ಹೆಚ್ಚುವರಿ ಎಂದು ಗುರುತಿಸಿರುವ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ಆ ಹುದ್ದೆ ಮತ್ತು ಆ ವಿಷಯದ ಎಲ್ಲಾ ಶಿಕ್ಷಕರಿಗೂ ವಿನಾಯಿತಿ ಕ್ಲೇಮ್ ಮಾಡಲು ಅವಕಾಶ ಕಲ್ಪಿಸಿದೆ. ಅಂತಹ ಶಿಕ್ಷಕರು ವಿನಾಯತಿಗೆ ಅರ್ಹರಿದ್ದಲ್ಲಿ ನಿಯಮಾನುಸಾರ ವಿನಾಯಿತಿ ಕ್ಲೇಮ್ ಮಾಡಲು ತಂತ್ರಾಂಶದಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಿದೆ. ಒಮ್ಮೆ ತಾತ್ಕಾಲಿಕ ಪಟ್ಟಿ ಬಿಡುಗಡೆಯಾದ ಕೊನೆಯ ದಿನಾಂಕದ ನಂತರ ಯಾವುದೇ ಶಿಕ್ಷಕರ ಹೆಸರು ಪಟ್ಟಿಯಲ್ಲಿ ಬಂದಲ್ಲಿ ಅಂತವರು ವಿನಾಯಿತಿ ಕೋರಲು ಅವಕಾಶವಿರುವುದಿಲ್ಲ. ಆದ್ದರಿಂದ ಪ್ರಾರಂಭದಲ್ಲಿಯೇ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ವಿನಾಯಿತಿ ಕ್ಲೇಮ್ ಮಾಡಲು ಕ್ರಮವಹಿಸತಕ್ಕದ್ದು.
ಹೆಚ್ಚುವರಿ ಶಿಕ್ಷಕರು ಇದೇ ವರ್ಷ ಕೋರಿಕೆ ವರ್ಗಾವಣೆ ಪಡೆಯಲು ಇಚ್ಚಿಸಿದ್ದಲ್ಲಿ ಅಂತಹವರು ವಿನಾಯತಿಗೆ ಸಲ್ಲಿಸಿದ ದಾಖಲೆಗಳನ್ನೇ ಕೋರಿಕೆ ವರ್ಗಾವಣೆಗೆ ಆದ್ಯತೆಗೆ ಪರಿಗಣಿಸಲಾಗುವುದು.
ಯಾವುದಾದರೂ ಶಾಲೆಯಲ್ಲಿ ಯಾವುದೇ ವೃಂದದ ಒಂದೇ ಹುದ್ದೆ ಇದ್ದು ಅಥವಾ ಸದರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹುದ್ದೆ ಸಹಿತ ಹೆಚ್ಚುವರಿಯಾದಲ್ಲಿ (ಹುದ್ದೆ ರದ್ದಾದ ಕಾರಣ) ಸದರಿ ಶಿಕ್ಷಕರು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ ಅಧಿನಿಯಮ -2020 ನಿಯಮ -10 ರಲ್ಲಿನ ವಿನಾಯತಿ ಕೋರಲು ಅವಕಾಶವಿರುವುದಿಲ್ಲ. ಒಂದು ವೇಳೆ ವಿನಾಯಿತಿ ಕೋರಿದಲ್ಲಿ ವಿನಾಯಿತಿಯನ್ನು ತಿರಸ್ಕರಿಸುವ ಹಕ್ಕು ಹೊಂದಿರುತ್ತಾರೆ. ಪ್ರಯುಕ್ತ ಅಂತಹವರನ್ನು ವಿನಾಯಿತಿ ನೀಡದೆ ಹೆಚ್ಚುವರಿ ಸಮರ್ಪಕ ಮರು ಹೊಂದಾಣಿಕೆ ವರ್ಗಾವಣೆಗೆ ಪರಿಗಣಿಸತಕ್ಕದ್ದು. ( ಉದಾಹರಣೆಗೆ ಶೂನ್ಯ ದಾಖಲಾತಿ ಇರುವ ಶಾಲೆಯಲ್ಲಿ ಕರ್ತವ್ಯ ನಿರತ ಶಿಕ್ಷಕರು ಹೆಚ್ಚುವರಿ ಎಂದು ಗುರುತಿಸಿರುವ ವಿಷಯ ಶಿಕ್ಷಕರು, ಮುಖ್ಯ ಶಿಕ್ಷಕರು ಹಿರಿಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ಪ್ರಾಥಮಿಕ ಮತ್ತು ಪ್ರೌಢ ವಿಶೇಷ ಶಿಕ್ಷಕರು ಅಥವಾ ಆ ಶಾಲೆಗೆ ಹುದ್ದೆ ಮಂಜೂರಾತಿ ಆಗಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಇತ್ಯಾದಿ)