ಹೆಚ್ಚುವರಿ ಕುರಿತ ಮಾಹಿತಿ ಇಲ್ಲಿದೆ

ಹೆಚ್ಚುವರಿ ಕುರಿತು ಸಮಗ್ರ ಮಾಹಿತಿ

WhatsApp Group Join Now
Telegram Group Join Now

ಎಲ್ಲಾ ಮುಖ್ಯ ಶಿಕ್ಷಕರ ಗಮನಕ್ಕೆ
ಇಂದು ನಡೆದ ಮಾನ್ಯ ಆಯುಕ್ತರ ಸಭೆಯಲ್ಲಿ ಈ ಕೆಳಕಂಡ ಅಂಶಗಳನ್ನು ತಿಳಿಸಿರುತ್ತಾರೆ.

1 ) ಇಂದು ಪ್ರಕಟಿಸಲಾದ ಹೆಚ್ಚುವರಿ ಶಿಕ್ಷಕರ ಪಟ್ಟಿಯು ತಾತ್ಕಾಲಿಕ ಕರಡು ಪ್ರತಿಯಾಗಿರುತ್ತದೆ. ಇದೇ ಅಂತಿಮ ಪಟ್ಟಿ ಆಗಿರುವುದಿಲ್ಲ.

2) ಇದು ಕೇವಲ ವಿನಾಯಿತಿ ಕೋರಲು ಸಿದ್ಧಪಡಿಸಿಟ್ಟುಕೊಳ್ಳಬೇಕಾದ ದಾಖಲೆಗಳನ್ನು ದಿನಾಂಕ 9 ಡಿಸೆಂಬರ್ 2022 ರ ನಂತರ ಸಮಕ್ಷಮ ಪ್ರಾಧಿಕಾರಗಳಿಂದ ಸಹಿ ಮಾಡಿಸಿದ ದಾಖಲೆಗಳನ್ನು ಪಡೆದು ದಿನಾಂಕ 17 ಡಿಸೆಂಬರ್ 22ರೊಳಗೆ online (EEDS) ನಲ್ಲಿ ಅಪ್ಲೋಡ್ ಮಾಡುವುದು. ವಿನಾಯಿತಿಗಳ ಪಟ್ಟಿಯನ್ನು ಈಗಾಗಲೇ ಸುತ್ತೋಲೆಯಲ್ಲಿ ನೀಡಲಾಗಿದೆ.

3) ಜಿಪಿಟಿ ಭಾಷೆ ಆಂಗ್ಲ ಅಥವಾ ಕನ್ನಡ ಇವುಗಳಲ್ಲಿ ಒಬ್ಬರೇ ಶಿಕ್ಷಕರಿದ್ದಲ್ಲಿ ಅವರನ್ನು ಹೆಚ್ಚುವರಿ ಪಟ್ಟಿಗೆ ಸೇರಿಸದೆ ಅದೇ ಸ್ಥಳದಲ್ಲಿ
ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವ ಸಂಭವ ಇರುತ್ತದೆ. ಅಂತಿಮ ಹೆಚ್ಚುವರಿ ಪಟ್ಟಿ ಬಿಡುಗಡೆ ಮಾಡುವ ತನಕ ಯಾವುದೇ ಶಿಕ್ಷಕರು ಆತಂಕ ಪಡುವ ಅಗತ್ಯವಿರುವುದಿಲ್ಲ.

4) ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆದ ನಂತರವೇ ಸಾಮಾನ್ಯ ವರ್ಗಾವಣೆ ನಡೆಯುವುದರಿಂದ ಹೆಚ್ಚುವರಿ ಶಿಕ್ಷಕರಿಗೆ ಉತ್ತಮ ಸ್ಥಳ ಆಯ್ಕೆಗಳಿಗೆ ಅವಕಾಶವಿದ್ದು, ಯಾವುದೇ ಶಿಕ್ಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾನ್ಯ ಆಯುಕ್ತರು ತಿಳಿಸಿರುತ್ತಾರೆ

ಟೀಮ್ KSPSTA Dk

ಆತ್ಮೀಯ ಹೆಚ್ಚುವರಿ ಶಿಕ್ಷಕರ ಗಮನಕ್ಕೆ

ಹೆಚ್ಚುವರಿ ಶಿಕ್ಷಕರು ವಿನಾಯಿತಿ ಪಡೆದುಕೊಳ್ಳಬೇಕಾದರೆ EEDS ನ Employee login ನಲ್ಲಿ ಲಾಗಿನ್ ಆಗಿ Raise excess transfer exmpetion ಅನ್ನು ಕ್ಲಿಕ್ ಮಾಡಿದಾಗ ವಿನಾಯಿತಿ ಪಡೆಯುವ ಪ್ರಕರಣಗಳು ಕಾಣುತ್ತವೆ. ಅದರಲ್ಲಿ ಮೊದಲು rule 10 for KCSR ನಲ್ಲಿ YES ಎಂದು ಕ್ಲಿಕ್ ಮಾಡಿ ತಮಗೆ ಅನ್ವಯಿಸುವ (ಈ ಮೇಲಿನ PDF file ನಲ್ಲಿ ತೋರಿಸಿರುವ) ಪ್ರಕರಣದ ಮುಂದೆ YES ಎಂದು ಕ್ಲಿಕ್ ಮಾಡಿ ಅದಕ್ಕೆ ಸಂಬಂಧಿಸಿದ Document ನ್ನು Upload ಮಾಡುವುದು. ನಂತರ Diclaration ಮುಂದೆ ಇರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ Submit ಮಾಡುವುದು. ಆಗ ತಮ್ಮ objection BEO login ಗೆ ಹೋಗುತ್ತದೆ.ತದನಂತರ ಮೇಲಾಧಿಕಾರಿಗಳು ಅದರ ಪರಿಶೀಲನೆ ಮಾಡಿ Accept or reject ಮಾಡುತ್ತಾರೆ. ಕಡ್ಡಾಯವಾಗಿ ಹೆಚ್ಚುವರಿ ಶಿಕ್ಷಕರು EEDS Employee login ನಲ್ಲಿಯೇ Objection file ಮಾಡಬೇಕಾಗುತ್ತದೆ. Online ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ 17-12-2022 ಆಗಿರುತ್ತದೆ.

WhatsApp Group Join Now
Telegram Group Join Now
Sharing Is Caring:

Leave a Comment