ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಮಾನ್ಯ ಉಪನಿರ್ದೇಶಕರು ಶ್ರೀ ಸುಧಾಕರ್ ಇವರನ್ನು ಭೇಟಿಯಾಗಿ ಶಿಕ್ಷಕರ ಹಲವು ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು
❇️ ಗುರುಭ್ಯೋ ನಮಃ ಕಾರ್ಯಕ್ರಮವನ್ನು ಇನ್ನಷ್ಟು ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ವಿನಂತಿ ಮಾಡಲಾಯಿತು.ಗುರುಭ್ಯೋ ನಮಃ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ನಿವೃತ್ತ ಶಿಕ್ಷಕರಿಗೆ ನಿವೃತ್ತಿ ಸೌಲಭ್ಯಗಳು ಇನ್ನಷ್ಟು ತ್ವರಿತವಾಗಿ ಸಿಗುವಂತೆ ,ಕಚೇರಿಗಳಲ್ಲಿ ಅನಗತ್ಯ ವಿಳಂಬ ತಪ್ಪಿಸುವಂತೆ ಸೂಕ್ತ ನಿರ್ದೇಶನ ನೀಡುವಂತೆ ವಿನಂತಿ ಮಾಡಲಾಯಿತು
❇️ಸಾಕಷ್ಟು ಮುಖ್ಯ ಗುರುಗಳ ಹುದ್ದೆ ಜಿಲ್ಲೆಯಲ್ಲಿ ಖಾಲಿ ಇದ್ದು ಸಹಶಿಕ್ಷಕರ ಹುದ್ದೆಯಿಂದ ಮುಖ್ಯಗುರುಗಳ ಹುದ್ದೆಗೆ,ಮುಖ್ಯ ಗುರುಗಳ ಹುದ್ದೆಯಿಂದ ಪದವೀಧರ ಮುಖ್ಯ ಗುರುಗಳ ಹುದ್ದೆಗೆ ಭಡ್ತಿ ನೀಡಲು ಪ್ರಕ್ರಿಯೆಯನ್ನು ಅತೀ ಶೀಘ್ರ ಪ್ರಾರಂಭಿಸಲು ವಿನಂತಿ ಮಾಡಲಾಯಿತು
❇️ಗುರುಸೇವೆ ಕಾರ್ಯಕ್ರಮದ ಭಾಗವಾಗಿ KGID ಕುರಿತು ನೌಕರರಿಗೆ ಮಾಹಿತಿ ನೀಡಲು ಜಿಲ್ಲಾ ಹಂತದಲ್ಲಿ KGID ಅದಾಲತ್ ಹಮ್ಮಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಯಿತು
❇️ಸರಕಾರದ ಆದೇಶದಂತೆ ಎಲ್ಲಾ ಶಿಕ್ಷಕರಿಗೂ ಸರಕಾರದ ಗುರುತಿನ ಚೀಟಿ ಒದಗಿಸಲು ಸೂಕ್ತ ನಿರ್ದೇಶನ ನೀಡುವಂತೆ ವಿನಂತಿ ಮಾಡಲಾಯಿತು
❇️ಜಿಲ್ಲೆಯಲ್ಲಿ ಹಲವಾರು ಶಾಲೆಗಳಲ್ಲಿ nerwork ಸಮಸ್ಯೆ ಇದ್ದು ಸಮಸ್ಯೆಗೆ ಅತೀ ತುರ್ತು ಪರಿಹಾರ ಒದಗಿಸಲು ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕ್ರಮಗಳ ಕುರಿತು ಚರ್ಚಿಸಿ ,ಇಂದಿನ ದಿನಗಳಲ್ಲಿ network ಶಾಲೆಗಳಿಗೆ ಅತೀ ಅಗತ್ಯ ಎನ್ನುವುದನ್ನು ,network ಇಲ್ಲದ ಶಾಲೆಗಳಿಗೆ ಪರಿಹಾರ ಒದಗಿಸಲು ವಿನಂತಿ ಮಾಡಲಾಯಿತು
❇️ ಕಾಲಮಿತಿ ಭಡ್ತಿ ಮಂಜೂರಾತಿಗೆ ಸೇವಾ ಪುಸ್ತಕದ ಮಾಹಿತಿಯನ್ನು ಪರಿಗಣಿಸಿ ಅವಕಾಶ ನೀಡುವಂತೆ ವಿನಂತಿ ಮಾಡಲಾಯಿತು
❇️ಅಕ್ಷರದಾಸೋಹ ದ ಸಮಸ್ಯೆಗಳ
ಕುರಿತು ಚರ್ಚಿಸಲಾಯಿತು
❇️ ಕೋರೋಣ ಹೆಚ್ಚಾಗುತ್ತಿರುವುದರಿಂದ ಸರಕಾರದ ಆದೇಶದಂತೆ ದೃಷ್ಟಿ ಹೀನ,ವಿಕಲಚೇತನ ಹಾಗೂ ಗರ್ಭಿಣಿ ಶಿಕ್ಷಕಿಯರಿಗೆ work from home ಆದೇಶ ಮಾಡುವಂತೆ ಮನವಿ ನೀಡಿ ವಿನಂತಿ ಮಾಡಲಾಯಿತು.
ಹಾಗೂ ಇನ್ನೂ ಹಲವಾರು ಶೈಕ್ಷಣಿಕ ವಿಚಾರಗಳ ಕುರಿತು ಚರ್ಚೆ ಮಾಡಲಾಯಿತು ಮಾನ್ಯರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಗುರುಸೇವೆ 6 KGID ಕಚೇರಿಗೆ ಭೇಟಿ
ಗುರುಸೇವೆ 6 ರ ಭಾಗವಾಗಿ KGID ಸಂಬಂದಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಜಿಲ್ಲಾ KGID ಕಚೇರಿಗೆ ಭೇಟಿ ನೀಡಲಾಯಿತು .ಈ ಸಂದರ್ಭದಲ್ಲಿ ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ ,ಉತ್ತಮ ಸ್ಪಂದನೆ ನೀಡಿದರು .ಶಿಕ್ಷಕರಿಗೆ KGID ಕುರಿತು ಮಾಹಿತಿ ನೀಡಲು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಹಂತದಲ್ಲಿ KGID ಕಾರ್ಯಗಾರ ಹಮ್ಮಿಕೊಳ್ಳುವುದಾಗಿ ತಿಳಿಸಿದ ಜಿಲ್ಲಾ ವಿಮಾ ಅಧಿಕಾರಿಗಳಾದ ಶ್ರೀ ಸುಬ್ರಹ್ಮಣ್ಯ ಕೃಷ್ಣವಧಾನಿ ಇವರಿಗೆ ಮತ್ತು ಸ್ಪಂದಿಸಿದ ಕಚೇರಿಯ ಎಲ್ಲಾ ಸಿಬ್ಬಂದಿಗಳಿಗೆ ಪ್ರೀತಿಯ ವಂದನೆಗಳು