ಅಪಾರ್ ಐಡಿ ಯಾರಿಗೆ ಜನರೇಟ್ ಆಗುವುದಿಲ್ಲ?
ಯಾರಿಗೆ ಪೆನ್ ನಂಬರ್ ಇರುವುದಿಲ್ಲವೋ ಅವರಿಗೆ ಅಪಾರ್ ಐಡಿ ಜನರೇಟ್ ಆಗುವುದಿಲ್ಲ.
ಯು ಡೈಸ್ ಪ್ಲಸ್ ನಲ್ಲಿ ಒಂದನೇ ತರಗತಿಗೆ ಅಡ್ಮಿಶನ್ ಮಾಡಿದ ಮಕ್ಕಳಿಗೆ ಪೆನ್ ನಂಬರ್ ಸಿಗಲು ಒಂದು ವಾರ ಬೇಕಾಗುತ್ತದೆ. ಅಲ್ಲಿಯವರೆಗೆ ಅಪಾರ್ ಐಡಿ ಜನರೇಟ್ ಮಾಡಲು ಆಗುವುದಿಲ್ಲ.
ಆಧಾರ್ ವೆರಿಫಿಕೇಶನ್ 100% ಆಗದೆ ಇರುವ ಮಕ್ಕಳಿಗೆ ಅಪಾರ್ ಐಡಿ ಜನರೇಟ್ ಆಗುವುದಿಲ್ಲ.
ಯು ಡೈಸ್ ಪ್ಲಸ್ ನಲ್ಲಿ ಹಾಗೂ ಆಧಾರ್ ನಲ್ಲಿ ಮಗುವಿನ ಹೆಸರು, ಜನ್ಮ ದಿನಾಂಕ, ಲಿಂಗ ಈ ಮೂರು ಅಂಶಗಳು ತಾಳೆ ಆಗಬೇಕು.
ಆಧಾರ್ ವೆರಿಫಿಕೇಶನ್ 100% ಇರಬೇಕು. 98% ಇದ್ದರೂ ಕೂಡ ಅಪಾರ್ ಐಡಿ ಬರುವುದಿಲ್ಲ.
ಅಪಾರ್ ಐಡಿ ಜನರೇಟ್ ಆಗಲು ಮುಖ್ಯ ಶಿಕ್ಷಕರು ಏನು ಮಾಡಬೇಕು?
ಯುಡೈಸ್ ಪ್ಲಸ್ ಹಾಗೂ ಆಧಾರ್ ನಲ್ಲಿ ಮಗುವಿನ ಹೆಸರು, ಜನ್ಮ ದಿನಾಂಕ, ಲಿಂಗ ಒಂದೇ ರೀತಿ ಇರುವಂತೆ ನೋಡಿಕೊಳ್ಳಬೇಕು.
ಮುಖ್ಯ ಶಿಕ್ಷಕರು ಮೊದಲು ಸ್ಯಾಟ್ಸ್ ನಲ್ಲಿ ಮಕ್ಕಳ ಆಧಾರ್ ವೆರಿಫಿಕೇಷನ್ ನೋಡಿಕೊಳ್ಳಬೇಕು. ಅಲ್ಲಿ 100% ಆಧಾರ್ ವೆರಿಫಿಕೇಶನ್ ಆದ ಮಕ್ಕಳಿಗೆ ಅಪಾರ್ ಐಡಿ ಜನರೇಟ್ ಮಾಡಲು ಸಾಧ್ಯವಾಗುತ್ತದೆ.
ಸ್ಯಾಟ್ಸ್ ಹಾಗೂ ಆಧಾರ್ ನಲ್ಲಿ ಮಾಹಿತಿ ಒಂದೇ ರೀತಿ ಇಲ್ಲದೆ ಇದ್ದರೆ ಆಧಾರ್ ಮಾಹಿತಿ ತಪ್ಪು ಇದ್ದರೆ ಅಂತಹ ಮಕ್ಕಳ ಪೋಷಕರಿಗೆ ಹೇಳಿ ಆಧಾರದಲ್ಲಿ ತಿದ್ದುಪಡಿ ಮಾಡಲು ತಿಳಿಸುವುದು ಒಂದು ವೇಳೆ ಆಧಾರ್ ನಲ್ಲಿ ಸರಿಯಿದ್ದು ತಪ್ಪಾಗಿದ್ದರೆ ಫ್ಯಾಟ್ಸ್ ನಲ್ಲಿ ಸರಿಪಡಿಸುವುದು.