ಸೇವಾನಿರತ ಪದವೀಧರ ಶಿಕ್ಷಕರಿಗೆ ಭಡ್ತಿ ಬೇಡ,ವಿಲೀನ ಸಾಕು ? ಅನಿವಾರ್ಯ ಆಗಿದೆ ಮಾಡು ಇಲ್ಲವೇ ಮಡಿ ಹೋರಾಟ

GPT ಶಿಕ್ಷಕರ ಅಂತಿಮ ನೇಮಕಾತಿ ನಿಯಮವನ್ನು ಸಂಪೂರ್ಣ ತಿರಸ್ಕರಿಸಿ ಪತ್ರಿಕಾ ಹೇಳಿಕೆ ಪ್ರಕಟಿಸಿದ ಶಿಕ್ಷಕರ ಸಂಘ

ಬಡ್ತಿ ಬೇಡ_ವಿಲೀನ ಮಾಡಿ ಸಾಕು

ಶಿಕ್ಷಕ ಮಿತ್ರರೇ,

ಇಲಾಖೆ GPT ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ C&R ತಿದ್ದುಪಡಿ ಮಾಡಿ ಇಂಜಿನಿಯರಿಂಗ್ ಪದವಿ ಪಡೆದವರನ್ನೂ ಶಿಕ್ಷಕರನ್ನಾಗಿಸ ಹೊರಟಿರುವುದು ಉತ್ತಮ ಬೆಳೆವಣಿಗೆಯಾದರೂ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರ(ಇಲಾಖೆ ತಿಳಿಸಿರುವ PST ವೃಂದ) ವಿಲೀನದ ಕುರಿತು ಯಾವುದೇ ತಿದ್ದುಪಡಿ ಮಾಡದೇ, PST ಯಿಂದ G PT ವೃಂದಕ್ಕೆ ಬಡ್ತಿಯನ್ನು 25% ನಿಂದ 33% ಏರಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನಾಲ್ಕು ವರ್ಷಗಳ ನಿರಂತರ ಪ್ರಯತ್ನಗಳಿಗೆ ಮತ್ತೊಮ್ಮೆ ತಣ್ಣೀರು ಎರಚಿದೆ.

  ಹಾಗಾದರೆ PST ಶಿಕ್ಷಕ ವೃಂದದಿಂದ GPT ಶಿಕ್ಷಕರ ವೃಂದಕ್ಕೆ ವಿಲೀನ ಮಾಡದೇ,ಕೇವಲ ಮುಂಬಡ್ತಿ [PROMOTION] 33% ಕೊಟ್ಟರೆ ಆಗುವ ನಷ್ಟವೇನು ?

1.NO Service Seniority
2.NO TimeBound (Financial Loss)

ಇದರೊಂದಿಗೆ

⭕ PST ಶಿಕ್ಷಕರು, 1-7th ತರಗತಿಗೆ ಬೋಧನೆ ಮಾಡಲು ನೇಮಕಾತಿ ಆಗಿರುವುದನ್ನು ಮರೆತು, ಖಾಯಂ ಆಗಿ 1-5th ಶಿಕ್ಷಕರಾಗಬೇಕಾಗುತ್ತದೆ.

⭕ PST ಶಿಕ್ಷಕರು 1-7th ಶಾಲೆಗೆ ಮುಖ್ಯಶಿಕ್ಷಕರಾಗುವ ಅವಕಾಶ ಖಾಯಂ ಆಗಿ ಕಳೆದುಕೊಳ್ಳಬೇಕಾಗುತ್ತದೆ.

⭕ PST ಶಿಕ್ಷಕರು BEd ಪದವಿ ಹೊಂದಿದ್ದರೂ, ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದುವ ಅವಕಾಶ ಖಾಯಂ ಆಗಿ ಮರೆತುಬಿಡಬೇಕಾಗುತ್ತದೆ.

⭕ PST ಶಿಕ್ಷಕರು GPT ಶಿಕ್ಷಕರಾಗಿ ಬಡ್ತಿ ಹೊಂದಲು, ಮೊದಲಿಗೆ B.A/B.Sc ಪದವಿ ಪಡೆದುಕೊಂಡು, ನಂತರ ‘GPT ವೃಂದದ ಬಡ್ತಿ ಪರೀಕ್ಷೆ’ ತೆಗೆದುಕೊಂಡು ಬಡ್ತಿ ಪರೀಕ್ಷೆ ಪಾಸ್ ಆಗಬೇಕಿರುತ್ತದೆ.

⭕ ಪದವಿ ಹೊಂದಿದ PST ಶಿಕ್ಷಕ, GPT ವೃಂದಕ್ಕೆ ‘ಬಡ್ತಿ ಪರೀಕ್ಷೆ’ ಮೂಲಕ ಬಡ್ತಿ ಪಡೆದು ಹೋದರೆ, GPT ವೃಂದದಲ್ಲಿ, ಬಡ್ತಿ ಹೊಂದಿದ PST ಶಿಕ್ಷಕರು ‘ಜೇಷ್ಠತೆ’ ಯಲ್ಲಿ ಕಿರಿಯರು ಆಗುತ್ತಾರೆ.
ಅಂದರೆ ಕಳೆದ ವರ್ಷ ನೇರ ನೇಮಕಾತಿಯಾದ GPT ಶಿಕ್ಷಕರಿಗೆ 10/15/20 ವರ್ಷ ಸೇವೆ ಸಲ್ಲಿಸಿರುವ PST ಶಿಕ್ಷಕರು ಸೇವೆಯಲ್ಲಿ JUNIOR ಆಗುತ್ತೇವೆ…!

⭕ ಸೇವೆಯಲ್ಲಿ ಅತ್ಯಂತ ಕಿರಿಯರಾದ GPT ಶಿಕ್ಷಕರ (GPT ಮುಖ್ಯಶಿಕ್ಷಕರು) ಕೈಕೆಳಗೆ, 10/15/20 ವರ್ಷಗಳು ಸೇವೆ ಸಲ್ಲಿಸಿದ ಹಿರಿಯ PST ಶಿಕ್ಷಕರು ಸಾಮಾನ್ಯ ಕಿರಿಯ ಶಿಕ್ಷಕರಾಗಿ ಸೇವೆ ಸಲ್ಲಿಸಬೇಕಾಗುತ್ತದೆ.

⭕ ಒಮ್ಮೆ ಬಡ್ತಿ ಪಡೆದ ಕಾರಣ PST ಶಿಕ್ಷಕರು, ಇನ್ನುಮುಂದೆ ಯಾವುದೇ TIME BOUND ಪಡೆಯಲು ಅರ್ಹರಿರುವುದಿಲ್ಲ.. [FINANCIAL LOSS ಆಗುತ್ತದೆ].

⭕ ನೇಮಕಾತಿ ಆಗಿರುವುದು 1-7th ಗೆ, ಆದರೂ, 1-5th ಆಗಿರುವ ‘ಹಿಂಬಡ್ತಿ’ ಯನ್ನು ಕಾನೂನುಬದ್ಧವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.

⭕ ಪದವಿ ಪಡೆದ PST ಶಿಕ್ಷಕರು ‘GPT ಬಡ್ತಿ ಪರೀಕ್ಷೆ’ ಬರೆದು, GPT ವೃಂದಕ್ಕೆ ಹೋದಲ್ಲಿ, ಅಲ್ಲಿಂದ ಪ್ರೌಢಶಾಲೆಗೆ ಹೋಗಲು, MASTER DEGREE ಮಾಡಿಕೊಳ್ಳುವ ಜೊತೆಗೆ ಕನಿಷ್ಠ 5 ವರ್ಷ GPT ವೃಂದದಲ್ಲಿ ಕೆಲಸ ಮಾಡಬೇಕು.
ನಂತರ, ಒಟ್ಟು 15/20/25 ವರ್ಷ ಸೇವಾವಧಿ ಆಗಿರುವ PST ಶಿಕ್ಷಕರು, ಈಗ ತಾನೆ GPT ವೃಂದಕ್ಕೆ ನೇರ ನೇಮಕಾತಿ ಆಗಿ 5 ವರ್ಷ ಆಗಿರುವ YOUNG FRESHER GPT ಶಿಕ್ಷಕರ ಜೊತೆಗೆ, ಪ್ರೌಢಶಾಲಾ ಶಿಕ್ಷಕರ ಬಡ್ತಿ ಪರೀಕ್ಷೆ ತೆಗೆದುಕೊಳ್ಳಬೇಕು .

ಹಾಗಾಗಿ, ಪದವಿ ಹೊಂದಿದ PST ಶಿಕ್ಷಕರನ್ನು, GPT ವೃಂದಕ್ಕೆ ವಿಲೀನ ಮಾಡಿದರೆ ಮಾತ್ರ ನಾವು ಸೇವಾ ಜೇಷ್ಠತೆ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಇಲ್ಲವಾದರೆ, PST ಶಿಕ್ಷಕರ ಭವಿಷ್ಯ ಗೋವಿಂದ.. ಗೋವಿಂದ.

“PST ಶಿಕ್ಷಕರಿಗೆ ಬಡ್ತಿ ಬೇಡ, GPT ವೃಂದಕ್ಕೆ ವಿಲೀನ ಮಾತ್ರ ಬೇಕು”
Say ‘NO’ To ‘PROMOTION’,
Say ‘YES’ To ‘MERGE’

Sharing Is Caring:

1 thought on “ಸೇವಾನಿರತ ಪದವೀಧರ ಶಿಕ್ಷಕರಿಗೆ ಭಡ್ತಿ ಬೇಡ,ವಿಲೀನ ಸಾಕು ? ಅನಿವಾರ್ಯ ಆಗಿದೆ ಮಾಡು ಇಲ್ಲವೇ ಮಡಿ ಹೋರಾಟ”

  1. PST ಶಿಕ್ಷಕರಿಗೆ ಬಡ್ತಿ ಬೇಡ,”GPT ವೃಂದಕ್ಕೆ ವಿಲೀನ ಮಾತ್ರ ಬೇಕು”

    Reply

Leave a Comment