ಗುರುಭ್ಯೋ ನಮಃ
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ವಿದ್ಯಾರ್ಥಿಗಳ ಜೀವನದ ಗುರಿ ಉದ್ದೇಶಗಳನ್ನು ಅವುಗಳನ್ನು ಸಾಧಿಸುವ ಮಾರ್ಗವನ್ನು ಧ್ಯೇಯವನ್ನು ಅವರ ಮನಸ್ಸಿನಲ್ಲಿ ಸೃಷ್ಟಿಮಾಡಿ ಅದೆಷ್ಟೋ ವಿದ್ಯಾರ್ಥಿಗಳನ್ನು ಸಮಾಜದ ಮಾದರಿ ವ್ಯಕ್ತಿತ್ವಗಳಾಗಿ ರೂಪಿಸಿ ಈ ತಿಂಗಳು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿರುವ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀ ಕೃಷ್ಣ ಮುರಾರಿ ಬಿ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ನನ್ಯ ಪುತ್ತೂರು ತಾಲೂಕು.
ಶ್ರೀ ವಿಷ್ಣು ಭಟ್ ಹಾಗೂ ಶ್ರೀಮತಿ ಉಷಾ ಕಾವೇರಿ ದಂಪತಿಗಳ ಮಗನಾಗಿ 24-08-1961ರಂದು ಜನಿಸಿದರು.ವಿದ್ಯಾಭ್ಯಾಸ ಪೂರೈಸಿಕೊಂಡು 10-06-1996ರಲ್ಲಿ ಸ.ಹಿ.ಪ್ರಾ.ಶಾಲೆ ತೋಡಿಕಾನ ಸುಳ್ಯ ತಾಲೂಕು ಇಲ್ಲಿ ಶಿಕ್ಷಕರಾಗಿ ವೃತ್ತಿ ಸೇವೆಗೆ ಸೇರಿ, 9ವರ್ಷಗಳ ಸೇವೆ ಬಳಿಕ ವರ್ಗಾವಣೆ ಪಡೆದು 08-06-2005ರಿಂದ 31-08-2021 ಇದುವರೆಗೆ ದ.ಕ.ಜಿ.ಪಂ.ಸ. ಹಿ.ಪ್ರಾ.ಶಾಲೆ ನನ್ಯ ಪುತ್ತೂರು ತಾಲೂಕು ಇಲ್ಲಿ 16 ವರುಷಗಳ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ.ಇದರ ಮಧ್ಯೆ ಸ.ಕಿ.ಪ್ರಾ.ಶಾ.ಬಿಳಿಯೂರು ಮತ್ತು ಸ.ಕಿ.ಪ್ರಾ.ಶಾ.ಕೊಂರ್ಬಡ್ಕ ಶಾಲೆಗಳಲ್ಲಿ ತಲಾ ಒಂದು ವರುಷಗಳ ಕಾಲ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿರುತ್ತಾರೆ.ತಮ್ಮ ಶೈಕ್ಷಣಿಕ, ಸಾಂಸ್ಕೃತಿಕ,ಪಠ್ಯೇತರ ಕ್ಷೇತ್ರದಲ್ಲಿನ ಅಮೋಘ ಸೇವೆಗಾಗಿ 2003-04ನೇ ಸಾಲಿಗೆ “ಜನಮೆಚ್ಚಿದ ಶಿಕ್ಷಕ” ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸುಮಾರು 25 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅವರ ಬದುಕಿಗೆ ಬೆಳಕಾಗಿದಿರಿ.ಮಗಳು ಅನನ್ಯ ಬಿ,ಅಳಿಯ ಗೋಕುಲ್,ಮಗ ವಿಷ್ಣು ವೆರೇಣ್ಯ.ಬಿ ಇವರೊಂದಿಗೆ ಜೀವನ ಸಾಗಿಸುವ ತಮ್ಮ ನಿವೃತ್ತಿ ಬದುಕು ಸುಖ ನೆಮ್ಮದಿ ಸಮೃದ್ಧಿ ಆರೋಗ್ಯ ದಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಮೋಂತಿ ಮಿಲ್ಪ್ರೆಡ್ ಫುರ್ಚಾಡೊ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬನ್ನೂರು ಪುತ್ತೂರು ತಾಲೂಕು.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ತಾವು 25-10-1982ರಂದು ಸಹಶಿಕ್ಷಕಿಯಾಗಿ ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಕಲ್ಲರಕೋಡಿ ಇಲ್ಲಿ ವೃತ್ತಿ ಸೇವೆಗೆ ಸೇರಿದರು.ಅನಂತರ ಬಂಟ್ವಾಳ ತಾಲೂಕಿನ ಬೊಂಡಾಲ,ಸೂರ್ಯ ಶಾಲೆಯಲ್ಲಿ ಸೇವೆ ಬಳಿಕ ವರ್ಗಾವಣೆ ಪಡೆದು ಪುತ್ತೂರು ತಾಲೂಕು ಪಡ್ನೂರು,ಮುಂಡೂರು,ರಾಗಿಕುಮೇರಿ ಮೊದಲಾದ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಅಂತಿಮವಾಗಿ ಪುತ್ತೂರು ತಾಲೂಕಿನ ಬನ್ನೂರು ಶಾಲೆಯಲ್ಲಿ ವೃತ್ತಿ ಸೇವೆಯಲ್ಲಿ ನಿವೃತ್ತರಾಗುತ್ತಿದ್ದಾರೆ.ಕಳೆದ 14ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು ತಮ್ಮ ಶೈಕ್ಷಣಿಕ, ಸಾಂಸ್ಕೃತಿಕ,ಪಠ್ಯೇತರ ಕ್ಷೇತ್ರದಲ್ಲಿನ ಅಮೋಘ ಸೇವೆಗಾಗಿ 2003-04ನೇ ಸಾಲಿಗೆ “ಜನಮೆಚ್ಚಿದ ಶಿಕ್ಷಕಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸುಮಾರು 38 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಕರುಣಿಸಿ ಅವರ ಜೀವನದ ದಾರಿ ದೀಪವಾಗಿರುವಿರಿ. ಪ್ರಸ್ತುತ
ಪುತ್ತೂರಿನ ಕಲ್ಲೇಗದಲ್ಲಿ ವಾಸಿಸುವ ತಮ್ಮ ನಿವೃತ್ತಿ ಬದುಕು ಸುಖ ನೆಮ್ಮದಿ ಸಮೃದ್ಧಿ ಆರೋಗ್ಯ ದಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಎ ಬಾಲಕೃಷ್ಣ ರೈ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಓಂತ್ರಡ್ಕ
ಕಡಬ ತಾಲೂಕು
ದಿನಾಂಕ 27 .08.1961 ರಂದು ಕಡಬ ತಾಲೂಕು ಕೇನ್ಯ ಗ್ರಾಮದ ಬಿರ್ಕಿ ಎಂಬಲ್ಲಿ ಶ್ರೀ ಭಂಡಾರಿ ರೈ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಮಗನಾಗಿ ಜನಿಸಿರುವಿರಿ. ಬಾಲ್ಯದ ವಿದ್ಯಾಭ್ಯಾಸವನ್ನು ಸ.ಹಿ.ಪ್ರಾ. ಶಾಲೆ ಕೇನ್ಯ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸ.ಪ.ಪೂ ಕಾಲೇಜು ಪಂಜದಲ್ಲಿ ಮುಗಿಸಿ ದೈಹಿಕ ಶಿಕ್ಷಣ ತರಬೇತಿಯನ್ನು 1985- 86 ರಲ್ಲಿ ಮೂಡುಬಿದಿರೆಯ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿರುವಿರಿ. 1989-90 ರಲ್ಲಿ ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಮಾಸ್ಟರ್ ಡಿಗ್ರಿ ಪಡೆದಿರುತ್ತೀರಿ.
ದಿನಾಂಕ 28.07.1994ರಲ್ಲಿ ಮೂಡಬಿದ್ರೆ ತಾಲೂಕಿನ ಸ.ಹಿ.ಪ್ರಾ ಶಾಲೆ ನೆಲ್ಲಿಕಾರು ಇಲ್ಲಿ ಸೇವೆಯನ್ನು ಆರಂಭಿಸಿ ಬಳಿಕ ಸ.ಹಿ.ಪ್ರಾ ಶಾಲೆ ಕೆಯ್ಯೂರು ಇಲ್ಲಿ ಸೇವೆ ಸಲ್ಲಿಸಿ 2006ರಲ್ಲಿ ಓಂತ್ರಡ್ಕ ಶಾಲೆಗೆ ವರ್ಗಾವಣೆಗೊಂಡು ಇಲ್ಲಿ ಈ ತಿಂಗಳು ತಮ್ಮ 27 ವರ್ಷಗಳ ಸಾರ್ಥಕ ಸೇವೆಯಿಂದ ನಿವೃತ್ತರಾಗುತ್ತಿದ್ದೀರಿ. ಸೇವಾದಳ ಹಾಗೂ ಕ್ರೀಡೆಯ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಿ ಧನ್ಯರಾಗಿದ್ದೀರಿ. ತಮಗೆ ತಮ್ಮ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರಾಜೀವಿ ಎಂ
ಸ.ಹಿ.ಪ್ರಾ ಶಾಲೆ ಕುಕ್ಕುಜಡ್ಕ
ಸುಳ್ಯ ತಾಲೂಕು
ಸ.ಹಿ.ಪ್ರಾ ಶಾಲೆ ಕುಕ್ಕುಜಡ್ಕದಲ್ಲಿ 13.09.1985 ರಲ್ಲಿ ಸೇವೆಯನ್ನು ಪ್ರಾರಂಭಿಸಿ ಇದೇ ಶಾಲೆಯಲ್ಲಿ 36 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ತಾವು ತಮ್ಮ ಸೇವಾ ಅವಧಿಯಲ್ಲಿ ಸುಮಾರು 18 ವರ್ಷ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದೀರಿ. ಅಲ್ಲದೆ ಬಾಲ್ ಬ್ಯಾಡ್ಮಿಂಟನ್ ಮತ್ತು ಶಟಲ್ ಬ್ಯಾಡ್ಮಿಂಟನ್ ನಲ್ಲೂ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿರುತ್ತೀರಿ. ಡಿಸ್ಕಸ್ ಮತ್ತು ಗುಂಡು ಎಸೆತ ಸ್ಪರ್ಧೆಗಳಲ್ಲಿ ರಾಜ್ಯದಲ್ಲೂ ಭಾಗವಹಿಸುತ್ತೀರಿ. ಈ ತಿಂಗಳು ಸ್ವಯಂ ನಿವೃತ್ತಿಯನ್ನು ಪಡೆಯುತ್ತಿರುವ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀ ಭೋಜ ದೇವಾಡಿಗ
ಸ.ಹಿ.ಪ್ರಾ ಶಾಲೆ ತಂಡ್ರಕೆರೆ
ಮೂಡುಬಿದಿರೆ ತಾಲೂಕು
ದಿ ಹೊನ್ನಮ್ಮ ದೇವು ದೇವಾಡಿಗರ ಎರಡನೆ ಮಗನಾಗಿ 30.08.1961 ರಲ್ಲಿ ಅಳದಂಗಡಿಯಲ್ಲಿ ಜನಿಸಿದ ತಾವು 12.10.1990 ರಲ್ಲಿ ಕೊಡಗಿನ ವಿರಾಜಪೇಟೆ ತಾಲೂಕಿನ ಕುರ್ಚಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆಗೆ ಸೇರಿದ್ದೀರಿ. ನಾಲ್ಕು ವರ್ಷಗಳ ನಂತರ ವರ್ಗಾವಣೆಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕಲ್ಲಪುತ್ತಿಗೆಯಲ್ಲಿ ಸೇವೆಗೆ ಸೇರ್ಪಡೆಗೊಂಡಿರುವ ತಾವು ಇಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೀರಿ. ಈ ಅವಧಿಯಲ್ಲಿ ಈ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಿಸಿದ್ದೀರಿ. 2001-02 ನೇ ಸಾಲಿನಲ್ಲಿ “ಜನ ಮೆಚ್ಚಿದ ಶಿಕ್ಷಕ” ಪ್ರಶಸ್ತಿಯನ್ನು ಪಡೆದಿರುತ್ತೀರಿ. ಈ ಶಾಲೆಯಲ್ಲಿ ಸುವರ್ಣಮಹೋತ್ಸವ ಆಚರಿಸಿದ್ದೀರಿ. ನಂತರ ದರೆಗುಡ್ಡೆ ಶಾಲೆಗೆ ನಿಯೋಜನೆಗೊಂಡು ಅಲ್ಲಿಂದ ವರ್ಗಾವಣೆಗೊಂಡು ಮೂಡುಮಾರ್ನಾಡು ಶಾಲೆಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೀರಿ. ಸೇವಾದಳದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಾವು ಸೇವಾದಳದಲ್ಲಿ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ಪಡೆದಿರುತ್ತೀರಿ. 2015 ರಿಂದ ಸ.ಕಿ.ಪ್ರಾ ಶಾಲೆ ತಂಡ್ರಕೆರೆಗೆ ವರ್ಗಾವಣೆಗೊಂಡು ಈ ಶಾಲೆಯನ್ನು ಕೂಡ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತೀಕರಿಸಿದ್ದೀರಿ. 2019-20 ರಲ್ಲಿ ಈ ಶಾಲೆಯ ವಜ್ರ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದೀರಿ. ತಮ್ಮ ಕರ್ತವ್ಯದ ಅವಧಿಯಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸುವಲ್ಲಿ ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಊರವರ ಸಹಕಾರದಿಂದ ಯಶಸ್ಸು ಕಂಡ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಸುಜಾತ
ಸ.ಉ.ಪ್ರಾ. ಶಾಲೆ ಅರ್ಕಾನ
ಬಂಟ್ವಾಳ ತಾಲೂಕು
ದ.ಕ.ಜಿ.ಪಂ.ಉ.ಪ್ರಾ ಶಾಲೆ ಅರ್ಕಾನದಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರ್ಪಡೆಗೊಂಡು ನಿಷ್ಠೆ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ವಿದ್ಯಾರ್ಥಿಗಳ ಪೋಷಕರ ಹಾಗೂ ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುತ್ತೀರಿ. ತಮ್ಮ ಸೇವಾವಧಿಯಲ್ಲಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತೀರಿ. ವೃತ್ತಿ ಜೀವನದಿಂದ 31.08.2021 ರಂದು ನಿವೃತ್ತಿ ಹೊಂದುತ್ತಿರುವ ತಮ್ಮ ಮುಂದಿನ ನಿವೃತ್ತಜೀವನ ಉಜ್ವಲವಾಗಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಗಣೇಶ ಕುಮಾರಿ
ಸ.ಹಿ.ಪ್ರಾ ಶಾಲೆ ನೀರ್ಕಜೆ ಬಂಟ್ವಾಳ ತಾಲೂಕು
24.08.1961 ರಂದು ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನದಲ್ಲಿ ಗಣಪತಿ ಭಟ್ ಹಾಗೂ ಹೇಮಾವತಿ ದಂಪತಿಗಳ ಹಿರಿಯ ಪುತ್ರಿಯಾಗಿ ಜನಿಸಿದ ತಾವು ಪ್ರಾಥಮಿಕ ಶಿಕ್ಷಣವನ್ನು ಕಾಂಚನ ಮತ್ತು ಹಳೆನೇರಂಕಿ ಯಲ್ಲಿ ಪಡೆದು ಪ್ರೌಢಶಿಕ್ಷಣವನ್ನು ಶ್ರೀರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದೀರಿ. ಪದವಿಪೂರ್ವ ವಿದ್ಯಾಭ್ಯಾಸವನ್ನು ಜೂನಿಯರ್ ಕಾಲೇಜು ಉಪ್ಪಿನಂಗಡಿಯಲ್ಲಿ ಮುಗಿಸಿ, ಶಿಕ್ಷಕ ಶಿಕ್ಷಣ ತರಬೇತಿಯನ್ನು ಮಂಗಳೂರಿನ ಕಪಿತಾನಿಯೋ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಪೂರ್ಣಗೊಳಿಸಿ 1991 ಜುಲೈ 12 ಒಂದು ಸ.ಹಿ.ಪ್ರಾ ಶಾಲೆ ನೀರ್ಕಜೆಯಲ್ಲಿ ಸಹ ಶಿಕ್ಷಕಿಯಾಗಿ ಸೇರ್ಪಡೆಗೊಂಡು ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದ್ದೀರಿ. ಶಾಲಾ ಮಕ್ಕಳ ಗುಣಮಟ್ಟದ ಕಲಿಕೆಗೆ ತಮ್ಮ ಪ್ರಯತ್ನವನ್ನು ಮಾಡಿರುತ್ತೀರಿ. ಪ್ರತಿಭಾ ಕಾರಂಜಿ, ಸೇವಾದಳ, ಪರಿಸರ ಸ್ವಚ್ಛತೆ ಇನ್ನಿತರ ಹಲವಾರು ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಪ್ರೇರೇಪಿಸಿದ್ದೀರಿ. 31.08.2021 ರಂದು ನಿವೃತ್ತಿ ಹೊಂದುತ್ತಿರುವ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಐರಿನ್ ತೆರೇಸಾ ಮಸ್ಕರೇನ್ಹಸ್
ಸ.ಹಿ.ಪ್ರಾ ಶಾಲೆ ಸುಜೀರು
ಬಂಟ್ವಾಳ ತಾಲೂಕು
05.04.1999 ರಂದು ದ.ಕ ಜಿ.ಪಂ.ಹಿ.ಪ್ರಾ ಶಾಲೆ ದರ್ಬೆತಡ್ಕ ಪುತ್ತೂರು ಇಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರ್ಪಡೆಗೊಂಡು ವೃತ್ತಿಜೀವನವನ್ನು ಆರಂಭಿಸಿ ಮುಂದೆ ವರ್ಗಾವಣೆಗೊಂಡು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸುಜೀರು ಇಲ್ಲಿ ಜೀವನದಲ್ಲಿ ಕರ್ತವ್ಯದಲ್ಲಿ ತೊಡಗಿಕೊಂಡಿದ್ದೀರಿ. ತಮ್ಮ ಸೇವಾವಧಿಯಲ್ಲಿ ದರ್ಬೆತಡ್ಕ ಪುತ್ತೂರು ಶಾಲೆಯಲ್ಲಿ ತೆಂಗಿನ ಹಾಗೂ ಅಡಿಕೆ ಸಸಿ ನೆಟ್ಟು ಪೋಷಣೆ ಮಾಡಿರುತ್ತೀರಿ. ಮಕ್ಕಳಲ್ಲಿ ಶಿಸ್ತು, ಓದುವಿಕೆ ಮತ್ತು ಬರವಣಿಗೆಗೆ ಶ್ರಮಿಸಿರುತ್ತೀರಿ. ಸುಜೀರು ಶಾಲೆಯಲ್ಲಿಯೂ ಪರಿಸರದ ಬಗ್ಗೆ ಕಾಳಜಿ ವಹಿಸಿದ್ದೀರಿ. ಶಾಲೆಯ ಸುಣ್ಣ ಬಣ್ಣದ ವ್ಯವಸ್ಥೆಗಾಗಿ ದಾನಿಗಳ ನೆರವು ದೊರಕಿಸಿಕೊಟ್ಟಿರುತ್ತೀರಿ. ಶಾಲೆಯಲ್ಲಿ ಕಲಿಕೋಪಕರಣದ ವ್ಯವಸ್ಥೆಗಾಗಿ ಶ್ರಮಿಸಿರುತ್ತೀರಿ. ಶಿಕ್ಷಕಿಯಾಗಿ ನಿಷ್ಠೆ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ ತಾವು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದೀರಿ. ಪತಿ ಹಾಗೂ ಮಕ್ಕಳೊಂದಿಗೆ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ರೋಸಿ ಎಂ ಫರ್ನಾಂಡಿಸ್
ಸ.ಕಿ.ಪ್ರಾ ಶಾಲೆ ಆಲಂಪುರಿ ವಗ್ಗ
ಬಂಟ್ವಾಳ ತಾಲೂಕು
ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾಡಾಯ್ ಕೋಡಿ ಎಂಬಲ್ಲಿ ಕೃಷಿ ಕುಟುಂಬದಲ್ಲಿ ಶ್ರೀ ಗ್ರೆಗರಿ ಫೆರ್ನಾಂಡಿಸ್ ಹಾಗೂ ಶ್ರೀಮತಿ ಪೌಲಿನ್ ಫರ್ನಾಂಡಿಸ್ ದಂಪತಿಗಳ ಆರು ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದ ತಾವು ಪ್ರಾಥಮಿಕ ಶಿಕ್ಷಣವನ್ನು ಸಂತ ಮೈಕಲ್ ಹಿರಿಯ ಪ್ರಾಥಮಿಕ ಶಾಲೆ ತೆಂಕಬೆಳ್ಳೂರು, ಪ್ರೌಢಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಬೆಂಜನಪದವು ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸೈಂಟ್ ಜೋಸೆಫ್ ಜೂನಿಯರ್ ಕಾಲೇಜು ಬಜಪೆಯಲ್ಲಿ ಮುಗಿಸಿರುವಿರಿ. ಸೈಂಟ್ ಮೇರಿಸ್ ಕಾಲೇಜು ಶಿರ್ವ ಮಂಚಕಲ್ ಉಡುಪಿ ಜಿಲ್ಲೆಯಲ್ಲಿ ಇಂಟರ್ನ್ಶಿಪ್ ತರಬೇತಿಯನ್ನು ಪಡೆದು 11.11.1998 ರಲ್ಲಿ ದ.ಕ.ಜಿ.ಪಂ.ಕಿ.ಪ್ರಾ ಶಾಲೆ ಆಲಂಪುರಿ ವಗ್ಗದಲ್ಲಿ ಸಹಶಿಕ್ಷಕಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದಿರಿ. ಕಳೆದ ಐದು ವರ್ಷಗಳಿಂದ ದಾನಿಗಳ ಸಹಾಯದಿಂದ ಶಾಲಾ ಸೌಂದರೀಕರಣ, ಉಚಿತ ಪುಸ್ತಕಗಳು, ಸ್ಕೂಲ್ ಬ್ಯಾಗ್, ಸಮವಸ್ತ್ರ ನೀಡಿರುತ್ತೀರಿ. ಹಾಗೂ ಶಾಲೆಗೆ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವಲ್ಲಿ ಶ್ರಮಿಸಿರುತ್ತೀರಿ. ವಿಶೇಷ ಶೌಚಾಲಯದ ಕಾಮಗಾರಿ, ಆವರಣ ಗೋಡೆಯ ಕಾಮಗಾರಿಯನ್ನು ವ್ಯವಸ್ಥಿತವಾಗಿ ಆಗುವಂತೆ ಮೇಲುಸ್ತುವಾರಿ ಮಾಡಿರುತ್ತೀರಿ. ಶಿಕ್ಷಕಿಯಾಗಿ ನಿಷ್ಠೆಯಿಂದ ದುಡಿದ ತಾವು ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದೀರಿ. ಪತಿ ಜಾರ್ಜ್ ಪಿಯುಸ್ ಡೇಸಾ ಹಾಗೂ ಮಕ್ಕಳೊಂದಿಗೆ ತಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಜಾಹ್ನವಿ ದೇವಿ
ಸ.ಹಿ.ಪ್ರಾ.ಶಾಲೆ ಕೊಯ್ಯುಡೆ
ಮಂಗಳೂರು ಉತ್ತರ
22.08.1961 ರಲ್ಲಿ ಜನಿಸಿದ ತಾವು 12.07.1991 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಲ್ಲಬೆಟ್ಟುವಿನಲ್ಲಿ ಸೇವೆಗೆ ಸೇರಿದಿರಿ. ಮುಂದೆ ತಲಪಾಡಿ ಪಟ್ನ, ಉಳ್ಳಾಲ ಕಾಪಿಕಾಡು, ಬೆಂಗ್ರೆ ಕಸಬ, ಉರ್ದು ಶಾಲೆ ಕಂಡತ್ ಪಳ್ಳಿಯಲ್ಲಿ ಸೇವೆ ಸಲ್ಲಿಸಿ ಕೊಯ್ಯುಡೆ ಶಾಲೆಗೆ ವರ್ಗಾವಣೆಗೊಂಡು ಇದೀಗ ಇಲ್ಲಿ ನಿವೃತ್ತರಾಗುತ್ತಿದ್ದೀರಿ. ತಲಪಾಡಿ ಪಟ್ಟಣದಲ್ಲಿ ಸಿ.ಆರ್.ಪಿ ಆಗಿಯೂ ದುಡಿದ ಅನುಭವ ತಮ್ಮದು. ನಿಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಪುಷ್ಪಾವತಿ ಕೆ
ಸ.ಕಿ.ಪ್ರಾ. ಶಾಲೆ ಕಕ್ವ
ಮಂಗಳೂರು ಉತ್ತರ
16.08.1961 ರಲ್ಲಿ ಜನಿಸಿದ ಇವರು 30.10.1982 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದರು. ಉರ್ದು ಶಾಲೆ ಮುಕ್ಕ, ಸುರತ್ಕಲ್, ನರಿಂಗಾನ, ನಾಲ್ಯಪದವು, ಕದ್ರಿ ಮಲ್ಲಿಕಟ್ಟೆ ಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಕಿ.ಪ್ರಾ. ಶಾಲೆ ಕಕ್ವದಲ್ಲಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ನಿಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಈ ತಿಂಗಳು ಪವಿತ್ರ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಎಲ್ಲರಿಗೂ ಶ್ರೀ ದೇವರು ಆಯುರಾರೋಗ್ಯ, ಸಕಲ ಐಶ್ವರ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇವೆ.