2024-25ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಶಿಕ್ಷಕರ / ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ಮಂಜೂರು ಮಾಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ದಿನಾಂಕ 01/12/2024 ರಿಂದ ದಿನಾಂಕ 30/12/2024ರವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಕಡ್ಡಾಯವಾಗಿ online ಮೂಲಕವೇ ಭರ್ತಿ ಮಾಡುವುದು. ಕಚೇರಿಗೆ ಬರುವ ಭೌತಿಕ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
TBF/SWF Online Services ಮೂಲಕ ಅಜೀವ ಸದಸ್ಯತ್ವ ಅಥವಾ ಹಳೆಯ ಕಾರ್ಡ್ ಆನ್ಲೈನ್ ಮೂಲಕ ನವೀಕರಿಸಿದ ಶಿಕ್ಷಕರು ಉನ್ನತ ವ್ಯಾಸಂಗ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು. ತಂದೆ/ತಾಯಿ ಇಬ್ಬರು ಉಪನ್ಯಾಸಕರಾಗಿದ್ದಲ್ಲಿ ಒಂದು ಅರ್ಜಿ ಮಾತ್ರ ಸಲ್ಲಿಸಲು ಅವಕಾಶ ಇರುತ್ತದೆ.
ಈ ಕೆಳಕಂಡಂತೆ ಅರ್ಜಿ ಸಲ್ಲಿಸುವುದು
- ಸೇವೆಯಲ್ಲಿರುವ ಶಿಕ್ಷಕರು DDO ಗಳ ಸಹಿ ಪಡೆಯುವುದು. ನಿವೃತ್ತ ಶಿಕ್ಷಕರು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಅರ್ಜಿ ಸಲ್ಲಿಸುವುದು.
- ಅರ್ಜಿಯಲ್ಲಿ ನಮೂದಾಗಿರುವ ಕೋರ್ಸ್ ಗಳಿಗೆ ಮಾತ್ರ ಅವಕಾಶ.
- CA, PHD ಕೋರ್ಸ್ ಗಳಿಗೆ ಧನಸಹಾಯ ನೀಡಲಾಗುವುದಿಲ್ಲ.
- ಬೋಧಕೇತರ ಸಿಬ್ಬಂದಿಗಳ ಮಕ್ಕಳಿಗೆ ಧನಸಹಾಯ ನೀಡಲಾಗುವುದಿಲ್ಲ.
- ಶಿಕ್ಷಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಅನುತ್ತೀರ್ಣ/ಸಂಜೆ ಕಾಲೇಜು/ಮುಕ್ತ ವಿಶ್ವವಿದ್ಯಾಲಯ ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲಾಗುವುದಿಲ್ಲ.
- 31/12/2024ರ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ.
- ರಾಷ್ಟ್ರೀಕೃತ ಬ್ಯಾಂಕುಗಳ ಅಕೌಂಟ್ ನಂಬರ್ ಹಾಗೂ IFSC Code ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು.