ರಾಜ್ಯಮಟ್ಟದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಕೊನೆಯ ದಿನ [ಒಂದೇ ದಿನ ]ವೇತನ ಪಾವತಿಸುವ ಬಗ್ಗೆ ಸರ್ಕಾರದಿಂದ ಆದೇಶ

WhatsApp Group Join Now
Telegram Group Join Now

ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 80 (ಬಿ )ರಲ್ಲಿನ ಸೂಚನೆಗಳಂತೆ ಮಾರ್ಚ್ ತಿಂಗಳನ್ನು ಹೊರತುಪಡಿಸಿ ಉಳಿದ ತಿಂಗಳುಗಳ ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಆಯಾ ತಿಂಗಳ ಕೊನೆಯ ಕೆಲಸದ ದಿನಗಳಂದು, ಮಾರ್ಚ್ ತಿಂಗಳ ವೇತನ ಮತ್ತು ಭತ್ಯೆಯನ್ನು ಮುಂದಿನ ಏಪ್ರಿಲ್ ತಿಂಗಳ ಕೆಲಸದ ದಿನಗಳಂದು ವಿತರಿಸಬೇಕಾಗಿರುತ್ತದೆ. ಕೆಲವೊಂದು ಡಿಡಿಓ ರವರು, ಕೆಲವೊಂದು ಕಾರಣಗಳಿಂದಾಗಿ ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಸರಕಾರಿ ನೌಕರರು ನಿಗದಿತ ದಿನಾಂಕದಂದು ವೇತನ ಮತ್ತು ಭತ್ಯೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಸರಕಾರದ ಅನುದಾನ ನಿರ್ವಹಣೆಯಲ್ಲಿಯೂ ವ್ಯತ್ಯಯ ಉಂಟಾಗುತ್ತದೆ.
ಹೆಚ್ಚಿನ ಬಜೆಟ್ ನಿಯಂತ್ರಣ ಮತ್ತು ಲೆಕ್ಕ ಸಮನ್ವಯದ ದೃಷ್ಟಿಯಿಂದ ಹಾಗೂ ಬಿಲ್ಲುಗಳ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಪ್ರಸ್ತುತ ಡಿಡಿಓ ಅವರು ಅವರ ವ್ಯಾಪ್ತಿಯಲ್ಲಿನ ಸರಕಾರಿ ಅಧಿಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಸೆಳೆದು ವಿತರಿಸುವ ಬದಲು ಸಂಬಂಧಿಸಿದ ನಿಯಂತ್ರಣ ಅಧಿಕಾರಿಗಳು( ಸಿ ಓ) ತಮ್ಮ ವ್ಯಾಪ್ತಿಯಲ್ಲಿನ ಡಿಡಿಓಗಳ ಹಾಗೂ ಅವರ ವ್ಯಾಪ್ತಿಯಲ್ಲಿನ ಅಧಿಕಾರಿಗಳ/ ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳನ್ನು ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರವು ಉದ್ದೇಶಿಸಿದೆ. ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು ಖಜಾನೆ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಈ ವ್ಯವಸ್ಥೆಯನ್ನು ಎಲ್ಲಾ ಇಲಾಖೆಗಳಿಗೆ ವಿಸ್ತರಿಸುವ ಸಲುವಾಗಿ ಸರಕಾರವು ಆದೇಶಿಸಿದೆ. ಸೆಪ್ಟೆಂಬರ್ ತಿಂಗಳ ವೇತನದಿಂದ ಪ್ರಾಯೋಗಿಕವಾಗಿ ಜಾರಿಗೆ ತರಲು ಸರಕಾರ ಆದೇಶಿಸಿದೆ.

ಸರಕಾರದ ಆದೇಶ👇

WhatsApp Group Join Now
Telegram Group Join Now
Sharing Is Caring:

Leave a Comment