಿಗಳನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಿ ವಿಭಾಗ ಮಟ್ಟದ ಯೋಗ ಸ್ಪರ್ಧೆ ಯನ್ನು ಉಪ್ಪಿನಂಗಡಿ ಶಾಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿ ಇಂದು ಸೇವೆ ಯಿಂದ ನಿವೃತ್ತಿಗೊಳ್ಳುತ್ತಿರುವ ತಮ್ಮ ಮುಂದಿನ ಜೀವನವು ಸುಖಮಯವಾಗಿ ಸಾಗಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಕಸ್ತೂರಿ ಎಂ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನಕಮಜಲು
ಸುಳ್ಯ ತಾಲೂಕು
ದಿನಾಂಕ 04.02.1962 ರಂದು ಗುರುವಪ್ಪ ಮಾಸ್ತರ್ ಎಂ. ಮತ್ತು ಸರಸ್ವತಿ ಎನ್ ದಂಪತಿಗಳ ಪುತ್ರಿಯಾಗಿ ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಮಂಗಲ್ಪಾಡಿಯಲ್ಲಿ ಜನಿಸಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ ಶಾಲೆ ಚೆರುಗೋಳಿಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಸ.ಪ್ರೌಢ ಶಾಲೆ ಮಂಗಲ್ಪಾಡಿಯಲ್ಲಿ ಪೂರೈಸಿ, ಟಿ.ಸಿ.ಎಚ್ ನ್ನು ಮಂಗಳೂರಿನ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪಡೆದಿರುತ್ತಾರೆ.
1982ರಲ್ಲಿ ಸ.ಕಿ.ಪ್ರಾ.ಶಾಲೆ ಕುಕ್ಕಾವು ಬೆಳ್ತಂಗಡಿಯಲ್ಲಿ ಸೇವೆಗೆ ಸೇರಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ನಂತರ ಸ.ಕಿ.ಪ್ರಾ.ಶಾಲೆ ಪೆರುವಾಜೆ ಸುಳ್ಯ ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತು ಸುಳ್ಯ ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅನಂತರ ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು 2000ರಿಂದ2006ರವರೆಗೆ ಹಿರಿಯ ಪ್ರಾಥಮಿಕ ಶಾಲೆ ಬಾಂಜಿಕೋಡಿ ಇಲ್ಲಿ ಸೇವೆ ಸಲ್ಲಿಸಿ ನಂತರ ಪದವಿಧರೇತರ ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡು ದಿನಾಂಕ 05.04.2006ರಿಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕನಕಮಜಲು ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರೇವತಿ.ಎ.ವಿ
ಸಹ ಶಿಕ್ಷಕರು, ಪೈಲಾರು.
ಸುಳ್ಯ ತಾಲೂಕು
ದಿನಾಂಕ 19.02.1962ರಂದು ವಾಡ್ಯಪ್ಪ ಗೌಡ ಮತ್ತು ಹೂವಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಭಗೀರಥ ಕೋಲ್ಚಾರ್ ರವರನ್ನು ವಿವಾಹವಾಗಿರುತ್ತಾರೆ.
ಇವರು ಎಸ್.ಎಸ್.ಎಲ್.ಸಿ. ಟಿ.ಸಿ.ಎಚ್ ನ್ನು ಪೂರೈಸಿರುತ್ತಾರೆ.
ದಿನಾಂಕ 15.12.1998ರಲ್ಲಿ ಸ.ಹಿ.ಪ್ರಾ.ಶಾಲೆ ಅಮರಪಡ್ನೂರು ಸುಳ್ಯ ತಾಲೂಕು ಇಲ್ಲಿ ಸೇವೆಗೆ ಸೇರಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ನಂತರ ದಿನಾಂಕ 22.12.2001 ರಿಂದ 28.10.2016 ರವರೆಗೆ ಸ.ಹಿ.ಪ್ರಾ.ಶಾಲೆ ಕೇರ್ಪಳ ಸುಳ್ಯ ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 28.10.2016 ರಿಂದ 30.10.2019ರವರೆಗೆ ಸ.ಹಿ.ಪ್ರಾ.ಶಾಲೆ ಜಯನಗರ ಇಲ್ಲಿ ಸೇವೆ ಸಲ್ಲಿಸಿ ನಂತರ 30.09.2019ರಿಂದ ಪೈಲಾರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ತಮ್ಮ ಸಾರ್ಥಕ ಸೇವೆಯಿಂದ ನಿವೃತ್ತರಾಗುತ್ತಿರುವ ಎಲ್ಲಾ ಶಿಕ್ಷಕ/ಕಿ ಬಂಧುಗಳಿಗೆ ಭಗವಂತನು ಆಯುರಾರೋಗ್ಯ ಸಕಲ ಐಶ್ವರ್ಯವನ್ನು ನೀಡಲಿ ಎಂದು ಹಾರೈಸುತ್ತೇವೆ.