ಮಿಷನ್ ಲೈಫ್ಗಾಗಿ ಪರಿಸರ ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಶಾಲಾ ಹಂತದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅರ್ಥಪೂರ್ಣವಾದ ವಾತಾವರಣವನ್ನು ಸೃಷ್ಟಿಸಲು, ಪರಿಸರ ಶಿಕ್ಷಣ ಅರಿವು ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿ ಸಹವರ್ತನೆಯ ಬದಲಾವಣೆಯನ್ನು ಇಕೋ ಕ್ಲಬ್ ಗಳ ಅಡಿಯಲ್ಲಿ ಉತ್ತೇಜಿಸುತ್ತದೆ.
ಇಕೋ ಹ್ಯಾಕಥಾನ್ ಉದ್ದೇಶಗಳು
1.ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು, ಮತ್ತು ಪರಿಸರ ಉತ್ಸಾಹಿಗಳನ್ನು ಒಟ್ಟುಗೂಡಿಸುವುದು.
2.ಪರಿಸರ ಸವಾಲುಗಳಿಗೆ ನವೀನ ಪರಿಹಾರಗಳನ್ನು ಚಿಂತನೆಗಳನ್ನು ಪ್ರೋತ್ಸಾಹಿಸುವುದು.
3.ಪರಿಸರ ಶಿಕ್ಷಣವನ್ನು ಉತ್ತೇಜಿಸುವುದು. ಹಾಗೂ ಸುಸ್ಥಿರ ಗುರಿಗಳನ್ನು ಬೆಂಬಲಿಸುವುದು.
ಇಕೋ ಹ್ಯಾಕಥಾನ್ ಥೀಮ್ ಗಳು
1.ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು.
2.ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು.
3.ಇ- ತ್ಯಾಜ್ಯವನ್ನು ಕಡಿಮೆ ಮಾಡುವುದು.
4.ತ್ಯಾಜ್ಯವನ್ನು ಕಡಿಮೆ ಮಾಡುವುದು.
5.ಶಕ್ತಿಯನ್ನು ಉಳಿತಾಯ ಮಾಡುವುದು.
6.ನೀರನ್ನು ಉಳಿತಾಯ ಮಾಡುವುದು.
7.ಏಕ ಬಳಕೆಯ ಪ್ಲಾಸ್ಟಿಕ್ ಬೇಡ ಎಂದು ಹೇಳುವುದು.
ಇಕೋ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆ
ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಭಾಗವಹಿಸುವ ಪ್ರಕ್ರಿಯೆ
ಶಾಲಾ ಹಂತದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಇಕೋ ಹ್ಯಾಕಾಥಾನ್ ವೆಬ್ಸೈಟ್ ನಲ್ಲಿ ಸ್ವ-ವಿವರಗಳನ್ನು ನೀಡುವುದರ ಮೂಲಕ ದಿನಾಂಕ 06/09/2024ರೊಳಗೆ ಭಾಗವಹಿಸಿ ಮಿಷನ್ ಲೈಫ್ ಥೀಮ್ ಗಳಿಗೆ ಸಂಬಂಧಿಸಿದ ವಿವರಣೆ, ವಿಡಿಯೋ ಮತ್ತು ಬರವಣಿಗೆ ಮೂಲಕ ಮಾಹಿತಿಯನ್ನು ಅಪ್ಲೋಡ್ ಮಾಡುವುದು. ವಿಜೇತರಾದ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು, ಅರಣ್ಯ ಮತ್ತು ಹವಮಾನ ಬದಲಾವಣೆಯ ಸಚಿವಾಲಯವು ನಡೆಸುವ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿ ಪ್ರೋತ್ಸಾಹಿಸುವುದು. ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರು ಹೆಚ್ಚಿನ ಶಿಕ್ಷಕರು ಭಾಗವಹಿಸುವಂತೆ ಕ್ರಮವಹಿಸಲು ಯೋಜನ ನಿರ್ದೇಶಕರು ಸಮಗ್ರ ಕರ್ನಾಟಕ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.