ರಾಜ್ಯಾದ್ಯಂತ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ತಂದೆ ಇಲ್ಲದ ಮಕ್ಕಳಿಗೆ ರೂಪಾಯಿ 24,000/- ಆರ್ಥಿಕ ಸಹಾಯ ಧನ ನೀಡಲಾಗುತ್ತಿದೆ ಎಂಬ ಮಾಹಿತಿಯು ಹರಿದಾಡುತ್ತಿದ್ದು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಸೃಷ್ಟಿಕರಣ ನೀಡಲಾಗಿದೆ.
- ಪ್ರಾಯೋಜಕತ್ವ ಕಾರ್ಯಕ್ರಮ ಯೋಜನೆಯು ರಾಜಾದ್ಯಂತ 18 ವರ್ಷದೊಳಗಿನ ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣವನ್ನು ಮುಂದುವರಿಸುವಂತೆ ಉತ್ತೇಜಿಸಲು ಅನುಷ್ಠಾನಗೊಂಡ ಕಾರ್ಯಕ್ರಮವಾಗಿರುತ್ತದೆ.
- ಸದರಿ ಯೋಜನೆ ಅಡಿ ಮಾಸಿಕ ರೂ.4000/- ದಂತೆ ಒಂದು ವರ್ಷಗಳ ಅಥವಾ 18 ವರ್ಷ ತುಂಬುವವರೆಗೆ ಶಿಕ್ಷಣ ಮತ್ತು ಪೌಷ್ಟಿಕ ಆಹಾರಕ್ಕಾಗಿ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ.
ಯೋಜನೆಯಡಿ ಒಳಪಡುವ ಫಲಾನುಭವಿಗಳು
- ತಂದೆ ಇಲ್ಲದ ಮಕ್ಕಳು , ಅನಾಥ ಮಕ್ಕಳು, ತಾಯಿ ವಿಚ್ಛೇದಿತ ಅಥವಾ ಕುಟುಂಬ ಪರಿತ್ಯಕ್ತಳಾಗಿದ್ದರೆ
- ಪೋಷಕರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ
- ಪೋಷಕರು ಮಕ್ಕಳನ್ನು ನೋಡಿಕೊಳ್ಳಲು ದೈಹಿಕವಾಗಿ ಅಸಮರ್ಥರಾಗಿದ್ದರೆ
- ಬಾಲ ನ್ಯಾಯ ಕಾಯ್ದೆ ಮಕ್ಕಳ ಪಾಲನೆ ಹಾಗೂ ರಕ್ಷಣೆ ಅಗತ್ಯವಿರುವ ಮಕ್ಕಳು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ/ಹಾಜರುಪಡಿಸಿ ಗುರುತಿಸಿಕೊಂಡಿರುವ ಮಕ್ಕಳು ಅಂದರೆ ಮನೆ ಇಲ್ಲದೆ ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲ ಕಾರ್ಮಿಕರು, ಬಾಲ್ಯ ವಿವಾಹ ಸಂತ್ರಸ್ತ ಮಕ್ಕಳು, ಕಳ್ಳ ಸಾಗಣಿಕೆಗೆ ಒಳಗಾದ ಮಕ್ಕಳು, ಕಾಣೆಯಾದ ಅಥವಾ ಓಡಿ ಹೋದ ಮಕ್ಕಳು, ಬಾಲ ಭಿಕ್ಷಕರು ಅಥವಾ ಬೀದಿ ಬದಿಯ ಮಕ್ಕಳು , ದೈಹಿಕ ಅಂಗವಿಕಲತೆಯುಳ್ಳ ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು
ಅಗತ್ಯ ದಾಖಲೆಗಳು
- ಮನವಿ ಅರ್ಜಿ
- ಮರಣ ಪ್ರಮಾಣ ಪತ್ರ
- ವಿಚ್ಛೇದಿತರಾಗಿದ್ದರೆ ನ್ಯಾಯಾಲಯದ ಆದೇಶ
- ಕುಟುಂಬದಿಂದ ಪರಿತ್ಯಕ್ತ ಳಾಗಿದ್ದರೆ ಪರಿತ್ಯಕ್ತ ಪ್ರಮಾಣ ಪತ್ರ
- ಮರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ದೈಹಿಕ ಅಸಮರ್ಧರಾಗಿದ್ದರೆ ವೈದ್ಯಕೀಯ ಪ್ರಮಾಣ ಪತ್ರ
- ನೈಸರ್ಗಿಕ ವಿಕೋಪಕ್ಕೆ ಒಳಗಾಗಿದ್ದರೆ ತತ್ಸಮ ಪ್ರಾಧಿಕಾರದಿಂದ ದೃಢೀಕರಣ ಪತ್ರ
- ಆದಾಯ ಅಥವಾ ಜಾತಿ ಪ್ರಮಾಣ ಪತ್ರ. ಸದರಿ ಫಲಾನುಭವಿಯ ಆದಾಯವು ಗ್ರಾಮೀಣ ಪ್ರದೇಶದಲ್ಲಿ ಇದ್ದರೆ 72000/- ಹಾಗೂ ನಗರ ಪ್ರದೇಶದಲ್ಲಿ ಇದ್ದರೆ ರೂ.96000/- ಕ್ಕೆ ನಿಗದಿಪಡಿಸಲಾಗಿದೆ.
- ಶಾಲಾ ವ್ಯಾಸಂಗ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ
- ಮಗುವಿನ ಭಾವಚಿತ್ರ
- ರೇಷನ್ ಕಾರ್ಡ್ ಪ್ರತಿ
- ಮಗು ಹಾಗೂ ಪೋಷಕರ ಆಧಾರ್ ಕಾರ್ಡ್ ಪ್ರತಿ
- ಮಗುವಿನ ಬ್ಯಾಂಕ್ ಖಾತೆ ಪ್ರತಿ ( NPCI ಮ್ಯಾಪಿಂಗ್ ಮಾಡಿಸಿಕೊಳ್ಳುವುದು)
ಆಯ್ಕೆ ವಿಧಾನ
- ಅರ್ಜಿ ಸ್ವೀಕೃತವಾದ ನಂತರದಲ್ಲಿ ಘಟಕದಿಂದ ಗೃಹ ತನಿಖೆ ನಡೆಸಿ ಸದರಿ ವರದಿಯ ಮೇರೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ತ್ರೈಮಾಸಿಕಗೊಮ್ಮೆ ಅನುಮೋದನೆ ಪಡೆದು ಆರ್ಥಿಕ ಸಹಾಯಧನ ಡಿಬಿಟಿ ಮೂಲಕ ವಿತರಿಸಲಾಗುವುದು.
- ಈಗಾಗಲೇ ಸದರಿಯ ಯೋಜನೆಯಡಿ ಸೌಲಭ್ಯ ಪಡೆದಿದ್ದಲ್ಲಿ ಪುನಹ ವಿತರಿಸಲಾಗುವುದಿಲ್ಲ.