ನವಂಬರ್ 26ನೇ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ಕುರಿತು:-
ಭಾರತ ಸಂವಿಧಾನವು ನವಂಬರ26ನೇ1949ರ ದಿನ ಸಂವಿಧಾನ ಸಭೆಯಲ್ಲಿ ಅಂಗೀಕಾರವಾದ ಕಾರಣ ಅದರ ಸವಿನೆನಪಿಗಾಗಿ,ಆ ದಿನವನ್ನು ಅಂದರೆ 26-11-2021 ರಂದು ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಕಡ್ಡಾಯವಾಗಿ ಓದುವುದು ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲು ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ ತಿಳಿಸಿದೆ
ಮುಂದುವರೆದು ನವಂಬರ್ 26ರಂದು ರಾಷ್ಟ್ರ ಪತಿಯವರ ನೇತೃತ್ವದಲ್ಲಿ ನಡೆಯುವ ಸದರಿ ಕಾರ್ಯಕ್ರಮದ ನೇರ ಪ್ರಸಾರದ ಕಾರ್ಯಕ್ರಮವನ್ನು ಟಿ.ವಿ ಚಂದನ ವಾಹಿನಿಯಲ್ಲಿ ಮತ್ತು ಆನ್ಲೈನ್ ಗಳಲ್ಲಿ ಸಮಯ 11.00ಗಂಟೆಗೆ ಪ್ರಸಾರವಾಗುವುದನ್ನು ಎಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅನುವು ಮಾಡಿಕೊಡಲು ಕೋರಿದೆ
ವಿಧಾನ ಪರಿಷತ್ ಚುನಾವಣಾ ಹಿನ್ನೆಲೆಯಲ್ಲಿ ಸಂಬಂಧಿಸಿದ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅದರ ಉಲ್ಲಂಘನೆಯಾಗದ ಹಾಗೆ ಅವಶ್ಯ ಸೂಚನೆಗಳನ್ನು ಪಾಲಿಸುವ ಮೂಲಕ ಈ ಕಾರ್ಯಕ್ರಮವನ್ನು ನಡೆಸಲು ಸಂಬಂಧಿಸಿದ ಉಪನಿರ್ದೇಶಕರುಗಳಿಗೆ ತಿಳಿಸಿದೆ.