ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ನಾಗರೀಕ ಸೇವಾ ನಿಯಮಗಳಿಗೆ ಹೊಸ ತಿದ್ದುಪಡಿ ತರಲಾಗಿದೆ. ಹೊಸ ನೇಮಕ ನಿಯಮಗಳನ್ನು ಪರೀಕ್ಷೆ ವಿಧಾನಕ್ಕೆ ಅಳವಡಿಸಿದ್ದು, ಇದಕ್ಕೆ ಅಧಿಸೂಚನೆ ಪ್ರಕಟಿಸಿದೆ. ವಿವಿಧ ಪದವೀಧರರು ಅರ್ಜಿ ಹಾಕಬಹುದಾದ ಗ್ರೂಪ್‌ ಬಿ, ಗ್ರೂಪ್‌ ಎ ಹುದ್ದೆಗಳ ಪರೀಕ್ಷೆ ಸಂಬಂಧಿತ ಹೊಸ ನಿಯಮಗಳು ಇದಾಗಿವೆ.

ಈವರೆಗೆ ರಾಜ್ಯ ಸರ್ಕಾರದ ಗ್ರೂಪ್‌ ಎ ಹಾಗೂ ಗ್ರೂಪ್‌ ಬಿ ಹುದ್ದೆಗಳ ಪೈಕಿ ಕೆಲವು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಜತೆಗೆ ಸಂದರ್ಶನ ಇರುತ್ತಿತ್ತು. ಇನ್ನು ಕೆಲವು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾತ್ರ ಇರುತ್ತಿತ್ತು. ಅದರಲ್ಲೂ ಬಹುಆಯ್ಕೆ ಉತ್ತರಗಳು ಸಹ ಇರುತ್ತಿದ್ದವು. ಆದರೆ ಈ ಎಲ್ಲ ಮಾದರಿ ಪರೀಕ್ಷೆಗಳಲ್ಲಿ ಈಗ ಮಹತ್ತರವಾದ ಬದಲಾವಣೆ ಆಗಿದ್ದು, ಸದರಿ ಹೊಸ ಪರೀಕ್ಷೆ ಮಾದರಿಯ ಆದೇಶಗಳು ಕರ್ನಾಟಕ ರಾಜ್ಯಪತ್ರದ ಮುಖೇನ ಕೆಳಗಿನಂತೆ ಪ್ರಕಟವಾಗಿವೆ.


ಇನ್ನುಮುಂದೆ ಕರ್ನಾಟಕ ರಾಜ್ಯ ಸರ್ಕಾರಿ ಗ್ರೂಪ್‌ ಎ, ಬಿ ಹುದ್ದೆಗಳಿಗೆ ಈ ಕೆಳಗಿನ ಪರೀಕ್ಷೆ ಮಾದರಿ ಅನ್ವಯವಾಗಲಿದೆ.

(ಎ) ಸಂದರ್ಶನವಿಲ್ಲದ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯು ತಲಾ 300 ಅಂಕಗಳ 2 ಲಿಖಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು, ವಸ್ತುನಿಷ್ಠ ಬಹು ಆಯ್ಕೆ ಸ್ವರೂಪದಲ್ಲಿ ಇರಲಿದೆ. ಪ್ರತಿಯೊಂದು ಪ್ರಶ್ನೆಯು ಋಣಾತ್ಮಕ ಅಂಕವನ್ನು ಒಳಗೊಂಡಿರಲಿದ್ದು ಮತ್ತು ಅಂಥ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಕಡಿತಗೊಳಿಸತಕ್ಕದ್ದು.
(ಬಿ) ಸಂದರ್ಶನವಿರುವ ಗ್ರೂಪ್ ಎ ಹುದ್ದೆಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯು ತಲಾ 300 ಅಂಕಗಳ 2 ಲಿಖಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು, ‘ವಿವರಣಾತ್ಮಕ ಸ್ವರೂಪ’ದಲ್ಲಿರಲಿದೆ. ಇದರಲ್ಲಿ ಬಹುಆಯ್ಕೆ ಪ್ರಶ್ನೆಗಳು ಇರುವುದಿಲ್ಲ. ಇದನ್ನು ಕೈಬಿಡಲಾಗಿದೆ.
ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ 2 ಪತ್ರಿಕೆಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮವು ಈ ಕೆಳಕಂಡಂತೆ ಇರಲಿದೆ.
ಪತ್ರಿಕೆ-I ಸಾಮಾನ್ಯ ಪತ್ರಿಕೆ: ಪುಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ, ಕರ್ನಾಟಕ ಇತಿಹಾಸ ಮತ್ತು ಭೂಗೋಳಶಾಸ್ತ್ರ, ಭಾರತದ ಇತಿಹಾಸ ಮತ್ತು ಭೂಗೋಳಶಾಸ್ತ್ರ, ಸಮಾಜ ವಿಜ್ಞಾನ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಭಾರತದ ಸಂವಿಧಾನ, ಸಾರ್ವಜನಿಕ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಭಾರತದ ಅರ್ಥವ್ಯವಸ್ಥೆ, ಅಂತರಾಷ್ಟ್ರೀಯ ಸಂಬಂಧಗಳು, ಪರಿಸರ ವಿಜ್ಞಾನ, ತಾರ್ಕಿಕ ಆಲೋಚನೆ, ದೈನಂದಿನ ಗ್ರಹಿಕೆಯ ವಿಷಯಗಳನ್ನು ಮತ್ತು ನಿಗದಿಪಡಿಸಲಾದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವ್ಯಕ್ತಿಯಿಂದ ನಿರೀಕ್ಷಿಸಬಹುದಾದ ಪ್ರಾಯೋಗಿಕ ಜ್ಞಾನವನ್ನು ಒಳಗೊಂಡಿರತಕ್ಕದ್ದು.
ಪತ್ರಿಕೆ-II. ನಿರ್ದಿಷ್ಟ ಪತ್ರಿಕೆ: ಈ ಪತ್ರಿಕೆಯ ಪಠ್ಯಕ್ರಮವನ್ನು ಆಯ್ಕೆ ಪ್ರಾಧಿಕಾರವು ಯಾವ ಹುದ್ದೆಗೆ ಆಯ್ಕೆ ಮಾಡಲಾಗುತ್ತಿದೆಯೋ ಆ ಹುದ್ದೆಯ ಸ್ವರೂಪವನ್ನ ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಸಂಬಂಧಪಟ್ಟ ಕ್ಷೇತ್ರ ಇಲಾಖೆ ಅಥವಾ ನೇಮಕಾತಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸತಕ್ಕದು.
(2) ಚಾಲ್ತಿಯಲ್ಲಿರುವ ಖಂಡ (ಬಿ) ಮತ್ತು (ಸಿ) ಗಳನ್ನು ಕ್ರಮವಾಗಿ (ಸಿ) ಮತ್ತು (ಡಿ) ಎಂದು ಮರುಸಂಖ್ಯೀಕರಣಗೊಳಿಸಿದೆ.


ಈ ನಿಯಮಗಳ ತಿದ್ದುಪಡಿಗೆ ಕ್ರಮ ತೆಗೆದುಕೊಂಡದ್ದು ಯಾವಾಗ?

ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಇದನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ: 20.09.2022 ರ ಅಧಿಸೂಚನೆ ಸಂಖ್ಯೆ ಸಿಆಸುಇ 66 ಸೇವನೆ 2022 ರಲ್ಲಿ ಮೇಲಿನ ನಿಯಮಗಳನ್ನು ಪಾಲಿಸಿ ಕರಡು ಆದೇಶ ಹೊರಡಿಸಿ, ಸಂಬಂಧಿಸಿದವರಿಂದ ಆಕ್ಷೇಪಣೆಯನ್ನು ಸ್ವೀಕರಿಸಿ ಪರಿಶೀಲಿಸಲಾಗಿತ್ತು. ಇದೀಗ ಅಂತಿಮವಾಗಿ ಈ ಕುರಿತು ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ.

WhatsApp Group Join Now
Telegram Group Join Now
Sharing Is Caring:

Leave a Comment