2023-24ನೇ ಸಾಲಿನ ಸಮಗ್ರ ಶಿಕ್ಷಣ ಯೋಜನೆಯಡಿ ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಸೀನಿಯರ್ ಸೆಕೆಂಡರಿ ಶಾಲೆಗಳಲ್ಲಿ ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅನುದಾನ ಬಿಡುಗಡೆಗೊಳಿಸಿರುವ ಬಗ್ಗೆ,

WhatsApp Group Join Now
Telegram Group Join Now

ಸಮಗ್ರ ಶಿಕ್ಷಣ ಯೋಜನೆಯಡಿ ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಸೀನಿಯರ್ ಸೆಕೆಂಡರಿ ಶಾಲೆಗಳಲ್ಲಿ ಶೈಕ್ಷಣಿಕ ಗೊಡಮಟ್ಟ ಸುಧಾರಣೆ ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ವೃದ್ಧಿಸುವ ಉದ್ದೇಶದಿಂದ ಗ್ರಂಥಾಲಯಗಳನ್ನು ಬಲವರ್ತನೆಗೊಳಿಸಲು ಅನುಮೋದನೆ ಮಂಡಳಿಯಿಂದ ಅನುಮೋದನೆ ಆಗಿರುತ್ತದೆ‌
ಸದರಿ ಅನುದಾನದ ವತಿಯಿಂದ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಗ್ರಂಥಾಲಯ ಅನುದಾನವು ರೂ.1199.92 ಲಕ್ಷ ಕೆಳಕಂಡಂತೆ ಬಿಡುಗಡೆಗೊಳಿಸಲಾಗಿದೆ.

1.ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿಡುಗಡೆಯಾಗಿರುವ ಅನುದಾನವನ್ನು ಲಗತ್ತಿಸಿರುವ ಶಾಲೆಗಳ ಪಟ್ಟಿಯಂತೆ ಸಂಬಂಧಿಸಿದ ಶಾಲೆಗಳ ಖಾತೆಗೆ ಬಿಡುಗಡೆ ಮಾಡುವುದು.

2.ಸದರಿ ಅನುದಾರದಿಂದ ಶಾಲೆಯವರು ನೆರವಾಗಿ ಪುಸ್ತಕಗಳನ್ನು ಖರೀದಿಸುವಂತಿಲ್ಲ. ಬದಲಾಗಿ ರಾಜ್ಯ ಮಟ್ಟದ ಪುಸ್ತಕ ಸಮಿತಿ ವತಿಯಿಂದ ನೀಡಲಾಗಿರುವ ಪುಸ್ತಕಗಳ ಪಟ್ಟಿಯಂತೆ ಖರೀದಿಸಬೇಕಾಗಿರುತ್ತದೆ. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಂತಿಮಗೊಳಿಸಿದ ಪುಸ್ತಕಗಳ ಪಟ್ಟಿಯನ್ನು ಡಿ.ಎಸ್.ಇ.ಆರ್.ಟಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಮುಖ್ಯ ಗುರುಗಳು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅನುಮತಿ ಪಡೆದು ಈ ಪುಸ್ತಕಗಳನ್ನು ಖರೀದಿಸಬೇಕು. ಇದರ ಹೊರತು ಬೇರೆ ಯಾವುದೇ ಪುಸ್ತಕಗಳನ್ನು ಖರೀದಿ ಮಾಡುವಂತಿಲ್ಲ.

3.ಸಂಬಂಧಿತ ಶಾಲೆಯವರು ಅನುದಾನ ದೊರೆತ ಕೂಡಲೇ ಕಡ್ಡಾಯವಾಗಿ ಸಂಬಂಧಿತ ಪ್ರಕಾಶಕರುಗಳಿಗೆ ಬೇಡಿಕೆಯನ್ನು ನೀಡಿ ಖರೀದಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.

4.ನಿಗದಿ ಪಡಿಸಿದ ಪುಸ್ತಕ ಪಟ್ಟಿಯಿಂದಲೇ ಪುಸ್ತಕಗಳನ್ನು ಖರೀದಿಸಿದ ಬಗ್ಗೆ ಶಾಲೆಯವರು ಸಂಬಂಧಿಸಿದ ಉಪ ನಿರ್ದೇಶಕರುಗಳಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ದೃಡೀಕರಣವನ್ನು ಸಂಬಂಧಿಸಿದ ಪ್ರಕಾಶಕರುಗಳಿಗೆ ಶಾಲೆಯಿಂದ ನೀಡಿದ ಬೇಡಿಕೆ ಪಟ್ಟಿಯ ಪ್ರತಿಯೊಂದಿಗೆ ಸಲ್ಲಿಸುವುದು.

5.ಗ್ರಂಥಾಲಯ ಚಟುವಟಿಕೆ ಅಡಿಯಲ್ಲಿ ಪುಸ್ತಕಗಳ ಖರೀದಿ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ ಪುಸ್ತಕಗಳನ್ನು ಶಾಲಾ ಗ್ರಂಥಾಲಯಗಳಲ್ಲಿ ಸುವ್ಯವಸ್ಥಿತವಾಗಿ ಜೋಡಿಸಿ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿ ಓದಲು ಅವಕಾಶ ಕಲ್ಪಿಸುವುದು.

6. ಖರೀದಿಸಿರುವ ಪ್ರತಿ ಪುಸ್ತಕವನ್ನು ಶಾಲಾ ಸ್ಟಾಕ್ ಪುಸ್ತಕದಲ್ಲಿ ದಾಖಲಿಸುವುದು. ಶಾಲಾ ಗ್ರಂಥಾಲಯ/ ರೀಡಿಂಗ್ ಕಾರ್ನರ್ ಗಳನ್ನು ಅಳವಡಿಸುವುದು

7.ಗ್ರಂಥಾಲಯ ಅವಧಿಯಲ್ಲಿ ಮಕ್ಕಳು ಓದಲು ಆಯ್ಕೆ ಮಾಡಿರುವ ಪುಸ್ತಕಗಳು, ಮತ್ತು ಮನೆಯಲ್ಲಿ ಓದಲು ಆಯ್ಕೆ ಮಾಡಿರುವ ಪುಸ್ತಕಗಳನ್ನು ವಿದ್ಯಾರ್ಥಿವಾರು ವಿತರಣಾ ವಹಿಯಲ್ಲಿ ನಮೂದಿಸುವುದು.

8. ಗ್ರಂಥಾಲಯ ಕೊಠಡಿಗಳಲ್ಲಿ ಪುಸ್ತಕಗಳ ವ್ಯವಸ್ಥಿತ ಜೋಡಣೆ ಹಾಗೂ ನಿರ್ವಹಣೆ, ಕುರಿತು ಗ್ರಂಥಾಲಯ ಶಿಕ್ಷಕರು ಹಾಗೂ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಗ್ರಂಥಾಲಯ ಚಟುವಟಿಕೆ ಮಕ್ಕಳಿಗೆ ಆಸಕ್ತಿದಾಯಕವಾಗಿ ಮಾಡಲು ಪ್ರಯತ್ನಿಸುವುದು.

9.ಶಾಲಾವಾರು ಖರೀದಿಸಿರುವ ಪುಸ್ತಕಗಳ ಮಾಹಿತಿ ವಾಸ್ತವ ಖರ್ಚು ವೆಚ್ಚದ ವಿವರಗಳು ಹಾಗೂ ಪುಸ್ತಕ ಗಳನ್ನು ಬಳಸುವ ಬಗ್ಗೆ ಮಾಹಿತಿಯನ್ನು ಉಪನಿರ್ದೇಶಕರುಗಳು ಪಡೆದುಕೊಳ್ಳುವುದು.

10. ಸದರಿ ಕಾರ್ಯಕ್ರಮದಡಿ ಹೊರಡಿಸಲಾದ ನಿಯಮಗಳನ್ನು ಕಟ್ಟು ಹಿಟ್ಟಾಗಿ ಪಾಲಿಸತಕ್ಕದ್ದು.

11. ಖರೀದಿ ಪ್ರಕ್ರಿಯೆ ನಂತರ ಉಪಯೋಗಿತ ಪ್ರಮಾಣ ಪತ್ರಗಳನ್ನು ಶಾಲೆಯ ಉಪನಿರ್ದೇಶಕರುಗಳ ಕಚೇರಿಗೆ ತಲುಪಿಸತಕ್ಕದ್ದು.

12. ಜಿಲ್ಲಾ ಉಪ ನಿರ್ದೇಶಕರುಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಿಂದ ಬಂದಂತಹ ಉಪಯೋಗಿತ ಪ್ರಮಾಣ ಪತ್ರಗಳನ್ನು ರಾಜ್ಯ ಕಚೇರಿಗೆ ತಲುಪಿಸುವುದು.

WhatsApp Group Join Now
Telegram Group Join Now
Sharing Is Caring:

Leave a Comment