ಸೇತುಬಂಧ ಶಿಕ್ಷಣದ ಅನುಷ್ಠಾನ ಕಾರ್ಯತಂತ್ರಗಳು:
- ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಹಾಗೂ ಸಾಮರ್ಥ್ಯಗಳನ್ನು
ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ
ನಡುವೆ ಸಹಸಂಬಂಧ ಕಲ್ಪಿಸುವುದು ಸೇತುಬಂಧ ಶಿಕ್ಷಣದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಹಿಂದಿನ
ತರಗತಿ ಮತ್ತು ಆಯಾ ತರಗತಿಯ ಅಪೇಕ್ಷಿತ ಕಲಿಕಾಫಲಗಳನ್ನು ಪರಿಶೀಲಿಸಿ, ಪ್ರಸ್ತುತ ಸೇತುಬಂಧ ಶಿಕ್ಷಣಕ್ಕೆ
ಅಪೇಕ್ಷಿತ ಕಲಿಕಾಫಲಗಳನ್ನು ಗುರುತಿಸಲಾಗಿದೆ. ಗುರುತಿಸಲಾದ ಅಪೇಕ್ಷಿತ ಕಲಿಕಾಫಲಗಳಿಗೆ
ಕಲಿಕಾಂಶಗಳನ್ನು ಪಟ್ಟಿ ಮಾಡಲಾಗಿದೆ. - 1 ರಿಂದ 10ನೇ ತರಗತಿಗಳ ಕನ್ನಡ ಮಾಧ್ಯಮದ ಸೇತುಬಂಧ ಸಾಹಿತ್ಯವನ್ನು ಡಿ.ಎಸ್.ಇ.ಆರ್.ಟಿ ವೆಬ್
ಸೈಟ್‌ನಲ್ಲಿ
ಪ್ರಕಟಿಸಲಾಗಿದ್ದು, ಸದರಿ ಸಾಹಿತ್ಯವನ್ನು ಶಿಕ್ಷಕರು ಕಡ್ಡಾಯವಾಗಿ ಓದುವುದು. ಆಂಗ್ಲಮಾಧ್ಯಮದ ಸೇತುಬಂಧ ಸಾಹಿತ್ಯ ಹಾಗೂ ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳ ಪುಥಮ
ಭಾಷೆಗಳ ಸೇತುಬಂಧ ಸಾಹಿತ್ಯವನ್ನು ಅಪ್‌ಲೋಡ್ ಮಾಡಲಾಗುವುದು. - ಸಾಹಿತ್ಯದಲ್ಲಿ ನೀಡಿರುವ ಅಥವಾ ತಮ್ಮ ಹಂತದಲ್ಲಿ ಸ್ಥಳೀಯ ಸನ್ನಿವೇಶಕ್ಕೆ ಮತ್ತು ಅಪೇಕ್ಷಿತ ಕಲಿಕಾ
ಫಲಗಳಿಗೆ ಅನುಗುಣವಾಗಿ ಚಟುವಟಿಕೆ ರೂಪಿಸಿಕೊಂಡು ಅನುಷ್ಕಾನಿಸಲು ಕ್ರಮವಹಿಸುವುದು. - ಚಟುವಟಿಕೆಗಳನ್ನು ರೂಪಿಸುವಾಗ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯಮಾಪನವನ್ನು
ಅಂತರ್ಗತಗೊಳಿಸಲಾಗಿದ್ದು, ಶಿಕ್ಷಕರು ಮಕ್ಕಳ ಕಲಿಕಾ ಪ್ರಗತಿಯನ್ನು ನಿಯಮಿತವಾಗಿ ಕೃತಿಸಂಪುಟದಲ್ಲಿ
ದಾಖಲಿಸುವುದು. - ವಿದ್ಯಾರ್ಥಿಗಳ ಕಲಿಕೆಗನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಕಲಿಕಾ ತಂತ್ರಗಳನ್ನು ರೂಪಿಸಿ ನಿರಂತರ
ಕಲಿಕೆಯನ್ನು ಅನುಕೂಲಿಸಲು ಕ್ರಿಯಾ ಯೋಜನೆಯನ್ನು ರೂಪಿಸುವುದು ಅತ್ಯವಶ್ಯಕ. - ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ಉಲ್ಲೇಖಿತ ಸುತ್ತೋಲೆಯಲ್ಲಿ ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ
ಪರೀಕ್ಷೆಗಳನ್ನು ನಡೆಸಲು ತಿಳಿಸಿರುವ ಹಿನ್ನೆಲೆಯಲ್ಲಿ ಸದರಿ ಸಾಹಿತ್ಯದಲ್ಲಿ ಮಾದರಿ ಪ್ರಶ್ನೆಗಳನ್ನು
ನೀಡಲಾಗಿದ್ದು, ತಮ್ಮ ಹಂತದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಮೌಲ್ಯಮಾಪನ ಕೈಗೊಳ್ಳುವುದು ಮತ್ತು
ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯ ಫಲಗಳ ಕಲಿಕೆಯಾಗಿದೆ ಎಂಬುದನ್ನು ಒಟ್ಟಾರೆಯಾಗಿ ಕೃತಿ ಸಂಪುಟದಲ್ಲಿ
ದಾಖಲಿಸುವುದು.
. - ಲಭ್ಯವಿರುವ ಸಾಧನಗಳಿಗೆ ಅನುಗುಣವಾಗಿ ನಿರ್ವಹಿಸಬೇಕಾದ ಚಟುವಟಿಕೆಗಳನ್ನು/ಸಿದ್ಧತೆಗಳನ್ನು
ನಡೆಸುವುದು. ಮಕ್ಕಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಅಥವಾ ಮೌಖಿಕ ಪ್ರಶೋತ್ತರ,
ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು, ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿರುವುದು, ಗೃಹಪಾಠ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು. - ಸೇತುಬಂಧ ಶಿಕ್ಷಣ ಪೂರ್ಣಗೊಂಡ ನಂತರವು ವಿದ್ಯಾರ್ಥಿಗಳಲ್ಲಿ ಇನ್ನು ಕೆಲ ಸಾಮರ್ಥ್ಯಗಳು ಗಳಿಕ
ಆಗಿರದಿದ್ದಲ್ಲಿ ಅಂತಹವರನ್ನು ಗಮನಿಸಿ ಆಯಾ ತರಗತಿ ಪಠ್ಯ ಬೋಧನಾ ಸಂದರ್ಭದಲ್ಲಿ ಪೂರ್ವ ಸಿದ್ಧತಾ
ಚಟುವಟಿಕೆಗಳನ್ನು ನೀಡುವಾಗ ಸದರಿ ಸಾಮರ್ಥ್ಯಗಳಿಗೆ ವಿಶೇಷ ಆದ್ಯತೆ ನೀಡಿ ಕಲಿಕೆಯನ್ನು
ಅನುಕೂಲಿಸುವುದು. ಮೇಲ್ವಿಚಾರಣೆ
ಮತ್ತು ಉಸ್ತುವಾರಿ: - ಎಲ್ಲಾ ಶಿಕ್ಷಕರು ಸೇತುಬಂಧ ಸಾಹಿತ್ಯ ಬಳಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಮತ್ತು ಶಿಕ್ಷಕರು
ಕ್ರಿಯಾಯೋಜನೆ ರೂಪಿಸಲು ಅಗತ್ಯ ಮಾರ್ಗದರ್ಶನ ನೀಡುವುದು. - ಸೇತುಬಂಧ ಶಿಕ್ಷಣದಲ್ಲಿ ಮಕ್ಕಳ ಕಲಿಕಾ ಪ್ರಗತಿಯನ್ನು ಕೃತಿಸಂಪುಟದಲ್ಲಿ ಶಿಕ್ಷಕರು ದಾಖಲಿಸುತ್ತಿರುವ ಬಗ್ಗೆ
ಮುಖ್ಯ ಶಿಕ್ಷಕರು ಖಾತ್ರಿಪಡಿಸಿಕೊಳ್ಳುವುದು. - ಜಿಲ್ಲಾ ನೋಡಲ್ ಅಧಿಕಾರಿಗಳು ಶಾಲಾ ಭೇಟಿ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸೇತುಬಂಧ
ಶಿಕ್ಷಣ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡುವುದು.
ತಾಲೂಕು ಮತ್ತು ಜಿಲ್ಲಾ ಹಂತದ ಕ್ಷೇತ್ರ ಉಸ್ತುವಾರಿ ಅಧಿಕಾರಿಗಳು ನಿಯಮಿತವಾಗಿ ಶಾಲಾ ಭೇಟಿ ಮಾಡಿ
ಸೇತುಬಂಧ ಶಿಕ್ಷಣದ ಪುಗತಿ ಪರಿಶೀಲಿಸುವುದು ಮತ್ತು ಅಗತ್ಯ ಮಾರ್ಗದರ್ಶನ ನೀಡುವುದು. - ಉಪನಿರ್ದೇಶಕರು (ಆಡಳಿತ & ಅಭಿವೃದ್ಧಿ ಇವರು ತಮ್ಮ ಜಿಲ್ಲೆಯ ಯಾವುದೇ ಮಗು ಶಿಕ್ಷಣದಿಂದ
ವಂಚಿತವಾಗದಂತೆ ಶಾಲಾ ಹಂತದಲ್ಲಿ ಕ್ರಮವಹಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. - ಸೇತುಬಂಧ ಶಿಕ್ಷಣದ ಪ್ರಗತಿಯನ್ನು ಬ್ಲಾಕ್ ಹಂತ ಮತ್ತು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ, ವರದಿಯನ್ನು
ಡಿ.ಎಸ್.ಇ.ಆರ್.ಟಿ ಕಛೇರಿಗೆ ಸಲ್ಲಿಸುವುದು ಹಾಗೂ ಈ ವರದಿಯನ್ನು ಆಧರಿಸಿ ತಮ್ಮ ಜಿಲ್ಲೆ ಹಾಗೂ ತಾಲೂಕುಗಳ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮವಹಿಸುವುದು.