5, 8 ಮತ್ತು 9 ನೇ ತರಗತಿ ಮೌಲ್ಯ ಮಾಪನದ ಕುರಿತು ಮಾಹಿತಿ ಇಲ್ಲಿದೆ

1000714224
WhatsApp Group Join Now
Telegram Group Join Now

2023-24 ನೇ ಸಾಲಿನ 5, 8 ಮತ್ತು 9 ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಪಠ್ಯವಸ್ತು ಮತ್ತು
ಅಂಕಗಳನ್ನು ನಿಗದಿಪಡಿಸುವ ಬಗ್ಗೆ.

1 ರಿಂದ 10ನೇ ತರಗತಿಯ ಮೌಲ್ಯಾಂಕನಕ್ಕೆ ಸಂಬಂಧಿಸಿದ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರವರ ಸುತ್ತೋಲೆ ಸಂಖ್ಯೆ: ಡಿ.ಎಸ್.ಇ.ಆರ್.ಟಿ/ಇ.ವಿ.ಜಿ/1-10 ಮೌಲ್ಯಾಂಕನ/2023-24 ದಿನಾಂಕ: 01-07-2023 ರಲ್ಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನದ ಮಾಹಿತಿಯನ್ನು ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದ್ದು, ಅದರಂತೆ ಕ್ರಮವಹಿಸಲು ಸೂಚಿಸಲಾಗಿದೆ.

ದಿನಾಂಕ: 01-07-2023 ರ ಮೌಲ್ಯಾಂಕನ ಸುತ್ತೋಲೆಯಲ್ಲಿರುವಂತೆ

1ರಿಂದ 5 ನೇ ತರಗತಿ
ಸಂಕಲನಾತ್ಮಕ ಮೌಲ್ಯಮಾಪನ – SA 2

  • ಆಯಾ ತರಗತಿ ಮತ್ತು ವಿಷಯಕ್ಕೆ ನಿಗದಿ ಪಡಿಸಿದ ಶೇ 50 ರಷ್ಟು ಪಠ್ಯವನ್ನು
    ಪರಿಗಣಿಸುವುದು.
  • 30 ಲಿಖಿತ + 20 ಮೌಖಿಕ = 50 ಅಂಕಗಳಿಗೆ ಪರೀಕ್ಷೆ ನಡೆಸಿ, ಇದನ್ನು 20 ಅಂಕಗಳಿಗೆ ಪರಿವರ್ತಿಸುವುದು.
  • ಇಂಗ್ಲೀಷ್ ಭಾಷೆಗೆ 10 ಲಿಖಿತ+40 + ಮೌಖಿಕ=50
    ಅಂಕಗಳಿಗೆ ಪರೀಕ್ಷೆ
    ನಡೆಸಿ, ಇದನ್ನು 20 ಅಂಕಗಳಿಗೆ |ಪರಿವರ್ತಿಸುವುದು.

ಆಯಾ ತರಗತಿ ಮತ್ತು ವಿಷಯಕ್ಕೆ
ನಿಗದಿಪಡಿಸಿದ SA-1 ರ ಮೌಲ್ಯಮಾಪನಕ್ಕೆ
ಪರಿಗಣಿಸಿದ ನಂತರ ಉಳಿದ ಶೇ.50 ರಷ್ಟು
ಪಠ್ಯವನ್ನು ಪರಿಗಣಿಸುವುದು.
ಪರಿಗಣಿಸುವುದು.

5ನೇ ತರಗತಿ ಮೌಲ್ಯಾಂಕನ

2023-24 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ
ನೀಡಿರುವಂತೆ ನವಂಬರ್-2023 ರಿಂದ ಫೆಬ್ರವರಿ-
2024 ರವರೆಗಿನ ಪಠ್ಯವಸ್ತುವನ್ನು ಪರಿಗಣಿಸುವುದು.

  • SA-2 ಗೆ ಬದಲಾಗಿ ನಡೆಸುವ ಮೌಲ್ಯಾಂಕನಕ್ಕೆ ಎಲ್ಲಾ
    ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ
    ಮೌಖಿಕ ಮತ್ತು 40 ಅಂಕಗಳಿಗೆ ಲಿಖಿತ, ಒಟ್ಟಾರೆ 50
    ಅಂಕಗಳಿಗೆ ಮೌಲ್ಯಾಂಕನ ನಡೆಸಿ 20 ಅಂಕಗಳಿಗೆ
    ಪರಿವರ್ತಿಸುವುದು.
  • ಅಂತಿಮವಾಗಿ ಫಲಿತಾಂಶ ನಿರ್ಣಯಿಸಲು FA-1, FA-
    2, FA-3, FA-4, SA-1 ಮತ್ತು SA-2 ಗಳ ಅಂಕಗಳನ್ನು
    15+15+15+15+20+20=100 ರಂತೆ ಪರಿಗಣಿಸುವುದು
  • ಶಾಲೆಗಳಿಂದ SATS ನಲ್ಲಿ ದಾಖಲಿಸಿರುವ FA-1, FA-2,
    FA-3, FA-4 ಮತ್ತು SA-1 ಅಂಕಗಳೊಂದಿಗೆ SA-2 ನ
    ಪರಿವರ್ತಿಸಿದ 20 ಅಂಕಗಳನ್ನು ಮೇಲ್ಕಂಡಂತೆ
    ಪರಿಗಣಿಸಿ ಫಲಿತಾಂಶ ನಿರ್ಣಯಿಸುವುದು.

6 ರಿಂದ 8 ನೇ ತರಗತಿ
ಸಂಕಲನಾತ್ಮಕ ಮೌಲ್ಯಮಾಪನ – SA 2

  • ಆಯಾ ತರಗತಿ ಮತ್ತು ವಿಷಯಕ್ಕೆ ನಿಗದಿಪಡಿಸಿದ ಶೇ 50 ರಷ್ಟು ಪಠ್ಯವನ್ನು
    ಪರಿಗಣಿಸುವುದು.
  • 40 ಲಿಖಿತ + 10 ಮೌಖಿಕ = 50ಅಂಕಗಳಿಗೆ ಪರೀಕ್ಷೆ ನಡೆಸಿ, ಇದನ್ನು 30 ಅಂಕಗಳಿಗೆ ಪರಿವರ್ತಿಸುವುದು.
  • ಇಂಗ್ಲೀಷ್ ಭಾಷೆಗೆ 10 ಲಿಖಿತ+40 ಮೌಖಿಕ=50 ಅಂಕಗಳಿಗೆ ಪರೀಕ್ಷೆ
    ನಡೆಸಿ, ಇದನ್ನು 20 ಅಂಕಗಳಿಗೆ
    ಪರಿವರ್ತಿಸುವುದು.

ಆಯಾ ತರಗತಿ ಮತ್ತು ವಿಷಯಕ್ಕೆ
ನಿಗದಿಪಡಿಸಿದ SA-1 ರ ಮೌಲ್ಯಮಾಪನಕ್ಕೆ
ಪರಿಗಣಿಸಿದ ನಂತರ ಉಳಿದ ಶೇ.50 ರಷ್ಟು
ಪಠ್ಯವನ್ನು ಪರಿಗಣಿಸುವುದು.

8ನೇ ತರಗತಿ ಮೌಲ್ಯಾಂಕನ

2023-24 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ
ನೀಡಿರುವಂತೆ ಜೂನ್-2023 ರಿಂದ ಫೆಬ್ರವರಿ-2024
ರವರೆಗಿನ ವಾರ್ಷಿಕ
ಪಠ್ಯವಸ್ತುವನ್ನು
SA-2 ಗೆ ಬದಲಾಗಿ ನಡೆಸುವ
ಮೌಲ್ಯಾಂಕನಕ್ಕೆ ಎಲ್ಲಾ ಭಾಷೆ ಮತ್ತು ಕೋರ್
ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 50
ಅಂಕಗಳಿಗೆ ಲಿಖಿತ ಒಟ್ಟಾರೆ 60 ಅಂಕಗಳಿಗೆ ನಡೆಸಿ
ನಂತರ 30 ಅಂಕಗಳಿಗೆ ಪರಿವರ್ತಿಸುವುದು.

  • ಅಂತಿಮವಾಗಿ ಫಲಿತಾಂಶ ನಿರ್ಣಯಿಸಲು FA-1, FA-
    2, FA-3, FA-4, SA-1 ಮತ್ತು SA-2 ಗಳ ಅಂಕಗಳಿಗೆ
    10+10+10+10+30+30=100 ರಂತೆ ಪರಿಗಣಿಸುವುದು.

ಶಾಲೆಗಳಿಂದ SATS ನಲ್ಲಿ ದಾಖಲಿಸಿರುವ FA-1, FA-2,
FA-3, FA-4, SA-1 ಅಂಕಗಳೊಂದಿಗೆ SA-2 ನ
ಪರಿವರ್ತಿಸಿದ 30 ಅಂಕಗಳನ್ನು ಮೇಲ್ಕಂಡಂತೆ
ಪರಿಗಣಿಸಿ ಫಲಿತಾಂಶ ನಿರ್ಣಯಿಸುವುದು.

ವಿಶೇಷ ಸೂಚನೆ: ಪ್ರಸ್ತುತ ಮೇಲ್ಕಂಡಂತೆ 8ನೇ ತರಗತಿ
SA-2 ಮೌಲ್ಯಾಂಕನಕ ಜೂನ್ 2023 ರಿಂದ ಫೆಬ್ರವರಿ-
2024 ರವರೆಗಿನ ವಾರ್ಷಿಕ ಪಠ್ಯವಸ್ತುವನ್ನು
ಪರಿಗಣಿಸುವುದರಿಂದಾಗಿ ವಿದ್ಯಾರ್ಥಿಗಳಿಗೆ ಮುಂಬರುವ
9ನೇ ಮತ್ತು 10ನೇ ತರಗತಿಯ ಪರೀಕ್ಷೆಯನ್ನು ಬರೆಯಲು
ರೂಢಿಯಾದಂತಾಗಿ ಉತ್ತಮ ಅಭ್ಯಾಸಕ್ಕೆ
ಸಹಕಾರಿಯಾಗುತ್ತದೆ.

9ನೇ ತರಗತಿಗೆ ಸಂಕಲನಾತ್ಮಕ
ಮೌಲ್ಯಮಾಪನ SA-2
(ಅಂತಿಮ ವಾರ್ಷಿಕ ಪರೀಕ್ಷೆ)

  • 9ನೇ ತರಗತಿಯ ಆಯಾ ಭಾಷೆ ಹಾಗೂ ವಿಷಯಕ್ಕೆ ನಿಗದಿಪಡಿಸಿದ ವಾರ್ಷಿಕ ಶೇ.100 ರಷ್ಟು ಪಠ್ಯವನ್ನು ಪರಿಗಣಿಸುವುದು.
  • ಪ್ರಥಮ ಭಾಷೆಗೆ 100 ಅಂಕಗಳು, ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ ಕೋರ್ ವಿಷಯಗಳಿಗೆ 80ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸುವುದು.
  • ನಾಲ್ಕು ರೂಪಣಾತ್ಮಕ ಮೌಲ್ಯಾಂಕನಗಳ (FA-1+FA-2+FA- 3+FA-4)=ಒಟ್ಟು 200 ಅಂಕಗಳನ್ನು
    ಪಥಮ ಭಾಷೆಗೆ 25 ಅಂಕಗಳಿಗೆ ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆ
    ಹಾಗೂ ಕೋರ್ ವಿಷಯಗಳಿಗೆ 20 ಅಂಕಗಳಿಗೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನಕ್ಕೆ ಪರಿಗಣಿಸುವುದು.
  • ಪ್ರಥಮ ಭಾಷೆ-100 ಲಿಖಿತ+25 ಆಂತರಿಕ = 125 ಅಂಕಗಳು
  • ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ ಕೋರ್ ವಿಷಯಗಳಿಗೆ-80 ಲಿಖಿತ + 20 ಆಂತರಿಕ = 100ಅಂಕಗಳಿಗೆ ಮೌಲ್ಯಮಾಪನ ನಡೆಸುವುದು.

9ನೇ ತರಗತಿ ಮೌಲ್ಯಾಂಕನ

  • 9ನೇ ತರಗತಿಯ SA-2 ಮೌಲ್ಯಾಂಕನಕ್ಕೆ ಆಯಾ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ನಿಗದಿಪಡಿಸಿದ ವಾರ್ಷಿಕ ಶೇ.100 ರಷ್ಟು ಪಠ್ಯವನ್ನು ಪರಿಗಣಿಸುವುದು. ಆಂತರಿಕ ಮೌಲ್ಯಮಾಪನ: ನಾಲ್ಕು ರೂಪಣಾತ್ಮಕ ಮೌಲ್ಯಾಂಕನಗಳ (FA-1+FA-2+FA-3+FA-4)= 50+50+50+50 = ಒಟ್ಟು 200 ಅಂಕಗಳಿಗೆ ನಿರ್ವಹಿಸಿ ನಂತರ ಪ್ರಥಮ ಭಾಷೆ 25 ಅಂಕಗಳಿಗೆ ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ತಲಾ 20 ಅಂಕಗಳಿಗೆ ಪರಿವರ್ತಿಸಿಅಂದರೆ 25+20+20+20+20+20 = ಒಟ್ಟು 125 ಅಂಕಗಳಿಗೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನಕ್ಕೆ ಪರಿಗಣಿಸುವುದು.

  • SA-2 ಮೌಲ್ಯಾಂಕನ: ಪ್ರಥಮ ಭಾಷೆಗೆ 100 ಅಂಕಗಳು, ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ
    ಕೋರ್ ವಿಷಯಗಳಿಗೆ ತಲಾ 80 ಅಂಕಗಳಿಗೆ ಅಂದರೆ 100+80+80+80+80+80= ಒಟ್ಟು 500 ಅಂಕಗಳಿಗೆ ಮೌಲ್ಯಾಂಕನ ಲಿಖಿತ ಪರೀಕ್ಷೆಯನ್ನು ನಡೆಸುವುದು.
  • ಅಂತಿಮವಾಗಿ ಫಲಿತಾಂಶ ನಿರ್ಧರಿಸಲು ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು sa 2 ಬದಲಾಗಿ
    ನಡೆಸುವ ಮೌಲ್ಯಾಂಕನ ಲಿಖಿತ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದು.
WhatsApp Group Join Now
Telegram Group Join Now
Sharing Is Caring:

Leave a Comment